More

    ಪ್ರಕರಣದ ತನಿಖೆ ತ್ವರಿತವಾಗಿ ಆಗಲಿ

    ಬೆಳಗಾವಿ: ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ. ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಸ್ವಾಗತಾರ್ಹ. ಆದರೆ, ಯಾವುದೇ ಪ್ರಕರಣದಲ್ಲಾಗಲಿ ಎಸ್‌ಐಟಿ ಅಧಿಕಾರಿಗಳು ವರದಿಯನ್ನಷ್ಟೇ ನೀಡುತ್ತಾರೆ. ಎಫ್‌ಐಆರ್ ದಾಖಲಾದರೆ ಮಾತ್ರ ಷಡ್ಯಂತ್ರ ಮಾಡಿದವರಿಗೆ ಶಿಕ್ಷೆ ನೀಡಲು ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

    ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಈ ಸಿಡಿ ಪ್ರಕರಣದಿಂದ ಜಾರಕಿಹೊಳಿ ಕುಟುಂಬದ ಗೌರವಕ್ಕೆ ಸ್ಪಲ್ಪಮಟ್ಟಿಗೆ ಧಕ್ಕೆ ಆಗಿರಬಹುದು. ಆದರೆ, ನಮ್ಮೊಡನೆ ಅಪಾರ ಬೆಂಬಲಿಗರು ಇದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಲಿ. ಆಗ ಎಲ್ಲವೂ ಸ್ಪಷ್ಟವಾಗಲಿದೆ ಎಂದರು. ನಾನು ನಿಡಗುಂದಿಗೆ ಸಂತ್ರಸ್ತ ಯುವತಿ ಹುಡುಕಿಕೊಂಡು ಹೆಲಿಕಾಪ್ಟರ್‌ನಲ್ಲಿ ಹೋಗಿದ್ದೆ ಎನ್ನುವುದು ಕೇವಲ ಊಹಾಪೋಹ ಎಂದು ಪ್ರಶ್ನೆಯೊಂದಕ್ಕೆ ಸತೀಶ ಉತ್ತರಿಸಿದರು. ಮಾಜಿ ಶಾಸಕ ಮಧು ಬಂಗಾರಪ್ಪ ಸೇರಿ ಅನೇಕರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲೂ ಅನೇಕ ಮುಖಂಡರು ಪಕ್ಷ ಸೇರಲಿದ್ದಾರೆ. ಪಕ್ಷಕ್ಕೆ ಬರುವವರನ್ನು ಸೇರಿಸಿಕೊಳ್ಳಲು ಎಲ್ಲ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ ಎಂದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ಘೋಷಣೆ ವಿಳಂಬಕ್ಕೆ ಕೆಲ ಮುಖಂಡರು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಸರಿ ಇದೆ. ಆದರೆ, ಚುನಾವಣೆ ನಡೆಸಲು ಏಪ್ರಿಲ್ ಕೊನೆಯ ವಾರದವರೆಗೂ ಅವಕಾಶವಿದೆ. ಹಾಗಾಗಿ, ದಿನಾಂಕ ಪ್ರಕಟವಾದ ನಂತರವೇ ಕಾಂಗ್ರೆಸ್‌ನಿಂದ ಅಭ್ಯರ್ಥಿ ಘೋಷಿಸಲಾಗುವುದು ಎಂದು ಸತೀಶ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts