More

    ಶಿವಮೊಗ್ಗದಲ್ಲಿ ಮೈನವಿರೇಳಿಸಿದ ಟಗರು ಕಾಳಗ

    ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗ ಏರ್ಪಡಿಸಿದ್ದ 7ನೇ ಬಾರಿಗೆ ರಾಜ್ಯಮಟ್ಟದ ಟಗರಿನ ಕಾಳಗವು ನೋಡುಗರ ಮೈನವಿರೇಳಿಸಿತು. ಸುಡುವ ಬಿಸಿಲನ್ನೂ ಲೆಕ್ಕಿಸದೆ ನೂರಾರು ಜನರು ಟಗರು ಕಾಳಗ ವೀಕ್ಷಿಸಿದರು.

    ಎನ್‌ಇಎಸ್ ಮೈದಾನದಲ್ಲಿ ಕೋಟೆ ಮಾರಿಕಾಂಬ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಟಗರು ಕಾಳಗದಲ್ಲಿ ನೂರಾರು ಟಗರುಗಳನ್ನು ಕರೆತರಲಾಗಿತ್ತು. ಮಧ್ಯಕರ್ನಾಟಕದ ಜತೆಗೆ ವಿಜಯಪುರ, ಬಾಗಲಕೋಟೆ, ಹಾವೇರಿ ಸೇರಿ ಉತ್ತರ ಕರ್ನಾಟಕ ಭಾಗದಿಂದಲೂ ಟಗರುಗಳನ್ನು ಕಾಳಗಕ್ಕಿಳಿಸಲಾಗಿತ್ತು. ಮರಿ, 2 ಹಲ್ಲು, 4 ಹಲ್ಲು, 6 ಹಲ್ಲು ಮತ್ತು 8 ಹಲ್ಲಿನ ಟಗರುಗಳನ್ನು ಪ್ರತ್ಯೇಕವಾಗಿ ಕಾಳಗಕ್ಕೆ ಇಳಿಸಲಾಗಿತ್ತು.
    ಟಗರಿನ ಕಾಳಗವನ್ನು ವೀಕ್ಷಿಸಲು ಬಂದ ಪ್ರೇಕ್ಷಕರು ಸಿಳ್ಳೆ-ಚಪ್ಪಾಳೆಗಳ ಮೂಲಕ ಕಾಳಗಕ್ಕೆ ಮತ್ತಷ್ಟು ಮೆರುಗು ತಂದರು. ಪ್ರತಿ ಕಾಳಗದ ಬಳಿಕ ಟಗರುಗಳಿಗೆ ಮಾಲೀಕರು ಆರೈಕೆ ಮಾಡಿದರು. ಬಾಳೆ ಹಣ್ಣು, ತಂಪು ಪಾನೀಯಗಳನ್ನು ಕುಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
    ಕಾಳಗದಲ್ಲಿ ಗೆದ್ದ ಟಗರಿಗೆ ಲಕ್ಷ ರೂ. ಬಹುಮಾನ
    8 ಹಲ್ಲಿನ ಕಾಳಗದಲ್ಲಿ ಗೆದ್ದ ಟಗರಿಗೆ ಪ್ರಥಮ ಬಹುಮಾನ 1 ಲಕ್ಷ ರೂ., ದ್ವಿತೀಯ ಬಹುಮಾನ 50 ಸಾವಿರ ರೂ., 3ನೇ ಬಹುಮಾನ ಬೆಳ್ಳಿ ಗಧೆ, 4ನೇ ಬಹುಮಾನ ಟ್ರೋಫಿ, 6 ಹಲ್ಲಿನ ಗಟರಿಗೆ ಪ್ರಥಮ ಬಹುಮಾನ 50 ಸಾವಿರ ರೂ., ದ್ವಿತೀಯ ಬಹುಮಾನ 25 ಸಾವಿರ ರೂ, ತೃತೀಯ ಬಹುಮಾನ ಬೆಳ್ಳಿಗಧೆ, 4 ಹಲ್ಲಿನ ಟಗರಿಗೆ ಪ್ರಥಮ ಬಹುಮಾನ 40 ಸಾವಿರ ರೂ., ದ್ವಿತೀಯ ಬಹುಮಾನ 20 ಸಾವಿರ ರೂ., ತೃತೀಯ ಬಹುಮಾನ ಬೆಳ್ಳಿಗಧೆ, 2 ಹಲ್ಲಿನ ಗಟರಿಗೆ ಪ್ರಥಮ 30 ಸಾವಿರ ರೂ., 2ನೇ ಬಹುಮಾನ 15 ಸಾವಿರ ರೂ., 3ನೇ ಬಹುಮಾನ ಬೆಳ್ಳಿ ಗಧೆ, ಮರಿ ಟಗರಿಗೆ ಪ್ರಥಮ ಬಹುಮಾನ 15 ಸಾವಿರ ರೂ., ದ್ವಿತೀಯ ಬಹುಮಾನ 7,500 ರೂ., ತೃತೀಯ ಬಹುಮಾನ ಬೆಳ್ಳಿಗದೆ ನೀಡಲಾಗುತ್ತಿದೆ.

    ಕಾಳಗಕ್ಕೆ ಚಾಲನೆ ನೀಡಿದ ಎಂ.ಶ್ರೀಕಾಂತ್
    ರಾಜ್ಯ ಮಟ್ಟದ ಟಗರಿನ ಕಾಳಗಕ್ಕೆ ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಚಾಲನೆ ನೀಡಿದರು. ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗದ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ನಾನಾ ಮುಖಂಡರು ಟಗರಿನ ಕಾಳಗಕ್ಕೆ ಸಾಕ್ಷಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts