More

    ಬಿಡುಗಡೆಯಾಯ್ತು 10 ಚಿತ್ರದ ಟೀಸರ್​ … ವಿನಯ್​ ನೋಡಿ ಕಲೀಬೇಕು ಅಂತಿದ್ದಾರೆ ಜನ

    ಲಾಕ್​ಡೌನ್​ಗೂ ಮುಂಚೆಯೇ ವಿನಯ್​ ರಾಜಕುಮಾರ್​ ಅಭಿನಯದ ಟೆನ್​ ಚಿತ್ರದ ಚಿತ್ರೀಕರಣ ಮುಗಿದಿತ್ತು. ಲಾಕ್​ಡೌನ್​ ಇಲ್ಲದಿದ್ದರೆ, ಬಹುಶಃ ಇಷ್ಟು ಹೊತ್ತಿಗೆ ಚಿತ್ರ ಬಿಡುಗಡೆಯಾಗಿರುತ್ತಿತ್ತೋ ಏನೋ? ಆದರೆ, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳೆಲ್ಲಾ ನಿಂತಿದ್ದರಿಂದ, ಇದೀಗ ಚಿತ್ರದ ಕೆಲಸಗಳೂ ನಿಧಾನವಾಗಿವೆ.

    ಇದನ್ನೂ ಓದಿ: ಮೊಬೈಲ್​ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಸ್ಟಾರ್​ ನಟಿಗೆ ದೋಖಾ

    ಈ ಮಧ್ಯೆ ಇಂದು ಬೆಳಿಗ್ಗೆ ಟೆನ್​ ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ಒಂದು ನಿಮಿಷ ಅವಧಿಯ ಈ ಟೀಸರ್​, ಯೂಟ್ಯೂಬ್​ನ ಪುಷ್ಕರ್​ ಫಿಲಂಸ್​ನ ಚಾನಲ್​ನಲ್ಲಿ ಬಿಡುಗಡೆಯಾಗಿ, ಜನರಿಂದ ಮೆಚ್ಚುಗೆ ಪಡೆದಿದೆ. ಪ್ರಮುಖವಾಗಿ ಈ ಚಿತ್ರದಲ್ಲಿನ ವಿನಯ್​ ರೂಪಾಂತರದ ಬಗ್ಗೆ ಜನ ಮಾತಾಡುತ್ತಿದ್ದಾರೆ. ಇನ್ನೂ ಕೆಲವರು, ವಿನಯ್​ ರಾಜಕುಮಾರ್​ ಇತ್ತೀಚಿನ ದಿನಗಳಲ್ಲಿ ವಿಭಿನ್ನವಾದ ಸ್ಕ್ರಿಪ್ಟ್​ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದು, ಸ್ಕ್ರಿಪ್ಟ್​ ವಿಚಾರದಲ್ಲಿ ಅವರನ್ನು ನೋಡಿ ಕಲಿಯಬೇಕು ಎಂದಿದ್ದಾರೆ.

    ಟೆನ್​ ಚಿತ್ರದಲ್ಲಿ ವಿನಯ್​ ರಾಜಕುಮಾರ್​ ಬಾಕ್ಸರ್​ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಅವರ ಕೋಚ್​ ಆಗಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಇದಲ್ಲದೆ ಅನೂಷಾ ರಂಗನಾಥ್, ಸವೀನ್ ಹೆಗ್ಡೆ, ಶ್ರೀವತ್ಸ ಶರ್ಮಾ, ಭರತ್​ ಮುಂತಾದವರು ನಟಿಸಿದ್ದಾರೆ.

    ಇದನ್ರ್ನೂ ಓದಿ: ಆರ್​​ಆರ್​ಆರ್​: ಚಿತ್ರೀಕರಣಕ್ಕೆ ಬರಲ್ಲ ಎಂದ ರಾಮ್​ಚರಣ್​, ತಾರಕ್​

    ಈ ಹಿಂದೆ ಉಳಿದವರು ಕಂಡಂತೆ, ಕಿರಿಕ್​ ಪಾರ್ಟಿ ಮುಂತಾದ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದ ಕರಮ್​ ಚಾವ್ಲಾ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸಿದರೆ, ಗಗನ್ ಬಡೇರಿಯಾ ಅವರ ಸಂಗೀತ ಈ ಚಿತ್ರಕ್ಕಿದೆ.

    ಬೇಕು ಅಂದವರೂ ಅವರೇ … ಬೇಡ ಅಂತಿರುವವರೂ ಅವರೇ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts