More

    ತೆಂಗು ಉತ್ಪಾದನೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ : ವಾಣಿಜ್ಯ ಬೆಳೆಯಾಗಿ ತೆಂಗು ರೈತರಿಗೆ ಸಹಕಾರಿ

    ಮಾಗಡಿ : ವಾಣಿಜ್ಯ ಬೆಳೆಯಾಗಿ ತೆಂಗು ರೈತರಿಗೆ ಸಹಕಾರಿಯಾಗಿದೆ ಎಂದು ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪ್ರೀತು ಹೇಳಿದರು.ತಾಲೂಕಿನ ಕಲ್ಯಾ ಕಾಲನಿ ಸಂಪತ್ ಕುಮಾರ್ ತೋಟದಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಸಹಯೋಗದೊಂದಿಗೆ ಶನಿವಾರ ನಡೆದ ತೆಂಗಿನ ಬೆಳೆಯಲ್ಲಿ ಸಮಗ್ರ ಬೇಸಾಯದ ಕ್ಷೇತ್ರೋತ್ಸವಲ್ಲಿ ಮಾತನಾಡಿದರು.

    ಕಲ್ಪವೃಕ್ಷ ಎನಿಸಿಕೊಂಡಿರುವ ತೆಂಗು ರಾಜ್ಯದ ಮುಖ್ಯ ವಾಣಿಜ್ಯ ಬೆಳೆಗಳಲ್ಲೊಂದಾಗಿದೆ. ಕರ್ನಾಟಕ ತೆಂಗಿನ ಉತ್ಪಾದನೆ ಮತ್ತು ವಿಸ್ತೀರ್ಣದಲ್ಲಿ ಮೂರನೇ ಸ್ಥಾನದಲ್ಲಿದ್ದು, ಸುಮಾರು 4.95 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಸುಮಾರು 6,55,706 ಲಕ್ಷ ಕಾಯಿಗಳನ್ನು ಉತ್ಪಾದಿಸಲಾಗುತ್ತಿದೆ. ಪ್ರಮುಖವಾಗಿ ತುಮಕೂರು, ಹಾಸನ, ಚಿತ್ರದುರ್ಗ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತದೆ.

    ರಾಮನಗರ ಜಿಲ್ಲೆಯಲ್ಲಿ 17,223 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ವಾರ್ಷಿಕ ಸುಮಾರು 5.85 ಲಕ್ಷ ಕಾಯಿಗಳನ್ನು ಉತ್ಪಾದಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಳೆಯ ಅನಿಶ್ಚಿತತೆ, ನೀರಾವರಿ ಸೌಲಭ್ಯದ ಕೊರತೆ ಹಾಗೂ ಕೀಟ ಮತ್ತು ರೋಗಗಳ ಹಾವಳಿಯಿಂದ ತೆಂಗಿನ ಇಳುವರಿ ಕುಂಠಿತವಾಗುತ್ತಿದೆ.

    ಕೂಲಿಕಾರರ ವೆಚ್ಚ ಹಾಘೂ ತೆಂಗು ಬೆಳೆಗಾರರ ಆದಾಯವೂ ಕಡಿಮೆಯಾಗುತ್ತಿದೆ. ಇದನ್ನು ಮನಗೊಂಡು ಕೃಷಿ ವಿಜ್ಞಾನ ಕೇಂದ್ರ ತೆಂಗು ಕೃಷಿಯಲ್ಲಿ ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಲು ತಾಂತ್ರಿಕ ಮಾಹಿತಿ ಒದಗಿಸುತ್ತಿದ್ದು, ಈ ನಿಟ್ಟಿನಲ್ಲಿ ರೈತರನ್ನು ಪ್ರೇರೇಪಿಸಲಾಗುತ್ತಿದೆ ಎಂದರು.

    ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ದಿನೇಶ್ ಮಾತನಾಡಿ, ಸುಧಾರಿತ ತೆಂಗಿನ ಬೇಸಾಯ, ತೆಂಗಿನಲ್ಲಿ ತ್ಯಾಜ್ಯ ನಿರ್ವಹಣೆ, ತೆಂಗಿನ ಸಿಪ್ಪೆಯ ಮತ್ತು ಗರಿಯ ಸಾವಯವ ಹೊದಿಕೆ, ಕೊಳವೆ ಬಾವಿ ಜಲ ಮರುಪೂರಣ ಹಾಗೂ ಅಂತರ ಬೆಳೆ ಪದ್ಧತಿಯ ಬಗ್ಗೆ ತಾಂತ್ರಿಕ ಮಾಹಿತಿ ನೀಡಿ, ತೆಂಗಿನತೋಟದಲ್ಲಿ ವಿವಿಧ ಬಹು ಕಟಾವು ಮೇವಿನ ಬೆಳೆಗಳನ್ನು ಬೆಳೆದು ಹಸು ಮತ್ತು ಕುರಿ ಸಾಕಾಣಿಕೆ ಮಾಡಿ ಅಧಿಕ ಆದಾಯ ಗಳಿಸಿಬಹುದು. ತೆಂಗಿನ ತೋಟದಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ಬಳಸಿ ಎರೆಹುಳು ಗೊಬ್ಬರ, ಎರೆಜಲ ಹಾಗೂ ಜೀವಾಮೃತ ತಯಾರಿಸುವ ಬಗ್ಗೆ ಮಾಹಿತಿ ನೀಡಿದರು.

    ತಾಲೂಕು ಸಹಾಯಕ ಕೃಷಿ ನಿರ್ದೇಶಕ ನರಸಿಂಹಯ್ಯ, ತಾಲೂಕು ಸಹಾಯಕ ತೋಟಗಾರಿಕೆ ಅಧಿಕಾರಿ ಮೊಹಮ್ಮದ್ ನಜೀಮ್, ರೈತರಾದ ಸಂಪತ್ ಕುಮಾರ್, ಅಶೋಕ್, ಚಂದ್ರಯ್ಯ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts