More

    ರಾಮಮಂದಿರ ಕಲಾಕೃತಿ ನಿರ್ಮಿಸಿ ಸಂಭ್ರಮಿಸಿದ ಮಕ್ಕಳು

    ಬೆಂಗಳೂರು: ಯೂತ್ ಫಾರ್ ಸೇವಾ ಸಂಸ್ಥೆ ಭಾನುವಾರ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆಯೋಜಿಸಿದ್ದ ‘ಚಿಗುರು’ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಅಯೋಧ್ಯೆಯ ‘ರಾಮಮಂದಿರ’ ಮಾದರಿ ನಿರ್ಮಿಸಿ ಗಮನ ಸೆಳೆದರು.

    ದೊಡ್ಡಬಾಣಸವಾಡಿಯ ಕೆಪಿಎಸ್ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾದ ಎಸ್. ತರುಣ್, ಅಭಿ ಮತ್ತು ಸುರೇಶ್, ರಟ್ಟಿನ ಮೂಲಕ ರಾಮಮಂದಿರ ಕಲಾಕೃತಿ ನಿರ್ಮಿಸಿದರು. ಇದು ನೋಡುಗರ ಆಕರ್ಷಣೆ ಕೇಂದ್ರವಾಯಿತು. ವಿವಿಧ ಸರ್ಕಾರಿ ಶಾಲಾ ಮಕ್ಕಳು ವೇದಿಕೆಯಲ್ಲಿ ಸಂಗೀತ, ನೃತ್ಯದಲ್ಲಿ ಪ್ರತಿಭೆ ಪ್ರದರ್ಶಿಸಿದರು.ಕಲಾತ್ಮಕ, ಬೌದ್ಧಿಕ ಮತ್ತು ಸೃಜನಶೀಲ ಪ್ರತಿಭೆಗಳ ವರ್ಣಪಟಲವನ್ನು ಪ್ರದರ್ಶಿಸಲು ಸಂಸ್ಥೆಯು ವೇದಿಕೆ ಕಲ್ಪಿಸಿತ್ತು. ಮುಖ್ಯವಾಗಿ 89 ಸರ್ಕಾರಿ ಶಾಲೆಗಳ 2,829 ಮಕ್ಕಳಲ್ಲಿ ವೈವಿಧ್ಯಮಯ ಪ್ರತಿಭೆ ಹೊರಹೊಮ್ಮಿತು. 182 ಶಿಕ್ಷಕರು, 300ಕ್ಕೂ ಅಧಿಕ ಸ್ವಯಂಸೇವಕರು ಈ ಸಂಭ್ರಮಕ್ಕೆ ಸಾಕ್ಷಿಯಾದರು.

    ಅಯೋಧ್ಯಾ ರಾಮೋತ್ಸವಕ್ಕೆ ತೆರಳಿದ ಗಣ್ಯರು
    ಯುವ ಪ್ರತಿಭೆಗಳನ್ನು ಬೆಳೆಸುವ ಮತ್ತು ಸಮುದಾಯದ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಪ್ರತಿ ವರ್ಷ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಸಮಾಜದ ವಿವಿಧ ವಿಭಾಗಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತ ಏಕತೆ ಮತ್ತು ಪರಸ್ಪರ ತಿಳುವಳಿಕೆಯನ್ನು ಉತ್ತೇಜಿಸಲಾಗುತ್ತಿದೆ. ಶಾಲಾ ಮಕ್ಕಳು ಅಪರಿಮಿತ ಸಾಮರ್ಥ್ಯ ಮತ್ತು ಶಕ್ತಿಯುತ ಮನೋಭಾವ ಪ್ರದರ್ಶಿಸಿದ್ದರು. ಶಾಲಾ ಮಕ್ಕಳು ಭಯಪಡದೆ ವೇದಿಕೆಯನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಪ್ರತಿಭೆಯನ್ನು ಹೊರಹಾಕಬೇಕು ಎಂದು ಸಂಸ್ಥೆ ಸಲಹೆ ನೀಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts