More

    ಕಾಗೋಡು ಹೋರಾಟ ಮೊದಲ ರೈತ ಚಳವಳಿ

    ತ್ಯಾಗರ್ತಿ: ಭೂ ಸುಧಾರಣಾ ಕಾಯ್ದೆಗಾಗಿ ಮಾಡಿದ ಹೋರಾಟ ಭೂ ಮಾಲೀಕರ ವಿರುದ್ಧ ಅಲ್ಲ, ಅದು ವ್ಯವಸ್ಥೆ ವಿರುದ್ಧ ನಡೆದ ಹೋರಾಟ ಎಂದು ಹಿರಿಯ ಸಮಾಜವಾದಿ ಹೋರಾಟಗಾರ ಬಿ.ಆರ್.ಜಯಂತ್ ಹೇಳಿದರು.

    ಪಟ್ಟಣದಲ್ಲಿ ಶುಕ್ರವಾರ ಶಿವಮೊಗ್ಗ ಜಿಲ್ಲಾ ರೈತ ಸಂಘ ಸಾಗರ ತಾಲೂಕು ಘಟಕದಿಂದ ಆಯೋಜಿಸಿದ್ದ ಭೂ ಸುಧಾರಣಾ ಕಾಯ್ದೆಗೆ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಿ ಮಾತನಾಡಿದರು.
    ಕಾಗೋಡು ಹೋರಾಟ ರಾಜ್ಯದಲ್ಲಿ ನಡೆದ ಮೊದಲ ರೈತ ಚಳವಳಿ. 1952ರಲ್ಲಿ ಮೊದಲ ಬಾರಿಗೆ ಗಣಪತಿಯಪ್ಪ ಅವರು ಭೂಮಿ ಹಕ್ಕಿಗಾಗಿ ಹೋರಾಟದ ಕಿಚ್ಚು ಹಚ್ಚಿದರು. ಅದು ಬಹುದೊಡ್ಡ ಜ್ವಾಲೆಯಾಗಿ 1974ರಲ್ಲಿ ಕಾಯ್ದೆಯಾಗಿ ರೂಪುಗೊಂಡಿತು. ಈ ಕಾಯ್ದೆ ರೂಪುಗೊಳ್ಳಲು ಅಂದು ಚಳವಳಿ ನೇತೃತ್ವ ವಹಿಸಿದ್ದ ಕಾಗೋಡು ತಿಮ್ಮಪ್ಪ ಅವರು ಅಧಿಕಾರ ಸಿಕ್ಕಾಗ ಭೂಸುಧಾರಣೆ ಕಾಯ್ದೆಯಾಗಿ ಜಾರಿಗೆ ತಂದರು ಎಂದು ತಿಳಿಸಿದರು.
    ಈ ಕಾಯ್ದೆ ರೈತರ ನೆರವಿಗೆ ಬಂದಿದೆ. ಅತ್ಯಂತ ಸರಳವಾಗಿ ಭೂಮಿ ಸಿಗುವಂತೆ, ಯಾವುದೇ ಸಾಕ್ಷಿ ಕೇಳದೆ ಭೂಮಿ ಉಳುಮೆ ಮಾಡುವವನಿಗೇ ಮಾಲೀಕತ್ವ ನೀಡಲಾಗಿದೆ. ನಂತರ ಭೂ ಅಕ್ರಮ ಚಳುವಳಿಯೂ ನಡೆಯಿತು. ಇದರಿಂದ ಮುಂದೆ ಬಗರ್‌ಹುಕುಂ ಕಾಯೆ ್ದಜಾರಿಗೆ ಬಂದು ಸಾವಿರಾರು ಜನ ರೈತರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು
    ಭೂದಾನ ಚಳವಳಿಯಲ್ಲಿ ರೈತರಿಗೆ ಜಮೀನು ಬಿಟ್ಟು ಕೊಟ್ಟಿರರುವ ಕುಟುಂಬದ ಸದಸ್ಯ ಜಗದೀಶ್ ಒಡೆಯರ್ ಮಾತನಾಡಿ, ನಾವು ಏಳು ಹಳ್ಳಿಯಲ್ಲಿ ಜಮೀನು ಹೊಂದಿದ್ದು ಭೂಸುಧಾರಣಾ ಕಾಯ್ದೆಯಿಂದ ನಾವು ಜಮಿನು ಕಳೆದುಕೊಳ್ಳಲಿಲ್ಲ. ಬದಲಾಗಿ ನಾವು ರೈತರಿಗೆ ಬಿಟ್ಟುಕೊಟ್ಟಿದ್ದೇವೆ ಎಂದರು.
    ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಚುನಪ್ಪಾ ಪೂಜೇರಿ, ಹೊಯ್ಸಳ ಗಣಪತಿಯಪ್ಪ, ರಮೇಶ್ ಇ. ಕೆಳದಿ, ಸುರೇಶ್ ಪರಗನ್ನವರ್, ಮಹೇಶ್ ಸುಬೇದಾರ್, ಇಬ್ರಾಹಿಂ ಸಾಬ್, ಚಂದ್ರಪ್ಪ ಆಲಳ್ಳಿ, ಚಂದ್ರು ಪೂಜಾರಿ, ಕೃಷ್ಣಮೂರ್ತಿ ದಾಸನ್, ಸುರೇಶ್ ಹೊಯ್ಸಳ, ಸುರೇಶ್ ಬೆಳಂದೂರು, ರವಿಕುಮಾರ್, ವಸಂತ, ಲಕ್ಷ್ಮಣ ಕುಗ್ವೆ, ಹರೀಶ್ ಮಲ್ನಾಡ್, ಶಿವು ಮೈಲಾರಿಕೊಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts