More

    ಗುತ್ತಲದಲ್ಲಿ ಶುಭ ಕಾರ್ಯಗಳಿಗಿದ್ದ ನಿಷೇಧ ತೆರವು

    ಗುತ್ತಲ: ಕಳೆದ ವರ್ಷ ಜರುಗಿದ ಗ್ರಾಮ ದೇವತಾ ಜಾತ್ರೆಯ ಹಿನ್ನೆಲೆಯಲ್ಲಿ ಒಂದು ವರ್ಷದವರೆಗೆ ಶುಭ ಕಾರ್ಯ ಕ್ಕೆ ಇದ್ದ ಅಲಿಖಿತ ನಿಷೇಧ ತೆರವು ಗೊಂಡಿದ್ದು, ಗುತ್ತಲ ಪಟ್ಟಣದಲ್ಲಿ ಭಾನುವಾರದಿಂದ ಶುಭ ಕಾರ್ಯಗಳಿಗೆ ಚಾಲನೆ ದೊರೆಯಲಿದೆ.

    ಪ್ರತಿ 5 ವರ್ಷಕ್ಕೊಮ್ಮೆ ಜರುಗುವ ಗುತ್ತಲದ ಗ್ರಾಮದೇವತಾ ಜಾತ್ರೆ ಹಿನ್ನೆಲೆಯಲ್ಲಿ ಜಾತ್ರೆ ನಡೆದ ದಿನದಿಂದ ಒಂದು ವರ್ಷದವರೆಗೆ ಪಟ್ಟಣದಲ್ಲಿ ಶುಭ ಸಮಾರಂಭಗಳಿಗೆ ನಿಷೇಧ ಹೇರಲಾಗುತ್ತಿದೆ.

    ಅಲಿಖಿತ ನಿಷೇಧ

    ವಿವಾಹ, ಗೃಹ ಪ್ರವೇಶ, ನೂತನ ಮನೆ ಅಥವಾ ಕಟ್ಟಡ ಕಟ್ಟುವುದಕ್ಕೆ ಭೂಮಿ ಪೂಜೆ ಸೇರಿ ವಿವಿಧ ರೀತಿಯ ಕಾರ್ಯ ಗಳಿಗೆ ಪಟ್ಟಣದಲ್ಲಿ ಅಲಿಖಿತ ನಿಷೇಧ ಹೇರಲಾಗುತ್ತಿದೆ. ಇದು ಅನಾದಿ ಕಾಲದಿಂದಲೂ ಪಟ್ಟಣದಲ್ಲಿ ನಡೆದು ಬಂದ ಪದ್ಧತಿಯಾಗಿದೆ.

    ನಿಷೇಧ ತೆರವು ಗುತ್ತಿರುವ ಹಿನ್ನೆಲೆಯಲ್ಲಿ ಶುಭ ಸಮಾರಂಭಗಳಿಗೆ ಮುಹೂರ್ತ ನಿಗದಿಯಾಗಿದ್ದು, ಜನತೆ ತಯಾರಿ ನಡೆಸಿದ್ದಾರೆ.

    ಮದುವೆ ಕಾರ್ಯಗಳಿಗೆ ದಿನಾಂಕ ನಿಗದಿಪಡಿಸಿ ಲಗ್ನ ಪತ್ರಿಕೆಗಳನ್ನು ವಿತರಿಸುತ್ತಿದ್ದಾರೆ. ನೂತನ ಮನೆ ನಿರ್ವಣಕ್ಕಾಗಿ ಭೂಮಿ ಪೂಜೆಗೆ ಸಿದ್ಧತೆಯನ್ನೂ ನಡೆಸಿದ್ದಾರೆ.

    ಜಾತ್ರೆಯ ತರುವಾಯ ಶುಭ ಕಾರ್ಯಗಳು ಜರುಗದ ಕಾರಣ ಶಾಮಿಯಾನಾ, ಅಡುಗೆ ತಯಾರಕರು, ಬಟ್ಟೆ ಅಂಗಡಿಗಳು, ಕಿರಾಣಿ ಅಂಗಡಿ, ಹೂವು-ಹಣ್ಣಿನ ವ್ಯಾಪಾರಿಗಳು ಹಾಗೂ ಕಲ್ಯಾಣ ಮಂಟಪ, ಕಟ್ಟಡ ಕಾರ್ವಿುಕರು, ಬಣ್ಣದ ವ್ಯಾಪಾರಿಗಳು, ಮರಮಟ್ಟುಗಳ ಕೆಲಸಗಾರರಿಗೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಆರ್ಥಿಕ ನಷ್ಟ ಉಂಟಾಗಿತ್ತು.

    ನಮ್ಮ ಪೂರ್ವಜರು ಬುದ್ಧಿವಂತರು, ಮನೆಯಲ್ಲಿ ಮೇಲಿಂದ ಮೇಲೆ ಶುಭ ಕಾರ್ಯಗಳಿಗೆ ಹಣ ವಿನಿಯೋಗಿಸಿ ಕುಟುಂಬ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಕಾರಣಕ್ಕಾಗಿ ಅಲಿಖಿತ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

    ಜಾತ್ರೆಗೆ ಎಲ್ಲ ಸಂಬಂಧಿಕರನ್ನು ಮನೆಗೆ ಕರೆಯಿಸಿ ಹೆಚ್ಚಿನ ಹಣ ಖರ್ಚು ಮಾಡಿ ಆರ್ಥಿಕ ತೊಂದರೆಗೆ ಸಿಲುಕಿ ನಂತರ ಶುಭ ಕಾರ್ಯಗಳನ್ನು ನಡೆಸಿದರೆ ತೊಂದರೆಯಾಗಬಾರದು ಎಂದು ಯೋಚನೆ ಮಾಡಿ ಅಲಿಖಿತ ನಿಷೇಧ ವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ.

    | ಮಂಜುನಾಥ ಯರವಿನತಲಿ ಕಾರ್ಯದರ್ಶಿ, ಗ್ರಾಮದೇವತಾ ಜಾತ್ರಾ ಕಮಿಟಿ

    | ಪ್ರದೀಪ ಸಾಲಗೇರಿ ಖಜಾಂಚಿ, ಗ್ರಾಮದೇವತಾ ಜಾತ್ರಾ ಕಮಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts