More

    ಭಾರತ ತುಂಡಾದ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಸಿ

    ಅಕ್ಕಿಆಲೂರ: ಸ್ವಾತಂತ್ರ್ಯದ ಹೆಸರಿನಲ್ಲಿ ಅಖಂಡ ಭಾರತ ತುಂಡಾದ ಕರಾಳ ಇತಿಹಾಸ ಮುಂದಿನ ಪೀಳಿಗೆಗೆ ಅರ್ಥೈಸಬೇಕು ಎಂದು ಆರ್‌ಎಸ್‌ಎಸ್ ಪ್ರಮುಖ ಗುರುರಾಜ ಕುಲಕರ್ಣಿ ಹೇಳಿದರು.

    ಪಟ್ಟಣದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಿಂದು ಜಾಗರಣಾ ವೇದಿಕೆಯಿಂದ ಸೋಮವಾರ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ದಿನಾಚರಣೆಯಲ್ಲಿ ಅವರು ಮಾತನಾಡಿದರು.

    ವಿಶ್ವಕ್ಕೆ ಆದರ್ಶವಾದ ಭಾರತ, ಸ್ವಾತಂತ್ರ್ಯದ ಒಂದೇ ರಾತ್ರಿಯಲ್ಲಿ ವಿಭಜನೆಯಾಗಿದ್ದಲ್ಲ. ಇದರ ಹಿಂದೆ ರಾಜಕೀಯ ಅಸ್ತಿತ್ವ ಮತ್ತು ತುಷ್ಟೀಕರಣ ನೀತಿಯ ದುರುದ್ದೇಶ ಅಡಗಿದೆ. ನಮ್ಮ ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಅನೇಕ ಪ್ರದೇಶಗಳ ದೇಶ ವಿಭಜನೆಯ ಪರಿಣಾಮ ಭಾರತದಿಂದ ಕೈಬಿಟ್ಟು ಹೋದವು. ನಮ್ಮ ನೆಲದ ಒಂದು ಪ್ರದೇಶ ಆ. 15ರ ಬೆಳಗ್ಗೆ ಪ್ರತ್ಯೇಕ ರಾಷ್ಟ್ರವಾಗಿ ಇಂದಿಗೂ ನಮ್ಮನ್ನು ದ್ವೇಷಿಸುತ್ತಿದೆ ಎಂದರೆ ಅದಕ್ಕೆ ಕಾರಣ ಒಂದು ಸಮುದಾಯ ಒಲಿಸಿಕೊಳ್ಳುವ ಕುತಂತ್ರವೇ ಹೊರತು, ದೇಶಕ್ಕೆ ಒಳಿತು ಬಯಸಿದ್ದಲ್ಲ. ಶತ ಶತಮಾನಗಳ ಜಗತ್ತಿನ ಎಲ್ಲ ರಾಷ್ಟ್ರದ ಅನೇಕ ನಾಗರಿಕತೆಗಳಿಗೆ ಆಶ್ರಯ ನೀಡಿದ ಹಿಂದು ಸಂಸ್ಕೃತಿಗೆ ಬಂದಿರುವ ಆಪತ್ತು ಎಂದರು.

    ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಭಾರತಕ್ಕೆ ಈಗ ಅಮೋಘ ಶಕ್ತಿ, ಸಾಮರ್ಥ್ಯ ಇದೆ. ಕೋಟ್ಯಂತರ ಭಾರತೀಯರ ಅಖಂಡ ಭಾರತದ ಸಂಕಲ್ಪ ಈಡೇರುವ ಸಮಯ ಬಹಳ ದೂರವಿಲ್ಲ ಎಂದರು.

    ಗುರುಕುಲ ಶಾಲೆಯ ಕಾರ್ಯದರ್ಶಿ ಮಹೇಶ ಸಾಲವಟಿಗಿ ಮಾತನಾಡಿದರು. ಇದಕ್ಕೂ ಮೊದಲು ಅಕ್ಕಿಆಲೂರಿನ ವಿವಿಧ ಬಡಾವಣೆಗಳಲ್ಲಿ ಪಂಜಿನ ಮೆರವಣಿಗೆಯಲ್ಲಿ ಸಾಗಿದ ನೂರಾರು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಭಾರತದ ಅಖಂಡತೆಗೆ ಘೋಷಣೆ ಮೊಳಗಿಸಿದರು. ಹಿಂದುಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts