More

    ತಾಪಮಾನ ಏರಿಕೆಗೂ ಕರೊನಾ ಇಳಿಕೆಗೂ ಸಂಬಂಧ!

    ತಾಪಮಾನ ಹೆಚ್ಚಳದಿಂದಾಗಿ ಕರೊನಾ ವೈರಸ್ ಸಾಯುತ್ತದೆಯೇ? ವೈರಸ್ ಪಸರಿಸುವಿಕೆ ನಿಯಂತ್ರಣಕ್ಕೆ ಬರುತ್ತದೆಯೇ? ಎಂಬ ಬಗ್ಗೆ ವಿಶ್ವದಾದ್ಯಂತ ಹಲವು ಚರ್ಚೆಗಳು ನಡೆಯುತ್ತಿವೆ. ವಿಶ್ವದ ಹಲವು ತಜ್ಞರು, ವಿಜ್ಞಾನಿಗಳೂ ಈ ಬಗ್ಗೆ ಅನೇಕ ವಾದಗಳನ್ನು ಮಂಡಿಸಿದ್ದಾರೆ. ಮಹಾರಾಷ್ಟ್ರದ ನಾಗ್ಪುರದ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಎನ್​ಇಇಆರ್​ಐ) ಸಹ ಈ ಕುರಿತು ಸಂಶೋಧನೆ ನಡೆಸಿದ್ದು, ತಾಪಮಾನ ಹೆಚ್ಚಳದಿಂದಾಗಿ ಕರೊನಾ ವೈರಸ್ ನಿಯಂತ್ರಣಕ್ಕೆ ಬರಲಿದೆ ಎಂದು ತಿಳಿಸಿದೆ.

    ಬಲವಾದ ನಂಟು

    ತಾಪಮಾನ ಮತ್ತು ಕರೋನಾ ಸೋಂಕಿನ ನಡುವೆ ಶೇ. 85ರಷ್ಟು ಬಲವಾದ ಸಂಬಂಧವಿದೆ ಎಂದು ಎನ್​ಇಇಆರ್​ಐ ಕಂಡುಹಿಡಿದಿದೆ. ದೇಶದ ಕೆಲ ಪ್ರದೇಶಗಳಲ್ಲಿ ತಾಪಮಾನ ಹೆಚ್ಚಳವಾಗುತ್ತಿರುವುದು ಹಾಗೂ ಕರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದರ ಬಗ್ಗೆ ಈ ಅಧ್ಯಯನ ನಡೆಸಲಾಗಿದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳನ್ನು ಪ್ರಮುಖವಾಗಿ ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

    ಚಳಿಯಲ್ಲಿ ಹೆಚ್ಚು ಸಕ್ರಿಯ

    ಕರೊನಾ ಒಂದು ರೀತಿಯ ಹೊದಿಕೆಯ ವೈರಸ್ ಆಗಿದೆ. ಅದರ ಮೇಲೆ ಲಿಪಿಡ್ ಹೊದಿಕೆ ಇರುತ್ತದೆ. ಚಳಿ ವಾತಾವರಣ ಹೆಚ್ಚಾದಾಗ ವೈರಸ್ ಮೇಲಿನ ಲಿಪಿಡ್ ಗಟ್ಟಿಯಾಗಿ ಹೊದಿಕೆ ರೀತಿಯ ಪದರ ಉಂಟಾಗುತ್ತದೆ. ಹೀಗಾಗಿ ಬಿಸಿಲಿಗಿಂತ ಚಳಿಯಲ್ಲಿ ಕರೊನಾ ಹೆಚ್ಚು ಸಕ್ರಿಯವಾಗಿರುತ್ತದೆ ಎನ್ನಲಾಗಿದೆ.

    ಕರೊನಾ ಸಾಂಕ್ರಾಮಿಕ ರೋಗವಾಗಿದ್ದು, ಹೆಚ್ಚಿನ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಇದನ್ನು ತಡೆಗಟ್ಟಲು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಹೆಚ್ಚುತ್ತಿರುವ ತಾಪಮಾನದಿಂದ ಕರೊನಾ ಪ್ರಕರಣಗಳಲ್ಲಿ ಆಗುತ್ತಿರುವ ಇಳಿಕೆ ಗೋಚರಿಸುವುದಿಲ್ಲ.

    | ಹೇಮಂತ್ ಭರ್ವಾನಿ ಎನ್​ಇಇಆರ್​ಐನ ಸ್ಟ್ರಾಟೆಜಿಕ್ ಅರ್ಬನ್ ಮ್ಯಾನೇಜ್​ವೆುಂಟ್ ಕೇಂದ್ರದ ನಿರ್ದೇಶಕ

    ಸಾಮಾಜಿಕ ಅಂತರ ಪಾಲನೆ ಮಹತ್ವ

    ವಿಶ್ವ ಆರೋಗ್ಯ ಸಂಸ್ಥೆ (ಡಬ್ಲು್ಯಎಚ್​ಒ)ಯಿಂದ ಸಂಗ್ರಹಿಸಿದ ಕರೊನಾ ಮಾಹಿತಿ ಹಾಗೂ ಭಾರತೀಯ ಹವಾಮಾನ ಇಲಾಖೆಯ ತಾಪಮಾನ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಸರಾಸರಿ ನೈಜ ತಾಪಮಾನ ಮತ್ತು ಸಾಪೇಕ್ಷ ಆರ್ದ್ರತೆ ಹಾಗೂ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿನ ಕರೊನಾ ಪ್ರಕರಣಗಳ ಏರಿಕೆಯ ನಡುವಿರುವ ಸಂಬಂಧವನ್ನು ಎನ್​ಇಇಆರ್​ಐ ಅಧ್ಯಯನ ನಡೆಸಿದೆ. ಇದರ ಪ್ರಕಾರ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಹಗಲಿನ ವೇಳೆಯ ಸರಾಸರಿ ತಾಪಮಾನ 25 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿದ್ದಾಗ ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಭಾರತದಲ್ಲಿ ಕರೊನಾ ಅತೀ ವೇಗವಾಗಿ ಹರಡುವುದನ್ನು ತಾಪಮಾನ ಕಡಿಮೆಗೊಳಿಸಿದೆ. ಆದಾಗ್ಯೂ ಕರೊನಾ ಮುಕ್ತವಾಗಿರಲು ಸಾಮಾಜಿಕ ಅಂತರದ ಪಾಲನೆ ಬಹು ಮುಖ್ಯವಾಗಿದೆ ಎಂದು ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಹೇಳಿದೆ. ಸೂರ್ಯನ ಶಾಖ, ತಾಪಮಾನ ಹಾಗೂ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕರೊನಾ ವಿರುದ್ಧ ಪ್ರಬಲ ಪರಿಣಾಮ ತೋರಿಸಿದೆ ಎಂದು ಈಗಾಗಲೇ ಕೆಲ ಅಧ್ಯಯನಗಳು ಕೂಡ ಹೇಳಿವೆ.

    ಏಕೆ ಆತಂಕ?

    ಉಷ್ಣ ತಾಪಮಾನದಲ್ಲಿ ಕರೊನಾ ಪಸರಿಸುವಿಕೆ ವೇಗ ತಗ್ಗಲಿದೆ ಎನ್ನಲಾಗಿದೆಯಾದರೂ, ಇದರಿಂದ ಕರೊನಾ ಮುಕ್ತವಾಗಲು ಸಾಧ್ಯವಿಲ್ಲ. ಈ ಮಹಾಮಾರಿ ವಿರುದ್ಧ ಇನ್ನೂ ಕೂಡ ಔಷಧ ಅಥವಾ ಲಸಿಕೆ ಸಿದ್ಧಪಡಿಸಲಾಗಿಲ್ಲ. ಅತೀ ಹೆಚ್ಚು ತಾಪಮಾನ ಹೊಂದಿರುವ ದೇಶಗಳಲ್ಲೂ ಸಹ ಕರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

    1. ತಾಪಮಾನ ಏರಿಕೆ ಹಾಗೂ ಕರೊನಾ ಪ್ರಕರಣಗಳ ನಡುವೆ ಮಹಾರಾಷ್ಟ್ರದಲ್ಲಿ ಶೇ. 85 ಹಾಗೂ ಕರ್ನಾಟಕದಲ್ಲಿ ಶೇ. 88ರಷ್ಟು ಸಂಬಂಧವಿದೆ.

    2. ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಯಾವುದೇ ಪ್ರಯೋಜನವಿಲ್ಲ.

    3. 21 ರಿಂದ 23 ಡಿಗ್ರಿ ಸೆಲ್ಶಿಯಸ್​ನಲ್ಲಿ ಕರೊನಾ ವೈರಸ್ 72 ತಾಸುಗಳವರೆಗೂ ಬದುಕಬಲ್ಲದು.

    ಸುದ್ದಿ ನಿರೂಪಕನೇ ಸುದ್ದಿಯಾಗಿದ್ದು ಏಕೆ? ಅದೆಂಥಾ ಅರ್ಜೆಂಟ್​ನಲ್ಲಿದ್ದ ಈ ಮಹಾನುಭಾವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts