More

    ಬ್ರಿಟಿಷರ ವಿರುದ್ಧ ತಿರುಗಿ ಬಿದ್ದಿದ್ದ ಬಂಜಾರ ಸಮುದಾಯ

    ಎಚ್.ಡಿ.ಕೋಟೆ: ಸ್ವಾತಂತ್ರೃ ಪೂರ್ವದಲ್ಲಿ ಬಂಜಾರ ಸಮುದಾಯ ಬಲಿಷ್ಠವಾಗಿತ್ತು. ನಂತರದಲ್ಲಿ ಬ್ರಿಟಿಷ್ ಆಡಳಿತದಿಂದಾಗಿ ಅವನತಿ ಹೊಂದಿತು ಎಂದು ಬಂಜಾರ ಸಮುದಾಯದ ಮುಖಂಡ ಕೃಷ್ಣನಾಯಕ್ ತಿಳಿಸಿದರು.

    ಪಟ್ಟಣದ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಸಭಾಂಗಣದಲ್ಲಿ ಗುರುವಾರ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಸಂತ ಸೇವಲಾಲರ 275 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ರಿಟಿಷರು ದೇಶವನ್ನು ಆಕ್ರಮಣ ಮಾಡಿ ಆಡಳಿತ ನಡೆಸುತ್ತಿದ್ದ ಸಂದರ್ಭ ಬಂಜಾರ ಸಮುದಾಯ ಬಲಿಷ್ಠವಾಗಿತ್ತು. ಇಂಗ್ಲಿಷರ ವಿರುದ್ಧ ಸಮುದಾಯ ತಿರುಗಿ ಬೀಳುವುದನ್ನು ಗಮನಿಸಿದ ಬ್ರಿಟಿಷ್ ಸರ್ಕಾರ 1850ರಲ್ಲಿ ಟ್ರೈಬಲ್ ಆಕ್ಟ್ ಜಾರಿ ಮಾಡಿತು. ಆ ಮೂಲಕ ಬ್ರಿಟಿಷರ ವಿರುದ್ಧ ಧ್ವನಿ ಎತ್ತದಂತೆ ಮಾಡಿತು ಎಂದು ತಿಳಿಸಿದರು.

    ಬ್ರಿಟಿಷರ ವಿರುದ್ಧ ಸ್ವಾತಂತ್ರೃದ ಕಿಡಿ ಹಚ್ಚಿದ ಮೊದಲ ಸಮುದಾಯ ನಮ್ಮದು. ಜತೆಗೆ ಗಡಿಯಲ್ಲಿ ಖಡ್ಗ ಹಿಡಿದು ಬಂಜಾರ ಸಮುದಾಯದವರು ಓಡಾಡುತ್ತಿದ್ದರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದೇ ಭಾಷೆ ಇರುವ, ಬಣ್ಣಬಣ್ಣದ ಉಡುಗೆ ತೊಡುವ ಏಕೈಕ ಸಮುದಾಯ ನಮ್ಮದು ಎಂದರು.

    1950 ರಲ್ಲಿ ಅಂಬೇಡ್ಕರ್ ಸಂವಿಧಾನ ಜಾರಿ ಮಾಡಿದ ನಂತರವೂ ಜನಾಂಗದ ಮೇಲೆ ಆಗುತ್ತಿದ್ದ ದುಷ್ಪರಿಣಾಮವನ್ನು ಗಮನಿಸಿ ಟ್ರೈಬಲ್ ಆಕ್ಟ್ ರದ್ದು ಮಾಡಿದರು. ಅಲ್ಲದೆ ನಮ್ಮ ಸಮುದಾಯದೊಂದಿಗೆ ಬೇರೆ ಸಮುದಾಯವನ್ನೂ ಅಪ್ಪಿಕೊಳ್ಳಬೇಕು ಎಂದು ಕರೆ ನೀಡಿದವರು ಸಂತ ಸೇವಲಾಲರು ಎಂದು ಸ್ಮರಿಸಿದರು.

    ತಹಸೀಲ್ದಾರ್ ಶ್ರೀನಿವಾಸ್, ಗ್ರೇಡ್ 2 ತಹಸೀಲ್ದಾರ್ ಸಣ್ಣರಾಮಪ್ಪ, ಬಂಜಾರ ಸಮುದಾಯದ ತಾಲೂಕು ಅಧ್ಯಕ್ಷ ಹೇಮಂತ್ ಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಕುಮಾರನಾಯಕ, ಸ್ಥಳೀಯ ಮುಖಂಡರಾದ ನವೀನ್‌ಕುಮಾರ್, ಬಾಬಪೂಜಿ ನಾಯಕ, ಮಹೇಶ್‌ನಾಯಕ್, ಕೃಷ್ಣನಾಯಕ್, ಸಿದ್ದುನಾಯಕ್, ಮಲ್ಲೇಶನಾಯಕ್, ತವರೆ ನಾಯಕ, ಸಿದ್ದರಾಜು, ಲಕ್ಷ್ಮಣ್‌ನಾಯಕ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts