More

    ಸೂಪರ್​ಮಾರ್ಕೆಟ್​ನಲ್ಲಿ ಐಸ್​ಕ್ರೀಂ ತಿಂದ ಯುವಕನಿಗೆ ಒಂದು ತಿಂಗಳು ಜೈಲು ಶಿಕ್ಷೆ; ಹಾಗಂತ ಆತ ಕದ್ದಿರಲಿಲ್ಲ…ಕತೆ ಬೇರೇನೆ ಇದೆ ಓದಿ…

    24 ವರ್ಷದ ಯುವಕ ಐಸ್​ಕ್ರೀಂ ತಿಂದು ಒಂದು ತಿಂಗಳ ಮಟ್ಟಿಗೆ ಜೈಲು ವಾಸ ಅನುಭವಿಸುವಂತಾಯಿತು. ಆತನ ಸ್ವಯಂಕೃತ ಅಪರಾಧಕ್ಕೆ ಯುಎಸ್​ ಟೆಕ್ಸಾಸ್​ ಕೋರ್ಟ್​ ಒಂದರ ನ್ಯಾಯಾಧೀಶರು ನೀಡಿದ ಶಿಕ್ಷೆ ಇದು..

    ಡಿ.ಆಡ್ರಿಯನ್ ಆ್ಯಂಡರ್ಸನ್​ ಎಂಬ 24 ವರ್ಷದ ಯುವಕ ತನ್ನ ತಂದೆಯೊಂದಿಗೆ ಟೆಕ್ಸಾಸ್​​ನ ವಾಲ್​ಮಾರ್ಟ್​ ಸೂಪರ್​ಮಾರ್ಕೆಟ್​ಗೆ ತೆರಳಿದ್ದ. ಅಲ್ಲಿ ಅವನು ಫ್ರಿಜ್​ನಲ್ಲಿರುವ ಐಸ್​ಕ್ರೀಂ ಕಪ್​ ತೆಗೆದುಕೊಂಡು, ಅದರ ಮುಚ್ಚಲ ತೆರೆದು ಸೀದಾ ನಾಲಿಗೆ ಹಾಕಿ ನೆಕ್ಕಿದ. ಅಷ್ಟು ಮಾಡಿದ ಬಳಿಕ ಮತ್ತೆ ಆ ಬರಿದಾದ ಕಪ್​​ನ್ನು ಅದೇ ಫ್ರಿಜ್​ನಲ್ಲಿ ಇಟ್ಟಿದ್ದ. ಇಷ್ಟೆಲ್ಲ ಮಾಡಿ ಸುಮ್ಮನೆ ಇರುವ ಬದಲು ತನ್ನ ಎಡವಟ್ಟು ಕೆಲಸದ ವಿಡಿಯೋ ಕ್ಲಿಪ್​ನ್ನು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದ. ಇದೆಲ್ಲ ಆಗಿದ್ದು 2019ರ ಆಗಸ್ಟ್​ನಲ್ಲಿ.

    ಆಡ್ರಿಯನ್​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು. ಆತ ಐಸ್​ಕ್ರೀಮ್​ ಕಪ್​ಗೆ ಬಾಯಿ ಹಾಕಿ ನೆಕ್ಕಿದ್ದರ ಬಗ್ಗೆಯೇ ಹೆಚ್ಚು ಚರ್ಚೆಯಾಗಿತ್ತು.

    ಇದನ್ನು ನೋಡಿದ ಪೊಲೀಸರು ಇದೊಂದು ಕಿಡಿಗೇಡಿತನವಾಗಿದೆ. ಅಪರಾಧ ಎನಿಸಿಕೊಳ್ಳುತ್ತದೆ ಎಂದು ಪ್ರಕರಣ ದಾಖಲಿಸಿ, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಎಂಜಲು ಮಾಡಿದ ಐಸ್​ಕ್ರೀಂ ಕಪ್​ನ್ನು ಪುನಃ ಫ್ರಿಜ್​ನಲ್ಲಿ ಇಟ್ಟಿದ್ದರಿಂದ, ಅದರಲ್ಲಿದ್ದ ಎಲ್ಲ ಐಸ್​ಕ್ರೀಂಗಳನ್ನೂ ತೆಗೆಯಬೇಕಾಯಿತು. ಇದರಿಂದ ನಷ್ಟವಾಗಿದೆ. ಹಾಗಾಗಿ ಆ್ಯಂಡರ್ಸನ್​ ಐಸ್​ಕ್ರೀಂ ಕಂಪನಿಗೆ 1565 ಯುಎಸ್ ಡಾಲರ್​ಗಳನ್ನು ಪಾವತಿಸಬೇಕು, 1000 ಯುಎಸ್​ ಡಾಲರ್​ಗಳಷ್ಟು ದಂಡ ತುಂಬಬೇಕು ಮತ್ತು 30 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಮಾ.5ರಂದು ತೀರ್ಪು ನೀಡಿದೆ.

    ಈ ಯುವಕ ತನ್ನ ವಿಡಿಯೋ ಚಿತ್ರೀಕರಣಕ್ಕಾಗಿ ಮಾತ್ರ ಹೀಗೆ ಮಾಡಿದ್ದ. ಬಳಿಕ ಖಾಲಿಯಾದ ಐಸ್​ಕ್ರೀಂ ಕಪ್​ನ್ನು ಫ್ರಿಜ್​ನಿಂದ ತೆಗೆದು, ಅದನ್ನು ತೆಗೆದುಕೊಂಡು ಹೋಗಿದ್ದು ಸೂಪರ್​ಮಾರ್ಕೆಟ್​ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಯುವಕ ಮತ್ತು ಅವನ ತಂದೆ ಪೊಲೀಸರೆದುರು ಐಸ್​ಕ್ರೀಂಗೆ ಬಿಲ್​ ಮಾಡಿದ್ದನ್ನು, ರಶೀದಿ ಪಡೆದಿದ್ದನ್ನು ತೋರಿಸಿದರೂ ಪ್ರಯೋಜನವಾಗಲಿಲ್ಲ. ಸಾರ್ವಜನಿಕವಾಗಿ ಇಂಥದ್ದೆಲ್ಲ ಒಳ್ಳೆಯದಲ್ಲ, ಆರೋಗ್ಯ, ಸ್ವಚ್ಛತೆಗೆ ಸಂಬಂಧ ಪಟ್ಟ ವಿಚಾರ ಎಂದು ಹೇಳಿದ ಪೊಲೀಸರು ಇದನ್ನೊಂದು ಅಪರಾಧ ಎಂದೇ ಪರಿಗಣಿಸಿದರು.

    ಈ ಹಿಂದೆ ಹುಡುಗಿಯೋರ್ವಳು ಇಂಥದ್ದೇ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಳು. ಆಕೆ ಇನ್ನೂ 17 ವರ್ಷದವಳಾದ ಕಾರಣ ಜೈಲಿಗೆ ಹಾಕಿರಲಿಲ್ಲ ಎಂದು ವರದಿಯಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts