More

    ಟಿಕೆಎಂ ಕಾರ್ವಿುಕರಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾನವ ಸರಪಳಿ

    ಬಿಡದಿ: ಟೊಯೋಟಾ ಕಿಲೋಸ್ಕರ್ ಮೋಟಾರ್ಸ್ (ಟಿಕೆಎಂ) ಸಂಸ್ಥೆ ಕಾರ್ವಿುಕರ ಸಮಸ್ಯೆ ಬಗೆಹರಿಸುವಂತೆ ಸರ್ಕಾರದ ಗಮನ ಸೆಳೆಯಲು ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆ ಅಂಚಿನಲ್ಲಿ ಕಾರ್ವಿುಕರು ಮಾನವ ಸರಪಳಿ ರಚಿಸಿ ಮೂರು ಗಂಟೆಗಳ ಕಾಲ ಪ್ರತಿಭಟಿಸಿದರು.

    ಬಿಡದಿ ಪಟ್ಟಣದಿಂದ ಬೈರಮಂಗಲ ಸರ್ಕಲ್ ಮೂಲಕ ಕಾಡುಮನೆ ವೃತ್ತದವರೆಗೆ ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ 12 ಗಂಟೆವರೆಗೆ ರಸ್ತೆ ಬದಿಯಲ್ಲಿ ನಿಂತ ಪ್ರತಿಭಟನಾಕಾರರು, ಟಿಕೆಎಂ ಆಡಳಿತ ಮಂಡಳಿ ಕಾರ್ವಿುಕ ವಿರೋಧಿನೀತಿ ಅನುಸರಿಸುತ್ತಿದೆ ಎಂಬ ಫಲಕಗಳನ್ನು ಹಿಡಿದು ಕರಪತ್ರ ವಿತರಿಸಿದರು.

    ಮುಷ್ಕರ ಆರಂಭವಾಗಿ 47ನೇ ದಿನಗಳಾದರೂ ಸಮಸ್ಯೆ ಬಗೆಹರಿಸಲು ಸರ್ಕಾರ ಗಂಭೀರವಾಗಿ ಪ್ರಯತ್ನ ಮಾಡಿಲ್ಲ. ಇದರಿಂದ ಕಾರ್ವಿುಕರ ಸಮಸ್ಯೆ ಸಮಸ್ಯೆಯಾಗಿಯೆ ಉಳಿದಿದೆ. ಹಾಗೂ ಕಾಮಿಕರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಸಾರ್ವಜನಿಕರಿಗೆ ತಿಳಿಸುವುದು ನಮ್ಮ ಉದ್ದೇಶವಾಗಿದೆ. ಕೂಡಲೇ ಸರ್ಕಾರ ಮತ್ತು ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂಬುದು ಕಾರ್ವಿುಕರ ಆಶಯವಾಗಿದೆ.

    ಇದುವರೆಗೆ ಟಿಕೆಎಂ ಕಾರ್ವಿುಕರು ಶಾಂತಿಯುತವಾಗಿ ಬೈರಮಂಗಲ ಕ್ರಾಸ್​ನಿಂದ ಕಂಪನಿವರೆಗೆ ಪಾದಯಾತ್ರೆ, ಛತ್ರಿ ಚಳವಳಿ, ಜಿಲ್ಲಾಡಳಿತಕ್ಕೆ ಮುತ್ತಿಗೆ ಹಾಕಿ ಮನವಿ ಸಲ್ಲಿಕೆ, ಪದಾಧಿಕಾರಿಗಳ ಉಪವಾಸ ಸತ್ಯಾಗ್ರಹ, ಹೆದ್ದಾರಿ ಬದಿಯಲ್ಲಿ ನಿಂತು ಪ್ರತಿಭಟನೆ ನಡೆಸಿದೆ. ಆದರೂ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts