More

    ಅಮೆರಿಕದಲ್ಲಿ ಶೂನ್ಯಕ್ಕಿಂತ ಕೆಳಗಿಳಿದ ಕಚ್ಚಾ ತೈಲ ದರ!

    ರೊನಾ ಕಾರಣ ಘೋಷಿಸ ಲಾಗಿರುವ ಲಾಕ್​ಡೌನ್​ನಿಂದಾಗಿ ತೈಲ ಬಳಕೆ ಪ್ರಮಾಣ ಕುಸಿದಿರುವುದರಿಂದ ಮತ್ತು ಇದೇ ವೇಳೆ ಕಚ್ಚಾತೈಲ ಪರಿಶೋಧನೆ (ಉತ್ಪಾದನೆ) ಹೆಚ್ಚಳವಾಗಿರುವುದರಿಂದ ಅಮೆರಿಕದ ತೈಲ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ದರ ಶೂನ್ಯಕ್ಕಿಂತ ಕೆಳಗೆ ಇಳಿದಿದೆ. ಅಮೆರಿಕದ ತೈಲ ಮಾರುಕಟ್ಟೆಯ ಮಾನದಂಡ ದರವಾದ ವೆಸ್ಟ್ ಟೆಕ್ಸಾಸ್ ಇಂಟರ್​ವಿುೕಡಿಯೆಟ್​ನ (ಡಬ್ಲ್ಯೂಟಿಇ) ಏಷ್ಯಾದ ಮಾರುಕಟ್ಟೆಯಲ್ಲಿ ಸೋಮವಾರ ಪ್ರತಿ ಬ್ಯಾರೆಲ್ ಬೆಲೆ ಮೈನಸ್ 37.63 ಡಾಲರ್​ಗೆ ತಗ್ಗಿದೆ. ಅಂತಾರಾಷ್ಟ್ರೀಯ ಮಟ್ಟದ ಬ್ರೆಂಟ್ ದರ್ಜೆಯ ತೈಲ ದರ ಪ್ರತಿ ಬ್ಯಾರೆಲ್​ಗೆ 1.78 ಡಾಲರ್ ಕಡಿಮೆಯಾಗಿ 26.30 ಡಾಲರ್​ಗೆ ಇಳಿದಿದೆ. ಅತಿ ಹೆಚ್ಚು ತೈಲ ಉತ್ಪಾದನೆಯಾಗಿ ಸಂಗ್ರಹಾಗಾರಗಳು ಭರ್ತಿಯಾಗಿದ್ದು ಇನ್ನು ದಾಸ್ತಾನು ಮಾಡಲು ಸ್ಥಳ ಇಲ್ಲದ ಕಾರಣ ತೈಲ ಉತ್ಪಾದನಾ ಕಂಪನಿಗಳೇ ಗ್ರಾಹಕರಿಗೆ ದುಡ್ಡುಕೊಟ್ಟು ತೈಲ ಕೊಂಡುಕೊಳ್ಳಿ ಎಂದು ಗೋಗರಿಯುವ ದೈನೇಸಿ ಸ್ಥಿತಿಗೆ ಬಂದಿವೆ.

    ಇಳಿಕೆ ಏಕೆ?

    ಅಮೆರಿಕದಲ್ಲಿ ಮೇ ತಿಂಗಳ ಫ್ಯೂಚರ್ ಕಾಂಟ್ರಾ್ಯಕ್ಟ್ ಖರೀದಿ ಮಂಗಳವಾರ ಮುಕ್ತಾಯವಾಗಿದೆ. ಆದರೆ, ಚಿಲ್ಲರೆ (ರಿಟೇಲ್) ವ್ಯಾಪಾರಿಗಳ ಬಳಿ ಈಗಾಗಲೇ ಸಂಗ್ರಹವಾಗಿರುವ ತೈಲವೇ ಖರ್ಚಾಗುತ್ತಿಲ್ಲ. ಹೀಗಾಗಿ ಮುಫ್ತಾಗಿ ಕೊಟ್ಟರೂ ಖರೀದಿಸುವವರು ಇಲ್ಲವಾಗಿದ್ದಾರೆ. ಜತೆಗೆ ಜೂನ್ ತಿಂಗಳ ಫ್ಯೂಚರ್ ಖರೀದಿಯಲ್ಲೂ ತೈಲ ಬೇಡಿಕೆ ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್ ದರ 20.43 ಡಾಲರ್ ತಗ್ಗಿದೆ. ಅಮೆರಿಕದಲ್ಲಿ ತೈಲದ ಮೇಲೆ ಅವಲಂಬನೆ ವಿಪರೀತ. ಆದರೀಗ ಲೌಕ್​ಡೌನ್ ಘೋಷಣೆಯಾಗಿರುವ ಕಾರಣ, ವಾಹನಗಳು (ತುರ್ತ ಸೇವೆ ಹೊರತು ಪಡಿಸಿ) ರಸ್ತೆಗಿಳಿದಿಲ್ಲ ಮತ್ತು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಹಾರಾಟ ಕೂಡ ಸ್ಥಗಿತವಾಗಿರುವ ಕಾರಣ ಜೆಟ್ ಇಂಧನ ಬಳಕೆ ಕೂಡ ತಗ್ಗಿದೆ. ಹೀಗಾಗಿ ಅಮೆರಿಕದ ಎಲ್ಲ ತೈಲಾಗಾರಗಳು ತುಂಬಿ ಹೋಗಿವೆೆ. ಜಾಗತಿಕವಾಗಿ ಕೂಡ ಸಂಗ್ರಹಾಗಾರಗಳು ಭರ್ತಿಯಾಗಿವೆ. ಕರೊನಾ ಕಾರಣ ಜಾಗತಿಕವಾಗಿ ಶೇ. 30 ತೈಲ ಬೇಡಿಕೆ ಕಡಿಮೆಯಾಗಿದ್ದರೂ ಮಾರುಕಟ್ಟೆ ಕಳೆದುಕೊಳ್ಳಬಾರದೆಂಬ ಪೈಪೋಟಿಯಿಂದ ಸೌದಿ ಅರೇಬಿಯಾ ಮತ್ತು ರಷ್ಯ ಹಠಕ್ಕೆ ಬಿದ್ದು ತೈಲ ಉತ್ಪಾದನೆ ಮುಂದುವರಿಸಿದ್ದವು. ಕಳೆದ ವಾರ ಈ ಕಿತ್ತಾಟ ಶಮನವಾಗಿದ್ದು, ತೈಲ ಉತ್ಪಾದಿಸುವ ರಾಷ್ಟ್ರಗಳು (ಒಪೆಕ್) ಹಾಗೂ ರಷ್ಯಾ ನೇತೃತ್ವದ ತೈಲ ಉತ್ಪಾದಕ ರಾಷ್ಟ್ರಗಳು ಪ್ರತಿ ದಿನ 97 ಲಕ್ಷ ಬ್ಯಾರಲ್ ಉತ್ಪಾದನೆ ಕಡಿತಗೊಳಿಸುವ ನಿರ್ಣಯಕ್ಕೆ ಬಂದಿವೆ. ಜಗತ್ತಿನ ಶೇ.20 ಕಚ್ಚಾತೈಲ ಬೇಡಿಕೆ ಪೂರೈಸುವ ಅಮೆರಿಕ ಕೂಡ ಈ ಮಹತ್ವದ ಒಪ್ಪಂದಕ್ಕೆ ಅಂಕಿತ ಹಾಕಿದೆ.

    ಷೇರುಪೇಟೆ ತಲ್ಲಣ

    ಅಮೆರಿಕದಲ್ಲಿ ಕಚ್ಚಾತೈಲ ದರ ಇಳಿಕೆಯಾದ ಪರಿಣಾಮ ಜಾಗತಿಕ ಷೇರುಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಭಾರತದಲ್ಲಿ ಸೆನ್ಸೆಕ್ಸ್ 1,011 ಪಾಯಿಂಟ್ (ಶೇ.3.20) ಕುಸಿತ ಕಂಡು 30,636.71ಕ್ಕೆ ಮುಟ್ಟಿದೆ ಮತ್ತು ನಿಫ್ಟಿ 280 ಅಂಶ (ಶೇ. 3.03) ಇಳಿಕೆಯಾಗಿ 8,981.50ಕ್ಕೆ ವಹಿವಾಟು ಅಂತ್ಯಕಂಡಿದೆ. ತತ್ಪರಿಣಾಮ ಹೂಡಿಕೆದಾರರ -ಠಿ; 3.30 ಲಕ್ಷ ಕೋಟಿ ಸಂಪತ್ತು ಕರಗಿದೆ. ಅಮೆರಿಕದ ಮಾರುಕಟ್ಟೆಯಲ್ಲೂ ಭಾರಿ ಇಳಿಕೆ ಕಂಡುಬಂದಿದೆ. ರೂಪಾಯಿ ಮೌಲ್ಯ 30 ಪೈಸೆ ತಗ್ಗಿದ್ದು, ರೂ. 76.83ಕ್ಕೆ ತಲುಪಿದೆ.

    ತೈಲ ಉಚಿತವಿಲ್ಲ

    ಕಚ್ಚಾತೈಲ ಬೆಲೆ ಶೂನ್ಯಕ್ಕೆ ಕುಸಿದ ಕಾರಣ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರಿ ಇಳಿಕೆಯಾಗುತ್ತದೆ ಎಂಬುದು ಶುದ್ಧ ಸುಳ್ಳು. ಕಚ್ಚಾ ತೈಲ ಮುಫ್ತಾಗಿ ಸಿಕ್ಕರೂ ಸಾಗಣೆ, ಸಂಸ್ಕರಣೆ, ತೆರಿಗೆ ವೆಚ್ಚ ತಗುಲುತ್ತದೆ. ಅಂದರೆ ಅತಿ ಕನಿಷ್ಠವೆಂದರೂ ಪ್ರತಿ ಲೀಟರ್ ಪೆಟ್ರೋಲ್​ಗೆ -ಠಿ; 45ಕ್ಕಿಂತ ಕಡಿಮೆ ಇರುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಸದ್ಯ ತೈಲ ದರ ಇಳಿಕೆಯ ಈ ಸಂದರ್ಭದಲ್ಲಿ ಪ್ರತಿ ಲೀಟರ್ ಕಚ್ಚಾ ತೈಲವನ್ನು ಸುಮಾರು -ಠಿ; 3ನಂತೆ ಭಾರತ ಖರೀದಿಸುತ್ತಿದೆ ಎಂದು ಇರಿಸಿಕೊಂಡರೂ ಸಾಗಣೆ ಮತ್ತು ಸಂಸ್ಕರಣೆ ವೆಚ್ಚದಿಂದ ಒಂದು ಲೀಟರ್ ತೈಲದ ಬೆಲೆ -ಠಿ; 16 ಆಗುತ್ತದೆ. ಇನ್ನು ಕೇಂದ್ರದ -ಠಿ; 19 ಮತ್ತು ರಾಜ್ಯಗಳು (ರಾಜ್ಯದಿಂದ ರಾಜ್ಯಕ್ಕೆ ತೆರಿಗೆ ಭಿನ್ನ) ವಿಧಿಸುವ ಸರಾಸರಿ -ಠಿ; 10 ತೆರಿಗೆ ಸೇರಿದರೆ ಒಂದು ಲೀಟರ್ ಪೆಟ್ರೋಲ್ ದರ -ಠಿ; 48 ಆಗುತ್ತದೆ. ಆದರೆ, ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಇಳಿಕೆಯಾದರೂ ಸರ್ಕಾರ ಅದನ್ನು ಗ್ರಾಹಕರಿಗೆ ಬೇಗ ವರ್ಗಾಯಿಸುವುದಿಲ್ಲ. ಏಕೆಂದರೆ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಈ ಹಿಂದೆ ಆದ ನಷ್ಟವನ್ನು ಸರಿದೂಗಿಸಿಕೊಳ್ಳಲು ಇದು ಸಕಾಲ. ಜತೆಗೆ ಬೊಕ್ಕಸ ತುಂಬಿಸಿಕೊಳ್ಳಲು ಸರ್ಕಾರ ಕೂಡ ತೆರಿಗೆ ಹೆಚ್ಚು ಮಾಡುತ್ತದೆ. ಅದರಲ್ಲೂ ಲಾಕ್​ಡೌನ್ ಇರುವ ಈ ಸಂದರ್ಭದಲ್ಲಿ ಸರ್ಕಾರದ ತೆರಿಗೆ ಸಂಗ್ರಹ ಗಣನೀಯವಾಗಿ ಕುಸಿದಿದೆ. ಈ ಸಂದರ್ಭದಲ್ಲಿ ವರಮಾನದ ಪ್ರಮುಖ ಮೂಲ ತೈಲ. ಹೀಗಾಗಿ ಸರ್ಕಾರ ತೈಲ ದರ ತಗ್ಗಿದ ಲಾಭವನ್ನು ಸದ್ಯದ ಮಟ್ಟಿಗೆ ಗ್ರಾಹಕರಿಗೆ ಖಂಡಿತವಾಗಿಯೂ ವರ್ಗಾಯಿಸುವುದಿಲ್ಲ ಎಂಬುದು ತೈಲ ಮಾರುಕಟ್ಟೆ ವಿಶ್ಲೇಷಕರ ತರ್ಕ.

    ಭಾರತದ ಮೇಲೆ ಪರಿಣಾಮ ಏನು?

    ಕಚ್ಚಾ ತೈಲ ಆಮದು ರಾಷ್ಟ್ರಗಳ ಪೈಕಿ ಭಾರತ 3ನೇ ಅತಿ ದೊಡ್ಡ ರಾಷ್ಟ್ರವಾಗಿದ್ದು, ಈಗ ಅಮೆರಿಕವನ್ನು ಹಿಂದಿಕ್ಕಿ 2ನೇ ರಾಷ್ಟ್ರದತ್ತ ಸಾಗುತ್ತಿದೆ. ಒಟ್ಟು ವಾರ್ಷಿಕ ತೈಲ ಅಗತ್ಯದಲ್ಲಿ ಶೇ. 83ರಷ್ಟನ್ನು ಅಂದರೆ ಸರಿಸುಮಾರು 20.30 ಕೋಟಿ ಟನ್​ನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಬಹುಪಾಲು ಪೂರೈಕೆ ಒಪೆಕ್ ರಾಷ್ಟ್ರಗಳಿಂದಲೇ ಆಗುತ್ತದೆ. ಒಂದು ವರ್ಷದ ಹಿಂದೆ ಇರಾನ್​ನಿಂದ ತೈಲ ಪೂರೈಕೆ ಸ್ಥಗಿತವಾದ ಮೇಲೆ ಭಾರತ ಅಮೆರಿಕದಿಂದ ತೈಲ ಆಮದನ್ನು ಹೆಚ್ಚಿಸಿದೆ. ಅಂದರೆ ಸುಮಾರು 6.20 ಕೋಟಿ ಟನ್ ಕಚ್ಚಾ ತೈಲ ಖರೀದಿಸುತ್ತದೆ. ಭಾರತದ ಪ್ರತಿ ವರ್ಷ ತೈಲ ಆಮದಿಗೆ ಅಂದಾಜು -ಠಿ; 10 ಲಕ್ಷ ಕೋಟಿ ವೆಚ್ಚ ಮಾಡುತ್ತದೆ. ಅಂತಾರಾಷ್ಟ್ರೀಯ ತೈಲ ದರದಲ್ಲಿ ಇಳಿಕೆಯಾದ ಕಾರಣ ಭಾರತದ ಆಮದು ಬಿಲ್ ಕಡಿಮೆಯಾಗಿದೆ. ಆದರೀಗ ಕರೊನಾ ಕಾರಣ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗಿರುವುದರಿಂದ ಪಾವತಿ ಮೊತ್ತ ಹೆಚ್ಚಾಗುತ್ತದೆ. ಇಷ್ಟಾದರೂ ತೈಲ ಖರೀದಿಯಲ್ಲಿ ಭಾರತಕ್ಕೆ ಅರ್ಧಕ್ಕರ್ಧ ಹಣ ಉಳಿತಾಯವಾಗಬಹುದು.

    ತೈಲದ ಮೇಲಿನ ವೆಚ್ಚದಲ್ಲಿ ಮಿಗತೆ

    ತೈಲದರ ಶೂನ್ಯಕ್ಕಿಂತ ಕೆಳಗಿಳಿದ ಮಾತ್ರಕ್ಕೆ ಅಮೆರಿಕದಲ್ಲಿ ಗ್ರಾಹಕರಿಗೆ ಗ್ಯಾಸೋಲಿನ್ ಮುಫ್ತಾಗಿ ದೊರೆಯುವುದಿಲ್ಲ. ಆದರೆ, ಅಮೆರಿಕದ ಮಧ್ಯಮ ವರ್ಗದ ಕುಟುಂಬಕ್ಕೆ ಸಾರಿಗೆ ಬಾಬ್ತಿನಲ್ಲಿ ತಿಂಗಳಿಗೆ 150ರಿಂದ 175 ಡಾಲರ್ ಉಳಿತಾಯ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯ.

    ಪ್ರಮುಖಾಂಶಗಳು

    2ನೇ ವಿಶ್ವ ಯುದ್ಧದ ಅಂತ್ಯವಾದ ವೇಳೆ 1946ರಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್​ಗೆ 18 ಡಾಲರ್ ಇತ್ತು.

    1998ರಲ್ಲಿ ಕಚ್ಚಾ ತೈಲ ದರ 18 ಡಾಲರ್​ಗೆ ತಲುಪಿತ್ತು.

    2008ರಲ್ಲಿ ಅತಿ ಹೆಚ್ಚು ಅಂದರೆ ಬ್ಯಾರೆಲ್​ಗೆ 165 ಡಾಲರ್​ಗೆ ಮುಟ್ಟಿತ್ತು.

    ದೇಶದಲ್ಲಿ ತೈಲದ ಮಹಾಪೂರ ಉಂಟಾಗಿ ದರ ಶೂನ್ಯಕ್ಕಿಂತ ಕಡಿಮೆ ಆಗಿರುವ ಕಾರಣ ಸೌದಿ ಅರೇಬಿಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವ ಕುರಿತು ಪರಿಶೀಲಿಸ ಲಾಗುವುದು

    | ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

    ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರಿ ನಿವಾಸದ ಬಳಿ ಕರ್ತವ್ಯದಲ್ಲಿದ್ದ ಇಬ್ಬರು ಮಹಿಳಾ ಪೊಲೀಸ್​ ಸಿಬ್ಬಂದಿಗೆ ಕೊರನಾ ಸೋಂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts