More

    ವೈದ್ಯರ ನಡಿಗೆ ಹಳ್ಳಿಯ ಕಡೆಗೆ

    ಹಾವೇರಿ: ಗ್ರಾಮಗಳ ಜನರ ಕೋವಿಡ್ ತಪಾಸಣೆಗೆ ಸರ್ಕಾರವು ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಅಭಿಯಾನ ರೂಪಿಸಿದೆ. ಮಂಗಳವಾರದಿಂದ ಕಾರ್ಯಕ್ರಮ ಆರಂಭಗೊಂಡಿದೆ. ಹಳ್ಳಿ ಜನರಲ್ಲಿ ಸೋಂಕು ತಡೆಯುವ ನಿಟ್ಟಿನಲ್ಲಿ ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್​ವೆುಂಟ್​ಗೆ ಅಗತ್ಯ ಕ್ರಮ ವಹಿಸುವಂತೆ ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು.
    ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಕುರಿತು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವೈದ್ಯಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಅಭಿಯಾನ ಕುರಿತು ಗ್ರಾಮಗಳಲ್ಲಿ ಪೂರ್ವ ಮಾಹಿತಿ ನೀಡಬೇಕು. ವೈದ್ಯರು, ಆರೋಗ್ಯ ಸಿಬ್ಬಂದಿ ಪ್ರತಿ ಮನೆಗೆ ಭೇಟಿ ನೀಡಿ, ತಪಾಸಣೆ ನಡೆಸಿ ಸೋಂಕಿನ ಲಕ್ಷಣವಿದ್ದರೆ ಟೆಸ್ಟ್ ಮಾಡಿಸಬೇಕು. ಪಾಸಿಟಿವ್ ಇದ್ದರೆ ಟ್ರೇಸಿಂಗ್ ಮೂಲಕ ಕೋವಿಡ್ ಆರೈಕೆ ಕೇಂದ್ರ, ಲಕ್ಷಣಗಳು ಗಂಭೀರವಿದ್ದರೆ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಳ್ಳಬೇಕು ಎಂದರು. ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಮಾತನಾಡಿ, ತಪಾಸಣೆ ನಡೆಸಿ ಲಕ್ಷಣವಿದ್ದವರ ಗಂಟಲ ದ್ರವ ಮಾದರಿ ಪಡೆದು ಸಂಜೆಯೊಳಗೆ ಲ್ಯಾಬ್​ಗೆ ಕಳುಹಿಸಬೇಕು. ಮನೆ ಮನೆಗೆ ತಪಾಸಣೆಗೆ ತೆರಳುವಾಗ ಔಷಧ ತೆಗೆದುಕೊಂಡು ಹೋಗಬೇಕು. ಗ್ರಾಪಂ ಟಾಸ್ಕ್​ಫೋರ್ಸ್​ಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಔಷಧ ಕೊರತೆ ಇದ್ದರೆ ಬೇಡಿಕೆ ಸಲ್ಲಿಸಬೇಕು ಎಂದರು.
    ಸಿಇಒ ಮಹಮ್ಮದ್ ರೋಷನ್ ಮಾತನಾಡಿ, ಪ್ರಾಥಮಿಕ ಸಂರ್ಪತರನ್ನು ಆರ್​ಟಿಪಿಸಿಆರ್, ದ್ವಿತೀಯ ಸಂರ್ಪತ ಎಲ್ಲರನ್ನು ರ್ಯಾಪಿಡ್ ಟೆಸ್ಟ್​ಗೆ ಒಳಪಡಿಸಬೇಕು. 10 ಸಾವಿರ ರ್ಯಾಪಿಡ್ ಕಿಟ್​ಗಳಿವೆ. ತ್ವರಿತವಾಗಿ ಪರೀಕ್ಷೆಗಳನ್ನು ನಡೆಸಬೇಕು ಎಂದರು.
    ಎಸ್ಪಿ ಕೆ.ಜಿ. ದೇವರಾಜ್, ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರ, ಎಸಿ ಶಿವಾನಂದ ಉಳ್ಳಾಗಡ್ಡಿ, ತಹಸೀಲ್ದಾರ್ ಗಿರೀಶ ಸ್ವಾದಿ, ಡಾ. ಎಂ. ಜಯಾನಂದ, ಡಾ. ನಿಲೇಶ, ಡಾ. ಜಗದೀಶ, ತಾಲೂಕು ವೈದ್ಯಾಧಿಕಾರಿಗಳು ಇದ್ದರು.
    ಪ್ರತಿ ಗ್ರಾಮದಲ್ಲಿ ಜನಜಾಗೃತಿ: ಗ್ರಾಮೀಣ ಪ್ರದೇಶದಲ್ಲಿ ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೈದ್ಯರ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಗ್ರಾಮಸ್ಥರಲ್ಲಿ ಆತ್ಮಸ್ಥೈರ್ಯ ತುಂಬಲಾಗುತ್ತಿದೆ ಎಂದು ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಹೇಳಿದರು.
    ಸವಣೂರ ತಾಲೂಕಿನ ಗುಂಡೂರ ಗ್ರಾಮದಲ್ಲಿ ವೈದ್ಯರ ನಡೆ ಹಳ್ಳಿ ಕಡೆ ಹಾಗೂ ಜಾಗೃತಿ ಜಾಥಾಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ಅಂದಾಜು 1,84,000 ಜನಸಂಖ್ಯೆ ಹೊಂದಿರುವ ತಾಲೂಕಿನ ಪ್ರತಿ ಗ್ರಾಮದಲ್ಲಿ ಕರೊನಾ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ತಾಲೂಕಿನ 64 ಗ್ರಾಮಗಳ ಪೈಕಿ 29 ಗ್ರಾಮಗಳಲ್ಲಿ ಕೋವಿಡ್ ಹೆಚ್ಚಿನ ಪ್ರಮಾಣದಲ್ಲಿದೆ. ಯಲವಿಗಿ, ಹೆಸರೂರ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿತ್ತು. ಈಗ ಪ್ರಕರಣಗಳು ಕಡಿಮೆಯಾಗಿವೆ. ಸಾರ್ವಜನಿಕರು ಸಹಕಾರ ನೀಡಿದರೆ ಮಾತ್ರ ಕರೊನಾ ವಿರುದ್ಧ ಹೋರಾಡಲು ಸಾಧ್ಯವಾಗಲಿದೆ. ಗ್ರಾಮೀಣ ಪ್ರದೇಶದ ಜನರು ಹೆಚ್ಚಿನ ಜಾಗೃತಿ ಹೊಂದಬೇಕು. ರೋಗ ಉಲ್ಬಣಗೊಳ್ಳುವ ಮೊದಲು ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದರು. ಟಿಎಚ್​ಒ ಡಾ. ಚಂದ್ರಕಲಾ ಜೆ. ಮಾತನಾಡಿ, ಕರೊನಾ ಕೇಸ್ ಕಂಡು ಬಂದಿರುವ ಗ್ರಾಮದಲ್ಲಿ ರಾಸಾಯನಿಕ ದ್ರಾವಣ ಸಿಂಪಡಣೆ ಸೇರಿದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರೊನಾ ರೋಗಿಗಳ ಕುಟುಂಬಸ್ಥರ ಹಾಗೂ ಅಕ್ಕಪಕ್ಕದ ಮನೆಯವರಿಗೆ ಸ್ವ್ಯಾಬ್ ಟೆಸ್ಟ್ ಮಾಡಲಾಗುತ್ತಿದೆ ಎಂದರು.
    ಗ್ರಾಪಂ ಅಧ್ಯಕ್ಷ ಗಿರೀಶಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ಚಿದಾನಂದ ಬಡಿಗೇರ, ವೈದ್ಯರಾದ ಡಾ. ಶಿಲ್ಪಾ ಬಾಗದ, ಶ್ರೀಧರ ದಳವಗಿ, ಸಿಡಿಪಿಒ ಅಣ್ಣಪ್ಪ ಹೆಗಡೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಫ್. ಹನಕನಹಳ್ಳಿ, ಆರೋಗ್ಯ ಹಿರಿಯ ಸಹಾಯಕ ಪಿ.ಎಲ್.ಪೂಜಾರ, ಆರೋಗ್ಯ ಸಹಾಯಕಿ ಪ್ರೇಮಾ ಚಳ್ಳಾಳ, ಆರೋಗ್ಯ ಮೇಲ್ವಿಚಾರಕ ವಿ.ಎಂ. ಕೋಷ್ಠಿ, ಆಶಾ ಕಾರ್ಯಕರ್ತೆ ಯಲ್ಲಮ್ಮ ಬಾಳಂಬೀಡ, ಲ್ಯಾಬ್ ಟೆಕ್ನಿಶಿಯನ್ ಜಯಸುಧಾ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts