More

    ಇಡೀ ಜಗತ್ತು ಕೊರೊನಾ ಭೀತಿಯಲ್ಲಿದ್ದರೆ ಅತ್ತ ನೈಜೀರಿಯಾಕ್ಕೆ ವಕ್ಕರಿಸಿದೆ ಇನ್ನೊಂದು ಮಾರಕ ವೈರಸ್ ಲಾಸ್ಸಾ; 41 ಜನರು ಸಾವು, 258 ಮಂದಿಗೆ ಸೋಂಕು

    ನೈಜೀರಿಯಾ: ಸದ್ಯ ಇಡೀ ಜಗತ್ತು ಕೊರೊನಾ ವೈರಸ್​ ಬಗ್ಗೆ ವಿಪರೀತ ತಲೆಕೆಡಿಸಿಕೊಂಡಿದ್ದರೆ ಆಫ್ರಿಕನ್​ ಕಂಟ್ರಿ ನೈಜೀರಿಯಾದಲ್ಲಿ ಮತ್ತೊಂದು ಭೀಕರ ವೈರಸ್​ ಸದ್ದಿಲ್ಲದೆ ಜನರನ್ನು ಬಲಿಪಡೆಯುತ್ತಿದೆ.

    2020ನೇ ವರ್ಷ ಪ್ರಾರಂಭದಿಂದ ನೈಜೀರಿಯಾದ ಸುಮಾರು 19 ರಾಜ್ಯಗಳಲ್ಲಿ ಲಾಸ್ಸಾ ವೈರಸ್​ ಸೋಂಕು ಹರಡಿದೆ. ಈ ಜ್ವರಕ್ಕೆ ಈಗಾಗಲೇ 41 ಜನರು ಮೃತಪಟ್ಟಿದ್ದು 258 ಮಂದಿಗೆ ಸೋಂಕು ತಗುಲಿದ್ದು ದೃಢಪಟ್ಟಿದೆ. ಅದರಲ್ಲಿ ಏಳು ಮಂದಿ ಆರೋಗ್ಯ ಕಾರ್ಯಕರ್ತರಲ್ಲಿಯೂ ಸೋಂಕು ಪತ್ತೆಯಾಗಿದೆ.

    ಈ ವೈರಸ್​ ಹೆಚ್ಚಾಗಿ 11 ರಿಂದ 40 ವರ್ಷದವರೆಗಿನವರಲ್ಲಿ ಕಂಡುಬರುತ್ತಿದೆ ಎಂದು ನೈಜೀರಿಯನ್​ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್​​ (ನೈಜೀರಿಯನ್​ ರೋಗ ನಿಯಂತ್ರಣಾ ಕೇಂದ್ರ)ನ ಅಧಿಕಾರಿಗಳು ತಿಳಿಸಿದ್ದಾರೆ.
    ಇದೊಂದು ರಕ್ತಸ್ರಾವಯುಕ್ತ ಜ್ವರವಾಗಿದ್ದು ಮೊದಲು ಉತ್ತರ ನೈಜೀರಿಯಾದ ಲಾಸ್ಸಾ ಎಂಬ ಪಟ್ಟಣದಲ್ಲಿ ಕಾಣಿಸಿಕೊಂಡಿತು. ಅದೇ ಕಾರಣಕ್ಕೆ ಈ ವೈರಸ್​ಗೆ ಲಾಸ್ಸಾ ಎಂದು ಹೆಸರಿಡಲಾಗಿದೆ.

    ರಕ್ತಸ್ರಾವ, ಸುಸ್ತು, ತಲೆನೋವು, ವಾಂತಿ, ಸ್ನಾಯು ಸೆಳೆತಗಳು ಲಾಸ್ಸಾ ಜ್ವರದ ಲಕ್ಷಣಗಳು. ಆದರೆ ಲಾಸಾ ಅಷ್ಟು ಬೇಗ ಪತ್ತೆಯಾಗುವುದು ಕಷ್ಟ ಎನ್ನಲಾಗಿದೆ. ಲಾಸ್ಸಾ ವೈರಸ್​ನಿಂದ ಸಂಭವಿಸುವ ಸಾವಿನ ಪ್ರಮಾಣ ಶೇ.1 ರಷ್ಟು ಎಂದು ವಿಶ್ವಸಂಸ್ಥೆ ತಿಳಿಸಿದೆ.

    ಯುಎಸ್​ನ ರೋಗ ನಿಯಂತ್ರಣಾ ಕೇಂದ್ರಗಳ ಪ್ರಕಾರ ಪಶ್ಚಿಮ ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ಲಾಸ್ಸಾ ವೈರಸ್​ ಪ್ರತಿವರ್ಷವೂ ಸಾಮಾನ್ಯವಾಗಿದೆ. ಸುಮಾರು 1 ಲಕ್ಷದಿಂದ 3 ಲಕ್ಷದಷ್ಟು ಜನರಿಗೆ ಸೋಂಕು ತಗುಲುತ್ತದೆ. ಅದರಲ್ಲಿ ಸುಮಾರು 5000 ಮಂದಿ ಸಾಯುತ್ತಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts