More

    ಕುವೆಂಪು ವಾಕ್ಯ ತಿರುಚಿದ ಸರ್ಕಾರ ನಡೆ ಸರಿಯಲ್ಲ

    ರಾಯಚೂರು: ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣಾದಾಯಕವಾಗಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎನ್ನುವ ವಾಕ್ಯವನ್ನು ತಿರುಚಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಎಬಿವಿಪಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
    ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ವಿದ್ಯೆ ಕಲಿಯುವ ವಿದ್ಯಾರ್ಥಿಗಳಿಗೆ ಇರಬೇಕಾಗಿದ್ದು ಶ್ರದ್ಧೆ, ಜ್ಞಾನಕ್ಕೆ ಶರಣಾಗುವ ಗುಣ ಗುಲಾಮಿತನವಲ್ಲ. ಶಾಲೆಗೆ ಪ್ರವೇಶ ಪಡೆದಾಗಲೇ ಪ್ರಶ್ನಿಸುವುದು ಅಸಂಬದ್ಧವಾಗಿದೆ ಎಂದರು.
    ರಾಜ್ಯ ಸರ್ಕಾರ ಎಲ್ಲ ಶಾಲಾ ಕಾಲೇಜು ಮತ್ತು ವಿವಿಗಳಲ್ಲಿ ಕೆಲವೊಂದು ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಅೀನದಲ್ಲಿರುವ ಬರುವ ಶಾಲೆಗಳಲ್ಲಿ ಪರಂಪರೆಯಿಂದ ನಡೆದುಕೊಂಡು ಬಂದಿದ್ದ ಸರಸ್ವತಿ, ಗಣಪತಿ ಪೂಜೆ ಮಾಡುವುದನ್ನು ನಿಷೇಸಿ ಗೊಂದಲ ಸೃಷ್ಟಿಸಿತ್ತು.
    ಈಗ ಶಾಲೆಗಳ ಮುಂದಿದ್ದ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ ಎನ್ನುವ ಘೋಷ ವಾಕ್ಯವನ್ನು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಾವಣೆ ಮಾಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸಿದ್ಧಾಂತದ ರಾಜಕಾರಣ ಸೇರ್ಪಡೆ ಮಾಡಲು ಹೊರಟಿದೆ.
    ವಿದ್ಯಾರ್ಥಿ ಸಮುದಾಯ ಶಿಕ್ಷಣ, ದೇಶ, ರಾಷ್ಟ್ರೀಯತೆ, ಭಾರತೀಯ ಸಂಸ್ಕಾರ ವಿಚಾರದಡಿ ಮುಂದುವರಿಯಬೇಕೆ ಹೊರತು ಪಕ್ಷದ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರಲು ಹೊರಟಿರುವುದು ಶೋಚನೀಯ ಸಂಗತಿಯಾಗಿದೆ. ಕೂಡಲೇ ಸರ್ಕಾರ ತನ್ನ ತೀರ್ಮಾಣವನ್ನು ಹಿಂಪಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
    ಪ್ರತಿಭಟನೆಯಲ್ಲಿ ಸಂಘಟನೆ ನಗರ ಕಾರ್ಯದರ್ಶಿ ಭೀಮೇಶ ಸಾಗರ, ಪದಾಕಾರಿಗಳಾದ ಶಶಿವರ್ಧನ್, ಪ್ರಶಾಂತ, ಗಣೇಶ, ಶಿವಕುಮಾರ, ಮುಸ್ತಾ, ಗಂಗಾಧರ, ಶಾಂತಕುಮಾರ, ರಾಜೇಶ, ಹುಲಿಗೆಮ್ಮ, ದಿವ್ಯಾ, ರವಿಕುಮಾರ, ನವೀನ್, ಪವನಕುಮಾರ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts