More

    ಭಗವಂತನಿAದ ಸನ್ಮಾರ್ಗದ ಬದುಕು ನಿಶ್ಚಿತ

    ಸಾಗರ: ಬರೆ ಪ್ರಾಸವನ್ನು ಜೋಡಿಸಿ ಪದಗಳ ಕಸರತ್ತಿನಿಂದ ರಚಿಸಿದ ಹಾಡುಗಳನ್ನು ಪರಮಾತ್ಮ ಸ್ವೀಕರಿಸುವುದಿಲ್ಲ. ಅದರಲ್ಲಿ ಅವನ ಮಹಿಮೆಯನ್ನು ಕೊಂಡಾಡುವ ವಿಚಾರಗಳು ಇರಬೇಕು ಎಂದು ಉತ್ತರಾಽ ಮಠದ ಶ್ರೀ ಸತ್ಯಾತ್ಮತೀರ್ಥ ಪಾದಂಗಳವರು ಹೇಳಿದರು.
    ಸಾಗರ ಮಧ್ವ ಸಂಘಕ್ಕೆ ಬುಧವಾರ ರಾತ್ರಿ ಭೇಟಿ ನೀಡಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಾರವಿಲ್ಲದ ಯಾವುದೇ ವಿಚಾರಗಳನ್ನು ಪರಮಾತ್ಮ ಸ್ವೀಕರಿಸುವುದಿಲ್ಲ. ಯಾರಿಗು ಉಪಕಾರ ಮಾಡುವಾಗ ನಮಗೆ ಅವರಿಂದ ಉಪಕಾರವಾಗಬೇಕು ಎಂದು ಆಲೋಚಿಸಿದರೆ ಯಾವುದೇ ಕಾರಣಕ್ಕೂ ಪುಣ್ಯ ಸಿಗುವುದಿಲ್ಲ. ನಮ್ಮ ಸೇವೆ ನಮ್ಮ ಭಕ್ತಿ ಎಂದಿಗೂ ಆಡಂಬರದಿAದ ಕೂಡಿರಬಾರದು ಎಂದರು.
    ಸಾಗರ ಎಂದರೆ ಅದು ಸಮುದ್ರ. ಅಲ್ಲಿ ಎಲ್ಲ ರೀತಿಯ ಜಲಚರ ಪ್ರಾಣಿಗಳಿವೆ. ತಿಮಿಂಗಿಲಗಳೂ ಇವೆ. ಮುತ್ತು ರತ್ನಗಳಿವೆ. ಪಾರಮಾರ್ಥದ ದೃಷ್ಟಿಯಿಂದ ಆಯ್ಕೆ ನಮ್ಮದಾಗಬೇಕು. ಪರಮಾತ್ಮ ಯಾವಾಗಲೂ ಒಂದೇ ರೀತಿಯಲ್ಲಿ ಇರುತ್ತಾನೆ. ಅವನಲ್ಲಿ ಯಾವುದೇ ಏರುಪೇರುಗಳಾಗಲಿ ಬದಲಾವಣೆಗಳಾಗಲಿ ಇರುವುದಿಲ್ಲ. ಅಂತಹ ವಿಚಾರಗಳೇನಿದ್ದರೂ ಮಾನವರಿಗೆ ಸಂಬAಧಪಟ್ಟಿರುತ್ತದೆ. ಸದಾ ಪರಮಾತ್ಮನನ್ನು ಪೂಜಿಸುವ ಆತನ ಲೀಲೆಯನ್ನು ಕೊಂಡಾಸಿದರೆ ಸನ್ಮಾರ್ಗದಲ್ಲಿ ಬದುಕು ನಡೆಯುವುದು ನಿಶ್ಚಿತ ಎಂದರು
    ಸಾಗರದಲ್ಲಿ ಮಧ್ವ ಸಂಘ ನಡೆಸುತ್ತಿರುವ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಪಂಡಿತ್ ಕೃಷ್ಣಾಚಾರ್ ಮಣ್ಣೂರ್ ಮಾತನಾಡಿದರು. ಶ್ರೀಮಠ ಮತ್ತು ಭಕ್ತರ ಸಂಬAಧ ಕುರಿತಂತೆ ಪಂಡಿತ್ ಬಾಳಗಾರು ಜಯತೀರ್ಥಾಚಾರ್ ಮಾತನಾಡಿದರು. ಮಧ್ವ ಸಂಘದಿAದ ಶ್ರೀಗಳಿಗೆ -Àಲ ಸಮರ್ಪಣೆ ಮಾಡಲಾಯಿತು.
    ಸಂಘದ ಉಪಾಧ್ಯಕ್ಷ ವೆಂಕಟೇಶ್ ಕಟ್ಟಿ, ಬದ್ರಿನಾಥ್, ಆನಂದ್ ಕಲ್ಯಾಣಿ, ಶಿರಿಷಾಚಾರ್, ಪ್ರಾಣೇಶ್ ಆಚಾರ್, ಮೋಹನ್, ಸುಽÃಂದ್ರ, ನಾಗಭೂಷಣ್, ರಮಾಮಣಿ, ಶ್ರೀಧರ್, ಮಂಜುಳಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts