More

    ದೇಶದ ಮಾಧ್ಯಮಗಳನ್ನು ಹೊಗಳಿದ ಪ್ರಧಾನಿ ಮೋದಿ; ಪತ್ರಿಕಾ ಗೇಟ್​ ಉದ್ಘಾಟನೆ

    ನವದೆಹಲಿ: ಜೈಪುರ (ರಾಜಸ್ಥಾನ)ದ ಜವಾಹರ್​ಲಾಲ್​ ನೆಹರು ಮಾರ್ಗದಲ್ಲಿ, ಪತ್ರಿಕಾ ಗ್ರುಪ್​​ನಿಂದ ಸ್ಥಾಪಿತವಾಗಿರುವ ಪತ್ರಿಕಾ ಗೇಟ್​​ ಹಾಗೂ ಗ್ರುಪ್​​ನ ಚೇರ್​​ಮನ್​ ಗುಲಾಬ್​ ಕೊಠಾರಿ ಬರೆದಿರುವ ಎರಡು ಪುಸ್ತಕಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದರು.
    ನಂತರ ಮಾತನಾಡಿ, ಭಾರತದ ಪತ್ರಿಕೋದ್ಯಮ ಮತ್ತು ಪತ್ರಕರ್ತರನ್ನು ಶ್ಲಾಘಿಸಿದರು.

    ಕೊವಿಡ್​-19 ಸಾಂಕ್ರಾಮಿಕ ಇರುವ ಈ ಸಂದರ್ಭದಲ್ಲಿ ಇಡೀ ವಿಶ್ವ ಭಾರತದೆಡೆಗೆ ಹೆಚ್ಚಿನ ಗಮನ ಹರಿಸುತ್ತಿದೆ. ಇದಕ್ಕೆ ಕಾರಣ ಮಾಧ್ಯಮಗಳೂ ಹೌದು. ಜಾಗತಿಕ ಮಟ್ಟದಲ್ಲಿ ನಾವು ಬಲವಾಗಿ ನಿಂತಿದ್ದೇವೆ. ನಮ್ಮ ದೇಶದ ಉತ್ಪನ್ನಗಳಷ್ಟೇ ಅಲ್ಲ, ಭಾರತದ ಧ್ವನಿ ಕೂಡ ಜಾಗತಿಕವಾಗಿದೆ. ಹಾಗೇ ನಮ್ಮ ಮಾಧ್ಯಮಗಳೂ ಜಾಗತೀಕರಣಗೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಇದನ್ನೂ ಓದಿ: ಯಡಿಯೂರಪ್ಪನವರಿಗೆ ಸಿದ್ದರಾಮಯ್ಯರಿಂದ ಸುದೀರ್ಘ ಪತ್ರ- ಇದರಲ್ಲೇನಿದೆ?

    ಕರೊನಾ ಕಾಲದಲ್ಲಿ ಮಾಧ್ಯಮಗಳು ಅಭೂತ ಪೂರ್ವವಾಗಿ ಕೆಲಸ ಮಾಡಿವೆ. ಜನರಲ್ಲಿ ಹೆಚ್ಚಿನ ಅರಿವು ಮೂಡಿಸಿವೆ.
    ಹಾಗೇ ಮಾಧ್ಯಮಗಳು ಸರ್ಕಾರಗಳು, ಆಡಳಿತದ ತಪ್ಪುಗಳನ್ನು ತೋರಿಸಿ, ಟೀಕಿಸುವ ಮೂಲಕ ಎಚ್ಚರಿಸುವ ಕೆಲಸವನ್ನೂ ಮಾಡುತ್ತಿವೆ. ಅಂಥ ಟೀಕೆಗಳಿಂದ ಪ್ರತಿಯೊಬ್ಬರೂ ಪಾಠ ಕಲಿಯುವ ಅಗತ್ಯವಿದೆ. ಸಕಾರಾತ್ಮಕವಾಗಿ ಟೀಕೆಗಳನ್ನು ಮಾಡುವುದರಿಂದ, ಅದರಿಂದ ಕಲಿಯುವ ಪಾಠಗಳಿಂದ ಭಾರತದ ಪ್ರಜಾಪ್ರಭುತ್ವ ಇನ್ನಷ್ಟು ಸದೃಢಗೊಳ್ಳುತ್ತದೆ ಎಂದು ಹೇಳಿದರು.

    ಹಾಗೇ ಈಗಿನ ಯುವಪೀಳಿಗೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಹೆಚ್ಚೆಚ್ಚು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. (ಏಜೆನ್ಸೀಸ್​)

    ರೈಲ್ವೆ ಇಲಾಖೆ ಬಿಡಲಿದೆ ‘ತದ್ರೂಪಿ ರೈಲು’ ಏನಿದು, ಏಕಿದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts