More

    ದೇವಾಲಯಗಳು ಮನುಷ್ಯನ ನೆಮ್ಮದಿಯ ತಾಣಗಳು

    ಕೊಟ್ಟೂರು: ದೇವಾಲಯಗಳು ಭಕ್ತರ ಮನಸ್ಸನ್ನು ಸನ್ಮಾರ್ಗದಕಡೆ ಕೊಂಡ್ಯೊಯುವ ಧಾರ್ಮಿಕ ಕೇಂದ್ರಗಳಾಗಿವೆ. ಮನುಷ್ಯನಿಗೆ ಶಾಂತಿ, ನೆಮ್ಮದಿ, ಕಷ್ಟಗಳನ್ನು ನಿವಾರಿಸುವಲ್ಲಿ ಪ್ರಮುಖ ಸ್ಥಾನವಹಿಸುತ್ತವೆ.

    ದೇಗುಲ ನಿರ್ಮಾಣವಾಗುವ ಗ್ರಾಮಗಳಲ್ಲಿ ಸೌಹಾರ್ದತೆ ಮನೆಮಾಡಲಿ ಎಂದು ಉಜ್ಜಿನಿ ಪೀಠದ ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ನುಡಿದರು.

    ಇದನ್ನೂ ಓದಿ:http://ದೇವಾಲಯಗಳು ಮನುಷ್ಯನ ನೆಮ್ಮದಿಯ ತಾಣಗಳು

    ತಾಲೂಕಿನ ಗಜಾಪುರ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಟ್ರಸ್ಟ್‌ನಿಂದ ಈಚೆಗೆ ಆಯೋಜಿಸಿದ್ದ ಗಂಗಾದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

    ಗಂಗೆ ಸಕಲ ಜೀವರಾಶಿಗೂ ಬೇಕಾದವಳು. ಗಂಗೆಯು ಸಕಲ ಪಾಪಗಳನ್ನು ತೊಳೆಯುವಂಥ ಶಕ್ತಿದೇವತೆ. ಅಂಥ ಪವಿತ್ರ ಗಂಗಾದೇವಿ ದೇವಸ್ಥಾನ ನಿರ್ಮಾಣ ಮಾಡಿದೆ ಸರ್ವರಿಗೂ ಒಳಿತಾಗಲಿ ಎಂದು ಆಶೀರ್ವದಿಸಿದರು.

    ಕೊಟ್ಟೂರಿನ ಡೋಣೂರು ಚಾನುಕೋಟಿ ಮಠದ ಪೀಠಾಧ್ಯಕ್ಷ ಶ್ರೀಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ನೀರಿನ ಮಹತ್ವ ಅರಿತು ಬಳಕೆಯಾಗಬೇಕು. ದೇವಸ್ಥಾನಗಳು ಕೇವಲ ಧಾರ್ಮಿಕ ಕೇಂದ್ರಗಳು ಅಷ್ಟೇಯಲ್ಲ ನಂಬಿಕೆಯ ನೆಲೆಗಳು.

    ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನಲ್ಲಿ ಮಳೆ ಕೊರತೆ ಕಾಡುತ್ತಿದ್ದು, ಬೆಳೆಗಳೆಲ್ಲಾ ಒಣಗುತ್ತಿವೆ. ಕೇವಲ 50 ಕಿ.ಮೀ ದೂರದಲ್ಲಿ ತುಂಗಭದ್ರಾ ಜಲಾಶಯವಿದ್ದರೂ ಈ ಭಾಗಕ್ಕೆ ನೀರಾವರಿ ಯೋಜನೆಗಳಿಲ್ಲ ಎನ್ನುವುದು ದುರ್ದೈವ.

    ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ರೈತರು ಹಾಗೂ ಸಾರ್ವಜನಿಕರು ನೀರಾವರಿ ಯೋಜನೆ ಜಾರಿಗೆ ತರುವಂತೆ ಒತ್ತಡ ಹಾಕಬೇಕಿದೆ ಎಂದರು.
    ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದ ಕ್ರಿಯಾಮೂರ್ತಿ ಶ್ರೀಶಂಕರ ಸ್ವಾಮೀಜಿ,

    ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ ಪ್ರಶಾಂತಸಾಗರ ಸ್ವಾಮೀಜಿ, ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ.ಐಮಡಿ ಶರಣಾರ್ಯರು, ನಿಜಶರಣ ಅಂಬಿಗರ ಚೌಡಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts