More

    ಅವಿರೋಧ ಆಯ್ಕೆ ಪ್ರಶ್ನಿಸಿ ಚುನಾವಣೆ ಆಯೋಗದ ಮೊರೆ

    ಶಿರಹಟ್ಟಿ: ತಾಲೂಕಿನ ಕೊಂಚಿಗೇರಿ ಗ್ರಾಪಂ ಒಂದನೇ ವಾರ್ಡ್​ನ ನೀಲಮ್ಮ ಮಲ್ಲಿಕಾರ್ಜುನ ಧೂಳಣ್ಣವರ ಅವಿರೋಧವಾಗಿ ಆಯ್ಕೆಯಾಗಿದ್ದನ್ನು ಪ್ರಶ್ನಿಸಿ ಮತ್ತೊಬ್ಬ ಅಭ್ಯರ್ಥಿ ದಾಕ್ಷಯಣಮ್ಮ ಶೇಖರಪ್ಪ ನಂದಗಾವಿ ಎಂಬುವವರು ಚುನಾವಣೆ ಆಯೋಗದ ಮೊರೆ ಹೋಗಿದ್ದಾರೆ.

    ಸಾಮಾನ್ಯ ಮಹಿಳೆಗೆ ಮೀಸಲಿರುವ 1ನೇ ವಾರ್ಡ್​ನಿಂದ ಸ್ಪರ್ಧೆಬಯಸಿ ದಾಕ್ಷಯಣಮ್ಮ ಹಾಗೂ ನೀಲಮ್ಮ ನಾಮಪತ್ರ ಸಲ್ಲಿಸಿದ್ದರು.

    ದಾಕ್ಷಾಯಣಮ್ಮ ಎಂಬುವವರು ನಾಮಪತ್ರ ಸಲ್ಲಿಸುವಾಗ ಮಹಿಳಾ ಮೀಸಲಾತಿ ಕುರಿತು ಸ್ಪಷ್ಟವಾಗಿ ಮಾಹಿತಿ ನೀಡಿಲ್ಲ. ಹೀಗಾಗಿ ನೀಲಮ್ಮ ಅವರನ್ನು ಅವಿರೋಧ ಆಯ್ಕೆ ಎಂದು ಪರಿಗಣಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಅಧಿಕಾರಿಗಳ ಮಾತನ್ನು ಅಲ್ಲಗಳೆದ ದಾಕ್ಷಾಯಣಮ್ಮ, ‘ನಾಮಪತ್ರ ಸಲ್ಲಿಸುವಾಗ ಎಲ್ಲವೂ ಕ್ರಮಬದ್ಧವಾಗಿಯೇ ಮಾಡಿದ್ದೇನೆ. ಅಧಿಕಾರಿಗಳು ಎಡವಟ್ಟು ಮಾಡಿದ್ದರಿಂದ ನನ್ನ ಎದುರಾಳಿ ಅವಿರೋಧವಾಗಿ ಆಯ್ಕೆಯಾಗುವಂತಾಯಿತು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ಚುನಾವಣೆಯನ್ನು ಮುಂದೂಡಬೇಕು’ ಎಂದು ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ಕೊಂಚಿಗೇರಿ ಗ್ರಾಪಂ 1ನೇ ವಾರ್ಡ್​ನ ಅಭ್ಯರ್ಥಿ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಚುನಾವಣೆ ಅಧಿಕಾರಿ ವಿರುದ್ಧ ದೂರು ನೀಡಿದ್ದಾರೆ. ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರಿಂದ ಅವರು ವಿಶೇಷ ಅಧಿಕಾರಿಯನ್ನು ನೇಮಿಸಿ ವಾಸ್ತವ ಸಂಗತಿ ತಿಳಿದುಕೊಂಡು, ಚುನಾವಣೆ ಅಧಿಕಾರಿಯಿಂದ ಸಮಗ್ರ ಮಾಹಿತಿ ಪಡೆದು ಅಭ್ಯರ್ಥಿಗೆ ಹಿಂಬರಹ ರೂಪದಲ್ಲಿ ಉತ್ತರ ನೀಡಿದ್ದಾರೆ. ಆದರೂ ದಾಕ್ಷಾಯಣಮ್ಮ ಅವರು ರಾಜ್ಯ ಚುನಾವಣೆ ಆಯುಕ್ತರ ಮೊರೆ ಹೋಗಿದ್ದಾಗಿ ತಿಳಿದು ಬಂದಿದೆ. ಕಾದು ನೋಡೋಣ. ಆದರೆ, ಚುನಾವಣೆ ಪ್ರಕ್ರಿಯ ನಡೆಯುತ್ತದೆ.

    | ಯಲ್ಲಪ್ಪ ಗೋಣೆಣ್ಣವರ, ಶಿರಹಟ್ಟಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts