More

    ಸ್ವಚ್ಛತೆಗೆ ಪೌರಕಾರ್ಮಿಕ ಕೊಡುಗೆ ಅಪಾರ, ಸಂಸದ ಬಚ್ಚೇಗೌಡ ಅಭಿಮತ ಪೌರ ಸಿಬ್ಬಂದಿಗೆ ದಿನಸಿ ಕಿಟ್ ವಿತರಣೆ

    ಹೊಸಕೋಟೆ: ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯವಾಗಿದ್ದು, ಅವರನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂದು ಸಂಸದ ಬಿ.ಎನ್. ಬಚ್ಚೇಗೌಡ ತಿಳಿಸಿದರು.

    ನಗರಸಭೆ ಕಚೇರಿ ಆವರಣದಲ್ಲಿ ಶುಕ್ರವಾರ ಪೌರ ಕಾರ್ಮಿಕರು, ಕಸದ ವಾಹನ ಚಾಲಕರು, ನೀರು ಗಂಟಿಗಳಿಗೆ ದಿನಸಿ ಕಿಟ್ ವಿತರಣೆ ಮಾಡಿ ಮಾತನಾಡಿದರು.

    ಸ್ವಚ್ಛತೆ ಕಪಾಡುವಲ್ಲಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದ್ದು, ಅವರಿಗೆ ಅಗತ್ಯ ಸೌಕರ್ಯ ನೀಡುವುದು ಎಲ್ಲರ ಕರ್ತವ್ಯ ಎಂದರು.

    ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕ ವಲಯಕ್ಕೆ 25 ದಿನಗಳಿಂದ ಸುಮಾರು 35 ರಿಂದ 40 ಸಾವಿರ ದಿನಸಿ ಹಾಗೂ ತರಕಾರಿ ಕಿಟ್ ವಿತರಣೆ ಮಾಡಲಾಗಿದ್ದು, ಅವಶ್ಯಕತೆಯಿರುವ ಎಲ್ಲರಿಗೂ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದರು.

    ಭಾರತ ಸರ್ಕಾರದ ಕಾರ್ಮಿಕ ಭವಿಷ್ಯ ನಿಧಿ ಸದಸ್ಯ ವಿ. ವಿಜಯ್‌ಕುಮಾರ್ ಮಾತನಾಡಿ, ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿರುವ ಕೂಲಿ ಕಾರ್ಮಿಕರಿಗೆ ಆಹಾರ, ದಿನಸಿ, ತರಕಾರಿ ಹಾಗೂ ಹಾಲು ವಿತರಣೆ ಮಾಡಲಾಗುತ್ತಿದೆ ಎಂದರು.

    ಪುರಸಭೆ ಮಾಜಿ ಅಧ್ಯಕ್ಷೆ ಎಚ್.ಕೆ. ಸಾವಿತ್ರಿ ತ್ಯಾಗರಾಜ್ 150 ಪೌರಕಾರ್ಮಿಕರಿಗೆ ತಲಾ 25 ಕೆಜಿ ಅಕ್ಕಿ, 15 ವಿವಿಧ ಬಗೆಯ ದಿನಸಿ ವಸ್ತು ವಿತರಿಸಿದರು.

    ಮುಖಂಡರಾದ ಬಿ.ವಿ. ಭೈರೇಗೌಡ, ಡಾ.ಎಚ್.ಎಂ. ಸುಬ್ಬರಾಜ್, ಡಿ.ಎಸ್. ರಾಜ್ ಕುಮಾರ್, ಎಚ್.ಜಿ. ಸುದರ್ಶನ್, ಎಚ್.ಎಸ್. ವೆಂಕಟೇಶ್, ಎಚ್.ಜಿ. ಬಾಲಕೃಷ್ಣ, ನಗರಸಭಾ ಸದಸ್ಯೆ ಜಮುನಾ ಆರ್. ಹರೀಶ್ ನಾಯ್ಡು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts