More

    ಕನ್ನಡಕ್ಕೆ ಆಟೋ ಚಾಲಕರ ಕೊಡುಗೆ ಅಪಾರ

    ಪಾಂಡವಪುರ: ಕನ್ನಡ ನಾಡು, ನುಡಿ ಬೆಳವಣಿಗೆಗೆ ಆಟೋ ಚಾಲಕರು ಬಹು ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು. ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಸರಕು ಸಾಗಣೆ ಆಟೋ ಚಾಲಕರು ಮತ್ತು ಮಾಲೀಕರು ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
    ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಆಟೋ ಚಾಲಕರು ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ವ್ಯವಹರಿಸುವುದು ಭಾಷಾ ಬೆಳವಣಿಗೆಗೆ ಸಹಕಾರವಾಗಿದೆ. ರಾಜ್ಯದ ಎಲ್ಲ ಕನ್ನಡ ಪರ ಸಂಘಟನೆಗಳು ಭಾಷೆಯ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಸಂಘಟನೆಗಳು ಸೇರಿ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕಿದೆ ಎಂದರು.
    ರಾಜ್ಯೋತ್ಸವ ಪ್ರಯುಕ್ತ ಆಟೋ ಚಾಲಕರು ತಮ್ಮ ವಾಹನಗಳಿಗೆ ಕನ್ನಡ ಬಾವುಟ ಬಿಗಿದು ಹೂವುಗಳಿಂದ ಸಿಂಗರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕನ್ನಡ ಭಾಷೆಗೆ ಜೈಕಾರ ಕೂಗಿದರು. ನೆರೆದಿದವರಿಗೆ ಸಿಹಿ ವಿತರಿಸಲಾಯಿತು.
    ಸಮಾಜ ಸೇವಕ ದೀಪು, ಕಾಡೇನಹಳ್ಳಿ ಸತೀಶ್, ಬೀರಶೆಟ್ಟಹಳ್ಳಿ ಸ್ವಾಮಿ, ಚೇತನ್, ಚಿಕ್ಕಾಡೆ ಕುಮಾರ, ಹಿರೇಮರಳಿ ಯೋಗೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts