More

    ಹಾಥರಸ್ ಪ್ರಕರಣ ವಿರೋಧಿಸಿ ಪ್ರತಿಭಟನೆ

    ತೇರದಾಳ: ಉತ್ತರ ಪ್ರದೇಶದ ಹಾಥರಸ್ ಪಟ್ಟಣದ ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಸಮೀಪದ ಹನಗಂಡಿ ಗ್ರಾಮದ ಮುಖ್ಯರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಮೇಣದದೀಪ ಹಚ್ಚಿ ಮಂಗಳವಾರ ಮೃತಳ ಆತ್ಮಕ್ಕೆ ಶಾಂತಿ ಕೋರಿದರು.

    ಕಾಂಗ್ರೆಸ್ ಧುರೀಣ ಚಂದ್ರಶೇಖರ ಗುಬಚಿ ಮಾತನಾಡಿ, ಉತ್ತರ ಪ್ರದೇಶದಲ್ಲಿ ನಡೆದಂತಹ ಅಮಾನವೀಯ ಘಟನೆ ಇದಾಗಿದೆ. ಅಲ್ಲಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿದ್ದು, ಅಲ್ಲಿನ ಸರ್ಕಾರ ಅಸಮರ್ಥವಾಗಿದೆ. ಹೀಗಾಗಿ ಹೆಣ್ಣುಮಕ್ಕಳು ಜೀವಭಯದಲ್ಲಿ ಕಾಲಕಳೆಯುವಂತಾಗಿದೆ. ಅತ್ಯಾಚಾರಿ, ಕೊಲೆಗಾರರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ತಪ್ಪನ್ನು ಯಾರೂ ಮಾಡದಂತೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

    ಅದಕ್ಕೂ ಮುನ್ನ ಕೆಲಹೊತ್ತು ಜಮಖಂಡಿ-ಕಾಗವಾಡ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
    ಹಸನ್ ಮೌಲಾ, ಅಭಿಮನ್ಯು ಗುಬಚಿ, ವಿಠ್ಠಲ ಯಳಕಾರ, ಅಜೀತ ಯಳಕಾರ, ತಾಲಿಬಾ ಅಲಾಸ್, ಇಲಾಹಿ ಕಾಲಿ, ವಿಠ್ಠಲ ಯಳಕಾರ ಸೇರಿದಂತೆ ಗ್ರಾಮಸ್ಥರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts