More

    ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಸುವ ಅವಧಿ ವಿಸ್ತರಣೆ, ಕರೊನಾ ವಿರುದ್ಧ ಹೋರಾಟಕ್ಕೆ ಶೀಘ್ರವೇ ಆರ್ಥಿಕ ಪ್ಯಾಕೇಜ್​

    ನವದೆಹಲಿ: ಜಾಗತಿಕ ಸಾಂಕ್ರಾಮಿಕವೆನಿಸಿಕೊಂಡ ಕರೊನಾ ವೈರಸ್​ ತುರ್ತು ಪರಿಸ್ಥಿತಿಯನ್ನು ತಂದೊಡ್ಡಿದೆ. ಜಾಗತಿಕವಾಗಿಯೇ ಆರ್ಥಿಕತೆ ಕುಸಿಯುತ್ತಿದೆ. ಅದಕ್ಕೆ ಭಾರತವೂ ಹೊರತಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲೆಡೆ ಲಾಕ್​ಡೌನ್​ ಆಗಿದೆ. ಮನೆಯಿಂದ ಹೊರಬರಬೇಡಿ ಎಂದು ಸರ್ಕಾರಗಳೇ ಹೇಳುತ್ತಿವೆ.

    ಈ ಮಧ್ಯೆ 2018-19ನೇ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಸುವ ದಿನಾಂಕವನ್ನು 2020ರ ಜೂನ್​ 30ರವರೆಗೆ ವಿಸ್ತರಿಸಲಾಗಿದೆ.

    ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್​ ಅವರು, ತೆರಿಗೆ ರಿಟರ್ನ್ಸ್​ ಅವಧಿಗೆ ಮಾ.31 ಕೊನೇ ದಿನವಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದನ್ನು ವಿಸ್ತರಣೆ ಮಾಡುವುದು ಅಗತ್ಯ ಎಂದು ಹೇಳಿದ್ದಾರೆ.

    ಹಾಗೇ ಆದಾಯ ತೆರಿಗೆ ರಿಟರ್ನ್ಸ್​ ವಿಳಂಬದ ಮೇಲಿನ ಬಡ್ಡಿಯನ್ನು ಶೇ.12ರಿಂದ 9ಕ್ಕೆ ಕಡಿತಗೊಳಿಸಲಾಗಿದೆ. ಅಲ್ಲದೆ, ಪಾನ್​ ಕಾರ್ಡ್​ಗೆ ಆಧಾರ್​ ಲಿಂಕ್​ ಮಾಡುವ ದಿನಾಂಕವನ್ನು ಕೂಡ 2020ರ ಜೂನ್​ 30ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ.

    ಸಾಂಕ್ರಾಮಿಕ ರೋಗ ಕರೊನಾ ವೈರಸ್​ ಎದುರಿಸಲು ಅಗತ್ಯ ಆರ್ಥಿಕ ಪ್ಯಾಕೇಜ್​ನ್ನು ಕೇಂದ್ರ ಸರ್ಕಾರ ಶೀಘ್ರವೇ ಘೋಷಿಸಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ. ಅಲ್ಲದೆ, ಟಿಡಿಎಸ್​ ಠೇವಣಿ ವಿಳಂಬಕ್ಕಾಗಿ ಶೇ.18ರ ಬದಲು, ಶೇ.9 ರಷ್ಟು ಬಡ್ಡಿ ವಿಧಿಸಲಾಗುವುದು ಎಂದಿದ್ದಾರೆ. (ಏಜೆನ್ಸೀಸ್​)

    ಲಾಕ್​ ಡೌನ್​ ಮಾಡಿದಾಕ್ಷಣ ಕರೊನಾ ನಿರ್ಮೂಲನೆ ಸಾಧ್ಯವಿಲ್ಲ, ಇನ್ನೊಂದು ಕೆಲಸ ಮಾಡಲೇಬೇಕು: ವಿಶ್ವಸಂಸ್ಥೆ ತಜ್ಞರ ಎಚ್ಚರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts