More

    3ರಾಜ್ಯ ಗೆದ್ದು ಬೀಗಿದ ಬಿಜೆಪಿ: 2ಕಡೆ ‘ಕೈ’ಕಚ್ಚಿಸಿಕೊಂಡ ಕಾಂಗ್ರೆಸ್​- ತೆಲಂಗಾಣ ಗೆಲುವು ತಂದ ಸಮಾಧಾನ!

    ನವದೆಹಲಿ: 2024 ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದೇ ಭಾವಿಸಲಾಗಿರುವ ಪಂಚರಅಜ್ಯಗಳ ಚುನಾವಣೆಯಲ್ಲಿ ದೇಶದ ಮೂರು ಹೃದಯಭಾಗದ ರಾಜ್ಯಗಳಾದ ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನವನ್ನು ಗೆದ್ದು ಬಿಜೆಪಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ರಾಜಸ್ಥಾನ ಮತ್ತು ಛತ್ತೀಸ್​ಗಢದಲ್ಲಿ ಕೈ ಸುಟ್ಟುಕೊಂಡಿರುವ ಕಾಂಗ್ರೆಸ್ ದಕ್ಷಿಣದ ತೆಲಂಗಾಣದ ಗೆಲುವಿನಿಂದ ಸಮಾಧಾನಗೊಂಡಿದೆ. ಆದರೆ ತೆಲಂಗಾಣ ಉದಯಕ್ಕೆ ಕಾರಣರಾದ ಕೆ.ಚಂದ್ರಶೇಖರ್ ರಾವ್ ಅವರ ಬಿಆರ್​ಎಸ್​ ಪಕ್ಷಕ್ಕೆ ಮತದಾರರು ಹ್ಯಾಟ್ರಿಕ್ ಗೆಲುವು ನಿರಾಕರಿಸಿದ್ದಾರೆ.

    ಇದನ್ನೂ ಓದಿ: ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು​: ವಿಶೇಷ ಸಂದೇಶ ರವಾನಿಸಿದ ಪ್ರಧಾನಿ ಮೋದಿ
    ಮೂರು ರಾಜ್ಯಗಳ ಗೆಲುವಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ “ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ರಾಜಕೀಯ” ಕ್ಕೆ ಜನರು ನೀಡಿದ ಬೆಂಬಲವನ್ನು ಫಲಿತಾಂಶಗಳು ರುಜುವಾತುಪಡಿಸಿವೆ. ನಾವು ಜನತಾ ಜನಾರ್ದನ್‌ಗೆ ನಮಸ್ಕರಿಸುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.

    ಇನ್ನು ಗ್ಯಾರಂಟಿ ಸ್ಕೀಂಗಳು ಕರ್ನಾಟಕದಂತೆ ದೇಶಾದ್ಯಂತ ವರ್ಕೌಟ್​ ಆಗುತ್ತವೆ ಎಂದು ಭಾವಿಸಿದ ಕಾಂಗ್ರೆಸ್​ಗೆ ಉತ್ತರದ ಮೂರು ರಾಜ್ಯಗಳಲ್ಲಿನ ನಿರಾಸೆ ಅರಗಿಸಿಕೊಳ್ಳಲಿಕ್ಕೆ ಸಾಧ್ಯವಾಗುತ್ತಿಲ್ಲ. ತೆಲಂಗಾಣದ ಗೆಲುವು ಮಾತ್ರ ಸಮಧಾನಪಟ್ಟುಕೊಳ್ಳುವಂತಾಗಿದೆ. “ಸಿದ್ಧಾಂತಗಳ ಕದನ ಮುಂದುವರಿಯುತ್ತದೆ” ಎಂದು ಹೇಳಿರುವ ರಾಹುಲ್ ಗಾಂಧಿ, ಪಕ್ಷವು ಜನರ ಆದೇಶವನ್ನು ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.

    ನಾಲ್ಕು ರಾಜ್ಯಗಳಲ್ಲಿ ಏನಾಯಿತು ಎಂದು ನೋಡುವುದಾದರೆ…
    ಮಧ್ಯಪ್ರದೇಶದಲ್ಲಿ ಬಿಜೆಪಿ ಜಯಭೇರಿ: 230 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಪಕ್ಷವು ಪ್ರಸ್ತುತ 166 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ, ಬಹುಮತದ 116 ರ ಬಹುಮತವನ್ನು ಮೀರಿದೆ. ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದ್ದು, 62 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

    ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ: 230 ಸದಸ್ಯರ ಬಲಾಬಲದ ಮಧ್ಯಪ್ರದೇಶದಲ್ಲಿ 19 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಆಡಳಿತ ವಿರೋಧಿ ಅಲೆ ಹಾಗೂ ಗ್ಯಾರಂಟಿಗಳ ಘೋಷಣೆಯು ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಡಲಿದೆ ಎಂದು ಆ ಪಕ್ಷದ ನಾಯಕರು ಭಾವಿಸಿದ್ದರು. ಆದರೆ, ಕಾಂಗ್ರೆಸ್ಸಿಗರ ನಿರೀಕ್ಷೆ ಹುಸಿಯಾಗಿದೆ. ಸದ್ಯ ಟ್ರೆಂಡ್ ಗಮನಿಸಿದರೆ 166 ಸ್ಥಾನಗಳಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದರೆ, ಇತ್ತ 63ರಲ್ಲಿ ಕಾಂಗ್ರೆಸ್, ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಧ್ಯಪ್ರದೇಶ ವಿಧಾನಸಭೆಯ ಮ್ಯಾಜಿಕ್ ನಂಬರ್ 116.

    ಛತ್ತೀಸ್‌ಗಢದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್​: ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ನ್ನು ಅಧಿಕಾರದಿಂದ ಕೆಳಗಿಳಿಸಿ ಬಿಜೆಪಿ ಪ್ರಬಲ ಗೆಲುವು ದಾಖಲಿಸಲು ಮುಂದಾಗಿದೆ. ಪಕ್ಷವು 53 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಒಟ್ಟು 90 ಸ್ಥಾನ ಹೊಂದಿದ್ದು, ಕಾಂಗ್ರೆಸ್ 35 ಸ್ಥಾನಗಳಲ್ಲಿ ಮುಂದಿದೆ. ಆರಂಭದಲ್ಲಿ ಹಿಂದುಳಿದಿದ್ದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಪಟಾನ್ ಕ್ಷೇತ್ರದಲ್ಲಿ ತಮ್ಮ ಸೋದರಳಿಯ ಮತ್ತು ಬಿಜೆಪಿ ಅಭ್ಯರ್ಥಿ ವಿಜಯ್ ಬಘೇಲ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

    ರಾಜಸ್ಥಾನದಲ್ಲಿ ಅರಳಿದ ಕಮಲ: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಕಿತ್ತಾಟ ಬಿಜೆಪಿ ಪ್ರಚಂಡ ಗೆಲುವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದ್ದರೂ ಬಿಜೆಪಿಗೆ ಭದ್ರ ನೆಲೆ ಇದೆ ಎಂಬುದನ್ನು ಅಲ್ಲಗಳೆಯಲಾಗದು. ಸದ್ಯ ಬಿಜೆಪಿ 115 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 69 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅಶೋಕ್ ಗೆಹ್ಲೋಟ್ ಸೋಲನ್ನು ಒಪ್ಪಿಕೊಂಡಿದ್ದಅರೆ. ಫಲಿತಾಂಶ ಅನಿರೀಕ್ಷಿತ ಎಂದು ಕರೆದರು. ಏತನ್ಮಧ್ಯೆ, ಸಚಿನ್ ಪೈಲಟ್ 29,475 ಮತಗಳ ಅಂತರದಿಂದ ಟೋಂಕ್ ಸ್ಥಾನದಲ್ಲಿ ಗೆದ್ದಿದ್ದಾರೆ.

    ಗ್ಯಾರಂಟಿಗಳು ತೆಲಂಗಾಣದಲ್ಲಿ ವರ್ಕೌಟ್​: ಕರ್ನಾಟಕದಲ್ಲಿ ಗ್ಯಾರಂಟಿ ಸ್ಕೀಂಗಳನ್ನು ತಂದು ಅಧಿಕಾರಕ್ಕೇರಿದ್ದ ಕಾಂಗ್ರೆಸ್​ ಅದೇ ಪ್ರಯೋಗವನ್ನು ನೆರೆಯ ತೆಲಂಗಾಣದಲ್ಲಿ ಮಾಡಿ ಯಶಸ್ವಿಯಾಗಿದೆ. ಅಧಿಕಾರದಲ್ಲಿದ್ದ ಕೆ.ಚಂದ್ರಶೇಖರ ರಾವ್ ನೇತೃತ್ವದ ಬಿಆರ್‌ಎಸ್ ಹ್ಯಾಟ್ರಿಕ್​ ಗೆಲುವು ದಾಖಲಿಸುವಲ್ಲಿ ವಿಫಲವಾಗಿದೆ. ದಕ್ಷಿಣ ರಾಜ್ಯವು ಕಾಂಗ್ರೆಸ್‌ ಗೆ ಸಮಾಧಾನಕರ ಬಹುಮಾನವಾಗಿ ಪರಿಣಮಿಸಿದೆ. ಪ್ರಸ್ತುತ ಕಾಂಗ್ರೆಸ್ 64 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಆರ್‌ಎಸ್ 40 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

    ಮುಖ್ಯಮಂತ್ರಿ ಕೆಸಿಆರ್ ಅವರು ಗಜ್ವೆಲ್ ಕ್ಷೇತ್ರದಲ್ಲಿ 11,714 ಮತಗಳಿಂದ ಮುನ್ನಡೆಯಲ್ಲಿದ್ದಾರೆ, ಆದರೆ ಕಾಮರೆಡ್ಡಿಯಲ್ಲಿ 3,335 ಮತಗಳಿಂದ ಹಿಂದುಳಿದಿದ್ದಾರೆ.

    ಮತಎಣಿಕೆ ನಡುವೆ ತೆಲಂಗಾಣ ಕಾಂಗ್ರೆಸ್​ ಮುಖ್ಯಸ್ಥರ ಭೇಟಿ: ಡಿಜಿಪಿ ಅಂಜನಿ ಕುಮಾರ್​ ಸಸ್ಪೆಂಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts