More

    ಆಯುಷ್ಮಾನ್ ಭಾರತ್​ ಯೋಜನೆಯಡಿ ಕಳೆದೆರಡು ವರ್ಷಗಳಲ್ಲಿ ರಾಜ್ಯಗಳಿಗೆ ಬಿಡುಗಡೆಯಾದ ಹಣ 3,500 ಕೋಟಿ ರೂಪಾಯಿ

    ನವದೆಹಲಿ: ಕೇಂದ್ರದ ಮಹತ್ವಾಕಾಂಕ್ಷಿ ಆರೋಗ್ಯ ಯೋಜನೆ ಆಯುಷ್ಮಾನ್​ ಭಾರತ್​ದಡಿ ರಾಜ್ಯಗಳಿಗೆ ಕಳೆದ ಎರಡು ವರ್ಷಗಳಲ್ಲಿ ಒಟ್ಟು 3,500 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್​ ಇಂದು ಸಂಸತ್ತಿನಲ್ಲಿ ತಿಳಿಸಿದರು.

    ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಒಟ್ಟು ಶೇ.20ರಷ್ಟು ಅರ್ಹಫಲಾನುಭವಿಗಳು ಇರುವ ಪಶ್ಚಿಮಬಂಗಾಳ, ತೆಲಂಗಾಣ, ಓಡಿಶಾ ಮತ್ತು ದೆಹಲಿ ರಾಜ್ಯಗಳು ಆಯುಷ್ಮಾನ್​ ಭಾರತ್​ ಆರೋಗ್ಯ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸದ ಕಾರಣ ಹಂಚಿಕೆಯಾದ ಹಣ ಬಳಕೆ ನಿಧಾನವಾಗುತ್ತಿದೆ ಎಂದು ಹರ್ಷವರ್ಧನ್​ ತಿಳಿಸಿದರು.

    ಪಂಜಾಬ್​ ಮತ್ತು ರಾಜಸ್ಥಾನಗಳು ಆಯುಷ್ಮಾನ್ ಭಾರತ್​ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು 2019ರ ಕೊನೆಯಲ್ಲಿ ಜಾರಿಗೊಳಿಸಿವೆ. ಮೊದಲ ಬಾರಿಗೆ ಆರೋಗ್ಯ ಯೋಜನೆ ಅನುಷ್ಠಾನಕ್ಕೆ ತಂದ ಶೇ.30 ಅರ್ಹ ಫಲಾನುಭವಿಗಳು ಇರುವ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರ್​ಗಳ ಬೇಡಿಕೆ ಇನ್ನಷ್ಟು ಹೆಚ್ಚುತ್ತಿದೆ. ಇದೆಲ್ಲ ಕಾಣಗಳಿಂದ ಹಣ ನಿಧಾನಗತಿಯಲ್ಲಿ ಬಳಕೆಯಾಗುತ್ತಿದೆ ಎಂದು ಹೇಳಿದರು.

    ಕಳೆದ 16 ತಿಂಗಳುಗಳಲ್ಲಿ ಯೋಜನೆಗೆ ಒಳಪಟ್ಟ ಪ್ರತಿ ಕುಟುಂಬದ ಸರಾಸರಿ ವಿಮಾ ಮೊತ್ತ 800 ರೂ.ಎಂದು ಗೊತ್ತಾಗಿದೆ. ಯೋಜನೆಯ ಪ್ರಾರಂಭದಲ್ಲಿ 1052 ರೂಪಾಯಿ ಎಂದು ಅಂದಾಜಿಸಲಾಗಿತ್ತು ಎಂದು ಸಚಿವರು ತಿಳಿಸಿದರು.(ಪಿಟಿಐ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts