More

    ಮಲೆನಾಡ ಸೊಗಡು ಸೃಷ್ಟಿ

    ತೇರದಾಳ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬುಧವಾರ ನಸುಕಿನಿಂದಲೇ ಮಳೆ ಪ್ರಾರಂಭವಾಗಿ ಮಲೆನಾಡಿನ ಸೊಗಡು ಸೃಷ್ಟಿಯಾಗಿದೆ. ಜನರು ಮನೆಗಳನ್ನು ಬಿಟ್ಟು ಹೊರಬಾರದೆ ಇಡೀ ದಿನ ಮನೆಯಲ್ಲಿಯೇ ಉಳಿಯುವಂತಹ ಪರಿಸ್ಥಿತಿ ಉಂಟಾಯಿತು.

    ನಗರದ ಬಸ್ ನಿಲ್ದಾಣದ ಆವರಣದಲ್ಲಿರುವ ಗಿಡ ಶುದ್ಧ ಕುಡಿಯುವ ನೀರಿನ ಘಟಕದ ಮೇಲೆ ಬಿದ್ದಿದೆ. ಈಗಾಗಲೇ ತಾಲೂಕಿನಲ್ಲಿ 126 ಮನೆಗಳು ಬಿದ್ದಿದ್ದು, ಮಂಗಳವಾರ ಒಂದೇ ದಿನ 60ಕ್ಕೂ ಅಧಿಕ ಮನೆಗಳು ಬಿದ್ದಿವೆ. ಮಣ್ಣಿನ ಮನೆಗಳಲ್ಲಿ ವಾಸ ಮಾಡುವ ಜನರು ಜೀವ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ.

    ಕಬ್ಬು, ಅರಿಶಿಣ, ಗೋವಿನ ಜೋಳ, ಹುರಳಿ, ಗೋಧಿ ಸೇರಿ ಅನೇಕ ಬೆಳೆಗಳಲ್ಲಿ ನೀರು ನಿಂತಿರುವುದರಿಂದ ರೈತರು ಹಾನಿ ಅನುಭವಿಸು ವಂತಾಗಿದೆ. ಮಳೆ ಆರ್ಭಟದ ನಡುವೆ ಸ್ಥಳೀಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಸ್.ಎಂ.ಬಿರಾದಾರ, ಜಮಖಂಡಿ ಕೃಷಿ ಇಲಾಖೆ ಉಪನಿರ್ದೇಶಕ ಆರ್.ಜಿ. ನಾಗಣ್ಣವರ ಹಳಿಂಗಳಿ, ಸಸಾಲಟ್ಟಿ ಗ್ರಾಮಗಳಿಗೆ ತೆರಳಿ ಮಳೆಯಲ್ಲಿ ನಿಂತ ಕಬ್ಬು, ಗೋವಿನ ಜೋಳ, ಇನ್ನಿತರ ಬೆಳೆಗಳನ್ನು ವೀಕ್ಷಿಸಿ, ವರದಿ ಮಾಡಿಕೊಂಡರು. ತಾಂತ್ರಿಕ ಅಧಿಕಾರಿ ಶ್ರೀನಿವಾಸ ಪಾಟೀಲ, ಎಎಒ ಬಿ.ಪಿ.ಚೌಗಲಾ ಹಾಗೂ ರೈತರು ಇದ್ದರು.

    ತಾಲೂಕಿನಲ್ಲಿ ಇಲ್ಲಿವರೆಗೆ ಮಳೆಯಿಂದಾಗಿ 126 ಮನೆಗಳು ಬಿದ್ದಿವೆ. ರಬಕವಿಯಲ್ಲಿ ಒಂದು ಎಮ್ಮೆ ಸತ್ತಿದೆ. ಇದನ್ನು ಹೊರತುಪಡಿಸಿ ಯಾವುದೇ ಪ್ರಾಣಹಾನಿ ಸಂಭಂವಿಸಿಲ್ಲ.
    ಬಸವರಾಜ ತಾಳಿಕೋಟಿ, ಕಂದಾಯ ವೃತ್ತ ನಿರೀಕ್ಷಕ, ತೇರದಾಳ, ರಬಕವಿ-ಬನಹಟ್ಟಿ

    ತಾಲೂಕಿನಲ್ಲಿ ಮಳೆಯಿಂದಾಗಿ ಗೋವಿನಜೋಳ, ಕಬ್ಬು ಬೆಳೆಗಳು ಹೆಚ್ಚಾಗಿ ಹಾನಿಗೊಳಗಾಗಿವೆ. ತಾಲೂಕಿನ 31 ಹಳ್ಳಿಗಳಲ್ಲೂ ಸಮೀಕ್ಷೆ ಕಾರ್ಯ ನಡೆದಿದೆ. ಮಳೆ ನಿಂತ ನಂತರ ಹಾನಿಗೊಳಗಾದ ಬೆಳೆ ಬಗ್ಗೆ ನಿಖರವಾದ ಮಾಹಿತಿ ಸಿಗಲಿದೆ.
    – ಎಸ್.ಎಂ. ಬಿರಾದಾರ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ತೇರದಾಳ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts