More

    ಸ್ನೇಹಿತರಿಗೆ ಚಿಕನ್​ ಬಡಿಸಲಿಲ್ಲ ಅಂತಾ ಮದ್ವೆಯನ್ನೇ ರದ್ದು ಮಾಡಿದ ವರ! ಠಾಣೆ ಮೆಟ್ಟಿಲೇರಿದ ವಧುವಿನ ಕುಟುಂಬ

    ಹೈದರಾಬಾದ್​​: ಕೇಳಿದ ವರದಕ್ಷಿಣೆ ಕೊಡದಿದ್ದಾಗ ಅಥವಾ ವಧು-ವರರ ವಂಚನೆ ಬಯಲಾದಾಗ ಮದುವೆ ರದ್ದಾಗುವುದರ ಬಗ್ಗೆ ಕೇಳಿದ್ದೇವೆ. ಆದರೆ, ಇಲ್ಲೊಂದು ವಿಚಿತ್ರ ಪ್ರಕರಣ ವರದಿಯಾಗಿದ್ದು, ವಧುವಿನ ಕುಟುಂಬ ಸ್ನೇಹತರಿಗೆ ಚಿಕನ್​ ಊಟ ಬಡಿಸಲಿಲ್ಲ ಅಂತಾ ವರನೊಬ್ಬ ತನ್ನ ಮದುವೆಯನ್ನೇ ರದ್ದು ಮಾಡಿದ್ದಾನೆ.

    ಹೈದರಾಬಾದ್​ನ ಜೀಡಿಮೆಟ್ಲದ ಶಾಪುರ ನಗರದ ಜಗದ್ಗಿರಿ ಗುಟ್ಟಾ ರಿಂಗ್ ಬಸ್ತಿ ಮೂಲದ ಯುವಕನಿಗೂ ಹಾಗೂ ಕುತ್ಬುಳ್ಳಾಪುರದ ಹುಡುಗಿಗು ನ.28ರಂದು ಮದುವೆ ನಿಶ್ಚಯವಾಗಿತ್ತು. ಭಾನುವಾರ (ನ.27) ವಧು-ವರನ ಕುಟುಂಬ ಮದುವೆ ಮಂಟಪಕ್ಕೆ ತೆರಳಿತ್ತು. ಬಂಧು-ಬಳಗ ಹಾಗೂ ಫ್ರೆಂಡ್ಸ್​ ಮದುವೆ ಸಮಾರಂಭಕ್ಕೆ ಸಾಕ್ಷಿಯಾಗಲು ಆಗಮಿಸಿದ್ದರು. ಭಾನುವಾರ ರಾತ್ರಿ ವಧುವಿನ ಕುಟುಂಬ ಚಿಕನ್​ ಅಥವಾ ಮಟನ್​ ಊಟ ಬಡಿಸದೇ ಸಸ್ಯಹಾರಿ ಊಟ ಸಿದ್ಧಪಡಿಸಿ, ಉಣ ಬಡಿಸಿದ್ದರು. ವಧು ವಿನ ಮನೆಯವು ಮೂಲತಃ ಬಿಹಾರದ ಮಾರ್ವಾಡಿ ಕುಟುಂಬವಾಗಿದ್ದು, ಕಟ್ಟುನಿಟ್ಟಾಗಿ ಸಸ್ಯಹಾರ ಪದ್ಧತಿ ಅನುಸರಿಸುತ್ತಾರೆ. ಈ ಕಾರಣದಿಂದ ನಾನ್​ವೆಜ್​ ಊಟ ಮಾಡಿರಲಿಲ್ಲ.

    ವರನ ಸ್ನೇಹಿತರು ಈ ಬಗ್ಗೆ ವರನ ಬಳಿ ದೂರು ನೀಡಿದರು. ಯಾಕೆ ಚಿಕನ್​ ಮಾಡಿಲ್ಲ ಅಂತಾ ವರ ಕೇಳಿದ ಬಳಿಕ ವಧು-ವರನ ಕುಟುಂಬದ ನಡುವೆ ಜಗಳ ನಡೆದಿದೆ. ಹೇಳಿದಂತೆ ವಧುವಿನ ಕುಟುಂಬ ನಡೆದುಕೊಂಡಿಲ್ಲ ಎಂದು ಹೇಳಿ ವರನ ಕಡೆಯವರು ಮದುವೆಯನ್ನೇ ರದ್ದು ಮಾಡಿದ್ದಾರೆ. ಎರಡೂ ಕುಟುಂಬದ ನಡುವೆ ರಾಜಿ-ಪಂಚಾಯಿತಿ ಮಾಡಿದರೂ ಕೂಡ ಯಾವುದೇ ಫಲಪ್ರದವಾಗಲಿಲ್ಲ.

    ವರನ ಸ್ನೇಹಿತರು ಊಟ ಮಾಡದೆ ಹೋದಾಗ ವರನಿಗೆ ಬೇಸರವಾಯಿತು. ಅವರು ವಧುವಿನ ಕುಟುಂಬ ಸದಸ್ಯರೊಂದಿಗೆ ವಾಗ್ವಾದ ನಡೆಸಿದರು. ಆಚಾರ-ವಿಚಾರ ಗೊತ್ತಿಲ್ಲ ಎಂದು ಕೂಗಾಡಿ ಮದುವೆ ರದ್ದು ಮಾಡಿದರು. ಇದರಿಂದ ಅಸಮಾಧಾನಗೊಂಡ ವಧುವಿನ ಪೋಷಕರು ಗೆಡಿಮೆಟ್ಲ ಠಾಣೆಗೆ ತೆರಳಿ ಸಿಐಗೆ ದೂರು ನೀಡಿದ್ದಾರೆ.

    ವಿಷಯ ತಿಳಿದ ಪೊಲೀಸರು ಎರಡೂ ಕುಟುಂಬದವರನ್ನು ಠಾಣೆಗೆ ಕರೆಸಿ ಕುಟುಂಬಸ್ಥರಿಗೆ ಕೌನ್ಸೆಲಿಂಗ್ ಮಾಡಿದ್ದಾರೆ. ರದ್ದುಗೊಂಡ ಮದುವೆಯನ್ನು ಬುಧವಾರ ಮತ್ತೆ ನಡೆಸುವಂತೆ ಸೂಚಿಸಿದ್ದು, ಇದಕ್ಕೆ ಹುಡುಗನ ಸಂಬಂಧಿಕರು ಸಹ ಒಪ್ಪಿದ್ದಾರೆ. ಇದೀಗ ಚಿಕನ್ ಕರಿಯಿಂದ ಸ್ಥಗಿತಗೊಂಡಿದ್ದ ಮದುವೆ ಎರಡು ದಿನ ತಡವಾಗುತ್ತಿದೆ. (ಏಜೆನ್ಸೀಸ್​)

    ಪಕ್ಕದ್ಮನೆ ಯುವಕನ ಜತೆ ವಿವಾಹಿತ ಮಹಿಳೆ ಎಸ್ಕೇಪ್​! 10 ದಿನದ ಬಳಿಕ ಎರಡೂ ಕುಟುಂಬಕ್ಕೆ ಕಾದಿತ್ತು ಶಾಕ್​

    ಪರೀಕ್ಷೆಯಲ್ಲಿ 10 ಅಂಕ ಕಡಿಮೆ ಬಂತೆಂದು ಫೈನ್ ಹಾಕಲು ಮುಂದಾದ ಪ್ರಿನ್ಸಿಪಾಲ್; ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!

    ಪತಿಯ ಮುಂದೆ ಪ್ರದರ್ಶಿಸು ಸಾರ್ವಜನಿಕರ ಮುಂದಲ್ಲ! ಟ್ರೋಲ್​ಗೆ ಗುರಿಯಾದ ನಿವೇದಿತಾರ ಹೊಸ ಅವತಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts