More

    ಕಸ್ತೂರಿ ರಂಗನ್ ವರದಿಯೇ ಚುನಾವಣಾ ವಿಷಯ

    ತೀರ್ಥಹಳ್ಳಿ: ರೈತ ವಿರೋಧಿ ನೀತಿಯೊಂದಿಗೆ ಧರ್ಮದ ಆಧಾರದಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಜನವಿರೋಧಿ ನೀತಿಯೇ ಗ್ರಾಪಂ ಚುನಾವಣೆಯ ಮುಖ್ಯ ವಿಷಯ. ಕ್ಷೇತ್ರದಲ್ಲಿ ಎರಡು ಸುತ್ತಿನ ಪ್ರವಾಸ ನಡೆಸಿ ಪಕ್ಷ ಸಂಘಟಿಸಲಾಗಿದೆ. ಸ್ಥಳೀಯವಾಗಿ ಸಮಾನ ಮನಸ್ಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.

    ಈ ಬಾರಿ ಚುನಾವಣೆಯ ಬಹುಮುಖ್ಯ ವಿಚಾರವೇ ಕಸ್ತೂರಿ ರಂಗನ್ ವರದಿ. ಈ ವರದಿ ಯಥಾತ್ತಾಗಿ ಜಾರಿಯಾದರೆ ಈ ಭಾಗದ ಸಾವಿರಾರು ಕುಟುಂಬಗಳು ಬೀದಿ ಪಾಲಾಗುವುದು ಖಚಿತ. ಜನರ ನ್ಯಾಯುಯುತ ಬೇಡಿಕೆ ಹಾಗೂ ಪ್ರತಿಭಟನೆಗೆ ಸರ್ವಾಧಿಕಾರಿ ಧೋರಣೆಯ ಕೇಂದ್ರ ಸರ್ಕಾರದಲ್ಲಿ ಕವಡೆ ಕಾಸಿನ ಬೆಲೆ ಇಲ್ಲ ಎಂಬುದಕ್ಕೆ ದೆಹಲಿಯಲ್ಲಿನ ರೈತರ ಹೋರಾಟವೇ ಸಾಕ್ಷಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

    ಆಡಳಿತ ಪಕ್ಷದವರೇ ಈ ವರದಿಯನ್ನು ಮರಣ ಶಾಸನ ಎನ್ನುತ್ತಿದ್ದಾರೆ. ಆದರೂ ಈ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಈ ಚುನಾವಣೆಯ ಮೂಲಕ ಸರ್ಕಾರವನ್ನು ಎಚ್ಚರಿಸಬೇಕಿದೆ ಎಂದು ತಿಳಿಸಿದರು.

    ತಾಲೂಕಿನಲ್ಲಿ ವಿಲೇವಾರಿ ಆಗದಿರುವ 15 ಸಾವಿರಕ್ಕೂ ಅಧಿಕ ಬಗರ್​ಹುಕುಂ ಮತ್ತು 94ಸಿ ಅರ್ಜಿಗಳ ಬಗ್ಗೆ ಸರ್ಕಾರಕ್ಕೆ ಗಮನವೇ ಇಲ್ಲ. ಹೋಬಳಿ ಮಟ್ಟದಲ್ಲಿ ಬಗರ್​ಹುಕುಂ ಸಮಿತಿ ರಚನೆ ಆಗಬೇಕು. ರೈತರ ಮೇಲೆ ನಡೆದಿರುವ ಅರಣ್ಯ ಇಲಾಖೆಯವರ ದೌರ್ಜನ್ಯ ಕೇಳುವವರಿಲ್ಲ ಎಂಬುದಕ್ಕೆ ಕಂಕಳೆ ಹಾಗೂ ನೀರುಳ್ಳಿ ಗ್ರಾಮದಲ್ಲಿ 2 ವರ್ಷದ ಅಡಕೆ ಸಸಿಗಳನ್ನು ಕಿತ್ತೆಸೆದಿರುವುದೇ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇದೇ ಪ್ರವೃತ್ತಿಯನ್ನು ಮುಂದುವರಿಸಿದರೆ ಅರಣ್ಯ ಇಲಾಖೆ ನೀತಿ ವಿರುದ್ಧವೇ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.

    ಪಕ್ಷದ ತಾಲೂಕು ಅಧ್ಯಕ್ಷ ಟಿ.ಎಲ್.ಸುಂದರೇಶ್, ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಶಿಮುಲ್ ಅದ್ಯಕ್ಷ ವಿದ್ಯಾಧರ, ಹಾಲಗದ್ದೆ ಉಮೇಶ್, ಜೀನಾ ವಿಕ್ಟರ್, ಸುಷ್ಮಾ ಸಂಜಯ್, ಕಡಿದಾಳು ತಾರಾನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts