More

    ಹಿರಿಯರೇ ಯುವ ಜನಾಂಗಕ್ಕೆ ಮಾದರಿಯಾಗಿ

    ಎನ್.ಆರ್.ಪುರ: ಸರ್ಕಾರ ಹಿರಿಯ ನಾಗರಿಕರಿಗಾಗಿ ಹಲವಾರು ಮೀಸಲಾತಿ, ವಿನಾಯಿತಿಗಳನ್ನು ಗೌರವ ಪೂರ್ವಕವಾಗಿ ನೀಡುತ್ತಿದೆ ಎಂದು ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ಹೇಳಿದರು.
    ಪಟ್ಟಣದ ಅಗ್ರಹಾರದ ಶ್ರೀ ಉಮಾಮಹೇಶ್ವರ ಸಮುದಾಯ ಭವನದಲ್ಲಿ ಹಿರಿಯ ನಾಗರಿಕ ಸಮಿತಿ, ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲೂಕು ವಕೀಲರ ಸಂಘ ಮತ್ತು ರಾಜ್ಯ ಸರ್ಕಾರಿ ನಿವತ್ತ ನೌಕರರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಹಿರಿಯ ನಾಗರಿಕರು ಯುವ ಜನಾಂಗಕ್ಕೆ ಮಾದರಿಯಾಗಿರಬೇಕು. ಏಕೆಂದರೆ ಅವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡವರು. ಅಂತಹವರು ಯುವ ಜನಾಂಗಕ್ಕೆ ದಾರಿ ದೀಪವಾಗಿ, ಅವರಿಗೆ ಸೂಕ್ತ ಮಾರ್ಗದರ್ಶಕರಾಗಬೇಕು. ವೃದ್ಧಾಶ್ರಮಗಳಿಗೆ ಕಾನೂನಿ ನಡಿ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಕಾನೂನನಿನ ಕಟು ್ಟ ಪಾಡುಗಳನ್ನು ಒಳಪಡಿಸಿ ಅವರನ್ನು ಸಂರಕ್ಷಿಸುವ ಕಾರ್ಯವಾಗುತ್ತಿದೆ ಎಂದರು.
    ವಕೀಲ ಸಾಜು ಮಾತನಾಡಿ, ಮಕ್ಕಳು ತಮ್ಮ ತಂದೆ ತಾಯಿರನ್ನು ಕೊನೆಗಾಲದಲ್ಲಿ ನಿರ್ಲಕ್ಷೃವಹಿಸಬರದು ಎಂಬ ಸದುದ್ದೇಶದಿಂದ ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ ರಚಿಸಲಾಯಿತು.ವೃದ್ಧಪ್ಯದಲ್ಲಿ ಮಕ್ಕಳಿಗೆ ತಮ್ಮ ಪಾಲಕರು ಬೇಡವಾಗುತ್ತಾರೆ ಆದರೆ ಅದೇ ಅವರು ಮಾಡಿಟ್ಟ ಆಸ್ತಿ ಮಾತ್ರ ಬೇಕು. ಪ್ರಸ್ತುತ ದಿನಗಳಲ್ಲಿ ಪಾಲಕರನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವುದು ಅತೀ ಹೆಚ್ಚು ವಿದ್ಯಾವಂತರೇ ಆಗಿದ್ದಾರೆ. ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಹಗಲಿರುಳು ದುಡಿದು, ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವಂತಹ ಪಾಲಕರು ನಿಜಕ್ಕೂ ನಿಜವಾದ ಹೀರೋಗಳು. ಮಕ್ಕಳು ತಮ್ಮ ತಂದೆ ತಾಯಿಯಂದಿರನ್ನು ಅತ್ಯಂತ ಗೌರವದಿಂದ, ಪ್ರೀತಿಯಿಂದ ನೋಡಿಕೊಳ್ಳಬೇಕೆಂದರು.
    ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್ ಮಾತನಾಡಿ, ಹಿರಿಯ ನಾಗರಿಕರು ಕಿರಿಯ ನಾಗರಿಕರಿಗೆ ಮಾರ್ಗದರ್ಶಕರಿದ್ದಂತೆ. ಅವರಿಗೆ ನೈತಿಕ ಹಕ್ಕುಗಳನ್ನು ಉಣಬಡಿಸುವವರು. ಹಿರಿಯ ನಾಗರಿಕರು ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ ಎಂದರು.
    ತಾಲೂಕು ಹಿರಿಯ ನಾಗರಿಕ ಸಮಿತಿ ಅಧ್ಯಕ್ಷ ಬಿ.ಕೆ.ಜಾನಕೀರಾಂ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಆರ್.ಸುನಂದಾ, ಟಿ.ಎಂ.ಕುಮಾರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts