More

    ಸಾವಿರಾರು ಮೀನುಗಳ ಮಾರಣಹೋಮ

    ರಾಣೆಬೆನ್ನೂರ: ತುಂಗಭದ್ರಾ ನದಿಗೆ ಕೆಲ ಕಾರ್ಖಾನೆಗಳಿಂದ ಕಲುಷಿತ ನೀರು ಹರಿಬಿಟ್ಟ ಕಾರಣ ಸಾವಿರಾರು ಮೀನುಗಳು ಸತ್ತ ಘಟನೆ ಗುರುವಾರ ನಡೆದಿದೆ.

    ತಾಲೂಕಿನ ನದಿಹರಳಹಳ್ಳಿ, ಐರಣಿ, ಹಿರೇಬಿದರಿ, ಉದಗಟ್ಟಿ, ಮೇಡ್ಲೇರಿ, ಹರನಗಿರಿ ಸೇರಿ 15ಕ್ಕೂ ಅಧಿಕ ಗ್ರಾಮಗಳ ರೈತರು ತುಂಗಭದ್ರಾ ನದಿಯಲ್ಲಿ ಮೀನು ಕೃಷಿ ಮಾಡಿಕೊಂಡಿದ್ದರು. ಆದರೆ, ಕಾರ್ಖಾನೆಗಳಿಂದ ಕಲುಷಿತ ನೀರು ಹರಿಬಿಟ್ಟ ಕಾರಣ ಮೀನುಗಳು ಮೃತಪಟ್ಟಿವೆ. ಇದರಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ.

    ನದಿಪಾತ್ರದ ಗ್ರಾಮಗಳ ರೈತರು ಜಾನುವಾರುಗಳಿಗೆ ಇದೇ ನದಿಯ ನೀರನ್ನೇ ಕುಡಿಸುವುದು. ಆದರೀಗ ಜಾನುವಾರುಗಳಿಗೆ ನದಿ ನೀರು ಸಿಗದಾಗಿದೆ. ಬೋರ್​ವೆಲ್​ಗಳಿಂದ ಜಾನುವಾರುಗಳಿಗೆ ನೀರು ತಂದು ಹಾಕುವ ಪರಿಸ್ಥಿತಿ ನಿರ್ವಣವಾಗಿದೆ ಎಂಬುದು ರೈತರ ಅಳಲು. ತಹಸೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ನದಿಗೆ ಕಲುಷಿತ ನೀರು ಬಿಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಉದಗಟ್ಟಿ ಗ್ರಾಮದ ಮಂಜುನಾಥ ಜ್ಯೋತಿ ಸೇರಿ ಇತರ ರೈತರು ಒತ್ತಾಯಿಸಿದ್ದಾರೆ.

    ನದಿಗೆ ಕಲುಷಿತ ನೀರು ಹರಿಬಿಟ್ಟ ಕುರಿತು ಪರಿಶೀಲಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

    | ಶಂಕರ ಜಿ.ಎಸ್., ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts