More

    ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಟೆಂಪೋ ಲಾವತ್ತಡ್ಕದಲ್ಲಿ ಪಲ್ಟಿ: ಚಾಲಕ ಸಹಿತ ಮೂವರು ಪರಾರಿ

    ಉಪ್ಪಿನಂಗಡಿ: ಅಕ್ರಮ ಗೋ ಸಾಗಾಟ ತಡೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಕೈಗೊಂಡಿರುವ ಕಟ್ಟುನಿಟ್ಟಿನ ತಪಾಸಣಾ ಪ್ರಕ್ರಿಯೆಯಿಂದಾಗಿ ಪಲಾಯನಗೈಯಲೆತ್ನಿಸಿದ ಗೂಡ್ಸ್ ಟೆಂಪೋವೊಂದು ರಾಷ್ಟ್ರೀಯ ಹೆದ್ದಾರಿ 75ರ ಲಾವತ್ತಡ್ಕ ಎಂಬಲ್ಲಿ ಮಂಗಳವಾರ ಬೆಳಗ್ಗೆ ಮಗುಚಿ ಬಿದ್ದಿದೆ. ಪರಿಣಾಮ ಭಾರಿ ಪ್ರಮಾಣದಲ್ಲಿ ಗೋಮಾಂಸ ಅಕ್ರಮ ಸಾಗಾಟ ಪತ್ತೆಯಾಗಿದ್ದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಲ್ಟಿ ಆಗಿರುವ ಟೆಂಪೋದಲ್ಲಿ ಒಂದು ಟನ್‌ನಷ್ಟು ಗೋಮಾಂಸ ಇತ್ತೆನ್ನಲಾಗಿದೆ. ವಾಹನದಲ್ಲಿ ಚಾಲಕ ಸಹಿತ 3 ಮಂದಿ ಆರೋಪಿಗಳು ಇದ್ದರೆನ್ನಲಾಗಿದ್ದು, ಅವರು ಟೆಂಪೋ ಪಲ್ಟಿ ಆಗುತ್ತಿದ್ದಂತೆ ಪರಾರಿಯಾಗಿದ್ದಾರೆ.

    ಪೊಲೀಸರ ತಡೆಯನ್ನು ಲೆಕ್ಕಿಸದೆ ಬಂದಿದ್ದರು: ಗುಂಡ್ಯದಲ್ಲಿ ಕರ್ತವ್ಯ ನಿರತರಾಗಿದ್ದ ನೆಲ್ಯಾಡಿ ಹೊರ ಠಾಣೆ ಪೊಲೀಸರು ಮಂಗಳವಾರ ನಸುಕಿನಲ್ಲಿ ಹಾಸನ ಕಡೆಯಿಂದ ಬಂದ ಟೆಂಪೋವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚನೆ ನೀಡಿದ್ದರು. ಆದರೆ ನಿಲ್ಲಿಸದ ಈ ವಾಹನ ಮುಂದೆ ಸಾಗುತ್ತಿದ್ದಂತೆ ಗಸ್ತಿನಲ್ಲಿದ್ದ ಪೊಲೀಸರು ಈ ವಾಹನವನ್ನು ಬೆನ್ನಟ್ಟಿ ಬಂದಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅತೀ ವೇಗದಲ್ಲಿ ಚಲಾಯಿಸಲ್ಪಟ್ಟ ಟೆಂಪೋ ಲಾವತ್ತಡ್ಕ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ.
    ಇತ್ತೀಚಿನ ದಿನಗಳಲ್ಲಿ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗೋ ಸಾಗಾಟ ಪ್ರಕರಣಗಳಿಗೆ ಪೊಲೀಸ್ ಇಲಾಖೆ ನಿಯಂತ್ರಣ ಹೇರಿರುವುದರಿಂದ ಪೊಲೀಸರ ಕಣ್ಣು ತಪ್ಪಿಸಲು ಪ್ರಯಾಣಿಕ ವಾಹನಗಳಲ್ಲಿ ಗೋಮಾಂಸ ಸಾಗಿಸುವ ಕೃತ್ಯಗಳು ನಡೆಯುತ್ತಿವೆ.

     

    ಬೆಂಗಳೂರಿನಲ್ಲಿ ಆಫ್ರಿಕಾ ಮಹಿಳೆಯರ ವೇಶ್ಯಾವಾಟಿಕೆ ದಂಧೆ; ಪೊಲೀಸರ ಮುಂದೇ ಅರೆ ನಗ್ನಳಾಗಿ ಕೂಗಾಡಿದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts