More

    ತವರಿನ ಸನ್ಮಾನಕ್ಕೆ ಬೆಲೆ ಕಟ್ಟಲಾಗದು

    ಕಿಕ್ಕೇರಿ: ಕಿಕ್ಕೇರಿ ಕೀರ್ತಿಯನ್ನು ವಿಶ್ವದಗಲಕ್ಕೂ ಪಸರಿಸುತ್ತಿರುವ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಕನ್ನಡ ನಾಡಿನ ಅಸ್ತಿ ಎಂದು ಕೆಪಿಸಿಸಿ ಸದಸ್ಯ ಸುರೇಶ್ ಅಭಿಪ್ರಾಯಪಟ್ಟರು.

    ಪಟ್ಟಣದಲ್ಲಿ ಗ್ರಾಮ ಮುಖಂಡರು ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಸಿಂಗಾಪುರದಲ್ಲಿ ನಡೆಯಲಿರುವ 2ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತವರಿನ ಸನ್ಮಾನ ನೀಡಿ ಮಾತನಾಡಿದರು.ಪಟ್ಟಣವು ಸಾಹಿತ್ಯಿಕ ನೆಲಗಟ್ಟಿನಲ್ಲಿದೆ. ಮೈಸೂರು ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ನಮ್ಮೂರಿನ ಹೆಮ್ಮೆಯಾಗಿದ್ದು, ಇವರಂತೆ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅವರೂ ಕೀರ್ತಿ ಹೊಂದಲಿ ಎಂದು ಆಶಿಸಿದರು.

    ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ತವರಿನ ಸನ್ಮಾನಕ್ಕೆ ಬೆಲೆ ಕಟ್ಟಲಾಗದು. 50ಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಪಡೆದ ಪ್ರಶಸ್ತಿಗಿಂತ ಬಲುದೊಡ್ಡ ಸನ್ಮಾನ ನನ್ನೂರಿನ ಜನತೆ ನೀಡಿದ ಗೌರವ. ನನ್ನ ಹೆಸರಿನಲ್ಲಿ ಹೃದಯದಲ್ಲಿಯೇ ಕಿಕ್ಕೇರಿ ಇದೆ. ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಮೊದಲು ಸ್ಮರಿಸುವುದು ನನ್ನೂರು. ಒಲವಿನ ಕವಿ ಕೆ.ಎಸ್.ನರಸಿಂಹಸ್ವಾಮಿ ಕವಿತೆಯನ್ನು ಸಿ.ಅಶ್ವತ್ಥ್ ಸ್ಮರಣೆಯಲ್ಲಿ ಹಾಡಲು ಬಲು ಖುಷಿ ಇದೆ. ಗಾಯಕನಾದ ನನಗೆ ರಾಗದ್ವೇಷ, ಜಾತಿ, ಮತ, ಪಂಥವಿಲ್ಲ.ನನಗೆೆ ಗೊತ್ತಿರುವುದು ಒಂದೇ ಅದು ಕನ್ನಡ ನಾಡು, ನುಡಿ, ಸುಗಮ ಸಂಗೀತ ಎಂದು ಭಾವಪರವಶರಾಗಿ ನುಡಿದರು.

    ಅರ್ಚಕ ರಂಗರಾಜು, ನಿವೃತ್ತ ಪ್ರಾಂಶುಪಾಲ ಚಂದ್ರಮೋಹನ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಪುಷ್ಪಲತಾ ಕೃಷ್ಣಮೂರ್ತಿ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಕೆಪಿಸಿಸಿ ಸದಸ್ಯ ಸುರೇಶ್, ಮುಖಂಡರಾದ ಚಂದ್ರಮೋಹನ್, ಜಾಣೇಗೌಡ, ಅರ್ಚಕ ರಂಗರಾಜು, ಕೃಷ್ಣ, ಮಹದೇವು, ರಾಯಲ್ ನಾಗರಾಜು, ಸಣ್ಣಪ್ಪ, ಲೋಕೇಶ್, ಕುಮಾರಸ್ವಾಮಿ, ರಮೇಶ್, ಈಶ್ವರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts