More

    ಥಲಸ್ಸೆಮಿಯಾ ಪೀಡಿತ ಮಕ್ಕಳ ಆರೈಕೆ ಸಂಕೀರ್ಣ

    ಬೆಳಗಾವಿ: ಥಲಸ್ಸೆಮಿಯಾ ಪೀಡಿತ ಮಕ್ಕಳ ಆರೈಕೆ ಅತ್ಯಂತ ಸಂಕೀರ್ಣತೆಯಿಂದ ಕೂಡಿರುತ್ತದೆ. ಆ ಮಕ್ಕಳ ಪಾಲಕರು ಅನುಭವಿಸುವ ಯಾತನೆ ಬೇರೆಯವರಿಗೆ ಅರಿವಿಗೆ ಬರುವುದಿಲ್ಲ. ಪ್ರತಿ ತಿಂಗಳು ರಕ್ತ ವರ್ಗಾವಣೆಗೆ ಆಸ್ಪತ್ರೆಗೆ ಅಲೆದಾಡಬೇಕು. ಆ ಮಕ್ಕಳಲ್ಲಿ ರಕ್ತ ಉತ್ಪಾದನೆಯಾಗುವುದಿಲ್ಲ. ಹಾಗಾಗಿ ಮಕ್ಕಳ ಆರೋಗ್ಯ ಕಾಪಾಡಲು ರಕ್ತ ಅತ್ಯವಶ್ಯ. ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಲು ಸಹಕರಿಸಬೇಕು ಎಂದು ಮಹೇಷ ಫೌಂಡೇಶನ್ ಅಧ್ಯಕ್ಷ ಮಹೇಶ ಜಾಧವ ಹೇಳಿದರು.

    ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಯುವ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಥಲಸ್ಸೇಮಿಯಾ ಕೇರ್ ಸೆಂಟರ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಥಲಸ್ಸೇಮಿಯಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ರಕ್ತದಾನ ಬಹಳಷ್ಟು ಮಹತ್ವ ಪಡೆದಿದೆ. ರಕ್ತವು ಯಾವುದೇ ಮೂಲದಿಂದ ಲಭಿಸುವುದಿಲ್ಲ. ಅದನ್ನು ದಾನದಿಂದಲೇ ಸಂಗ್ರಹಿಸಬೇಕಾಗುತ್ತದೆ ಎಂದರು.

    ಚಿಕ್ಕ ಮಕ್ಕಳ ತಜ್ಞ ವೈದ್ಯೆ ಡಾ.ಸುಜಾತಾ ಜಾಲಿ ಮಾತನಾಡಿ, ಆಸ್ಪತ್ರೆಯಲ್ಲಿ ಥಲಸ್ಸೆಮಿಯಾ ಪೀಡಿತ ಸುಮಾರು 240 ಮಕ್ಕಳಿದ್ದು, ಅವರಿಗೆ ಉಚಿತ ಚಿಕಿತ್ಸೆ ಹಾಗೂ ಬೋನ್ ಮ್ಯಾರೋ ಮಾಡಲಾಗುತ್ತಿದೆ. ಈವರೆಗೆ ಸುಮಾರು 30 ಬೋನ್ ಮ್ಯಾರೋ ಮಾಡಲಾಗಿದೆ. ಪ್ರತಿದಿನ 25 ಬಾಟಲ್ ರಕ್ತವನ್ನು ಕೇವಲ ಥಲಸ್ಸೆಮಿಯಾ ಮಕ್ಕಳಿಗೆ ನೀಡಲಾಗುತ್ತಿದೆ. ಸಂಕಲ್ಪ ಹಾಗೂ ರೆಡ್‌ಕ್ರಾಸ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು, ರಕ್ತ ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.

    ರೆಡ್ ಕ್ರಾಸ್ ಸಂಸ್ಥೆಯ ಡಾ. ಎನ್.ಎಸ್. ಮೂಲಿಮನಿ ಮಾತನಾಡಿದರು. ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಸ್. ಮಹಾಂತಶೆಟ್ಟಿ ಮಾತನಾಡಿದರು. ಡಾ. ಆರ್.ಬಿ. ನೇರಲಿ, ಬ್ಲಡ್ ಬ್ಯಾಂಕ್ ಮುಖ್ಯಸ್ಥ ಎಸ್.ವಿ. ವಿರಗಿ, ಡಾ. ವಿಶ್ವನಾಥ ಪಟ್ಟಣಶೆಟ್ಟಿ, ಡಾ.ಆರಿಫ್ ಮಾಲ್ದಾರ, ಡಾ.ಅಭಿಲಾಷಾ, ಡಾ.ರಾಜಶೇಖರ ಸೋಮನಟ್ಟಿ, ಡಾ.ಅಶ್ವಿನಿ ನರಸಣ್ಣವರ, ನಮರ್ಥ ದೇವಳ್ಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts