More

    ಶಿಕ್ಷಣದ ವೌಲ್ಯ ಕಡಿಮೆಯಾಗುತ್ತಿರುವುದು ಕಳವಳಕಾರಿ

    ರಾಯಚೂರು: ಪ್ರಸ್ತುತ ದಿನಮಾನದಲ್ಲಿ ಶಿಕ್ಷಣದ ವೌಲ್ಯ ಕಡಿಮೆಯಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದ್ದು, ಇಂತಹ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಕೃಷಿ ವಿಜ್ಞಾನಗಳ ವಿವಿಯ ಆಡಳಿತಾಕಾರಿ ಡಾ.ಜಾಗೃತಿ ದೇಶಮಾನೆ ಹೇಳಿದರು.
    ಸ್ಥಳೀಯ ನಂದಿನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಬುಧವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ವೌಲ್ಯಗಳಿಂದ ಜನರು ವಿಮುಖರಾಗುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ವೌಲ್ಯಗಳನ್ನು ತಿಳಿಸುವ ಕೆಲಸ ಮಾಡಬೇಕಾಗಿದೆ ಎಂದರು.
    ಡಿಜಿಟಲ್ ಯುಗದಲ್ಲಿ ನಮ್ಮ ಪಕ್ಕದಲ್ಲಿರುವವರಿಗೆ ಸಮಯ ಕೊಡುತ್ತಿಲ್ಲ. ಆದರೆ ದೂರದಲ್ಲಿರುವವರೊಂದಿಗೆ ಸಂವಹನ ಮಾಡುತ್ತಿದ್ದೇವೆ. ಶಿಕ್ಷಣ ಕ್ಷೇತ್ರ ಕೆಟ್ಟರೆ ಸಮಾಜವೇ ಅವನತಿಯತ್ತ ಸಾಗುತ್ತಿದ್ದು, ಅದನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ ಎಂದು ಹೇಳಿದರು.
    ದಾಸ ಸಾಹಿತ್ಯದ ನಿಲುವುಗಳ ಕುರಿತು ಸಾಹಿತಿ ಡಾ.ರಾಜಶ್ರೀ ಕಲ್ಲೂರಕರ್ ಮಾತನಾಡಿ, ಶರೀರದ ಬೆಳವಣಿಗೆಗೆ ಸಿಮೀತವಿದೆ. ಆದರೆ ಬುದ್ದಿ ಬೆಳವಣಿಗೆಗೆ ಸಿಮೀತ ಎಂಬುವುದಿಲ್ಲ. ಧಾರ್ಮಿಕ ಬೆಳವಣಿಗೆಯಲ್ಲಿ ಹುಟ್ಟಿ ಬಂದಿದ್ದು, ಶರಣ ಮತ್ತು ದಾಸ ಸಾಹಿತ್ಯಗಳಾಗಿವೆ.
    ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎನ್ನುವ ಭಾವನೆ ಶರಣರು, ದಾಸರಲ್ಲಿತ್ತು. ದಾಸರು ತಲೆಬಾಗಿದ್ದು ಭಗವಂತನಿಗೆ ಮಾತ್ರ. ಸಮಾಜದ ನೈರ್ಮಲೀಕರಣ ಮಾಡಲು ದಾಸರು ಪ್ರಯತ್ನಿಸಿದರು. ಸರಳ ಭಾಷೆಯಲ್ಲಿ ಜನರಿಗೆ ತಿಳಿ ಹೇಳುವ ಕೆಲಸವನ್ನು ಮಾಡಿದರು ಎಂದು ತಿಳಿಸಿದರು.
    ಉಪನ್ಯಾಸಮ ಹೇಮರೆಡ್ಡಿ ಪಾಟೀಲ್ ಶರಣ ಸಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ ಕುರಿತು ಮಾತನಾಡಿ, ಇಂದು ಮಹಿಳೆಯರು ಸ್ವಾವಲಂಬಿಗಳಾಗಿ ತಲೆ ಎತ್ತಿ ಬದುಕಲು ಕಾರಣವಾಗಿರುವುದು ಶರಣರಿಂದ ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರಗಳನ್ನು ತೊಲಗಿಸುವ ಕೆಲಸವನ್ನು ಶರಣರು ಮಾಡಿದರು.
    ಶರಣರು ತಮ್ಮ ವಚನಗಳ ಜನರು, ಸಮಾಜವನ್ನು ಶುದ್ಧಿಗೊಳಿಸಲು ಪ್ರಯತ್ನಿಸಿದರು. ಆದರೂ ಇಂದಿಗೂ ಸಮಾಜ ಶುದ್ಧಿಯಾಗಿಲ್ಲ. ಶರಣರ ಜೀವನದ ಸಾರವನ್ನು ಅರಿತುಕೊಂಡು ನಾವು ಬದುಕಿದಾಗ ಮಾತ್ರ ಸಮಾಜವನ್ನು ಸುಧಾರಣೆ ಮಾಡಲು ಸಾಧ್ಯವಿದೆ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗೌರವ ಕಾರ್ಯದರ್ಶಿ ತಾಯಪ್ಪ ಹೊಸೂರು, ಕಾಲೇಜು ಪ್ರಾಚಾರ್ಯೆ ಅಲೀಸ್ ಜೋಸ್ೆ, ದತ್ತಿ ದಾನಿ ಡಾ.ಅಮೃತಾ ಜೋಷಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts