More

    ಕೊವಿಡ್​-19 ಸೋಂಕಿತ ವೈದ್ಯೆಯನ್ನು ಸೆರೆಯಲ್ಲಿಟ್ಟ ಆಸ್ಪತ್ರೆ…! ಪೊಲೀಸ್​ ಹೇಳೋದೇನು?

    ಹೈದರಾಬಾದ್​: ಕೊವಿಡ್​-19 ಸೋಂಕಿತಳು ಆಸ್ಪತ್ರೆಯಿಂದ ಬಿಡುಗಡೆಯಾಗಬೇಕಿತ್ತು. ಆದರೆ ಆಕೆ 1.15 ಲಕ್ಷ ರೂ.ಬಿಲ್​ ಪಾವತಿ ಮಾಡಲಿಲ್ಲ ಎಂಬ ಕಾರಣಕ್ಕೆ ಅವಳನ್ನು ಆಸ್ಪತ್ರೆಯಲ್ಲೇ ಸೆರೆ ಹಿಡಿದಿಟ್ಟುಕೊಂಡ ಅಮಾನವೀಯ ಘಟನೆ ನಡೆದಿದೆ.

    ಆ ಮಹಿಳೆ ಕೂಡ ವೈದ್ಯೆ. 16 ದಿನಗಳ ಹಿಂದೆ ಅವರಲ್ಲಿ ಕೊವಿಡ್​ 19 ಇರುವುದು ದೃಢಪಟ್ಟಿತ್ತು. ಆಸ್ಪತ್ರೆಯಲ್ಲಿ ತಮ್ಮನ್ನೇಕೆ ಸೆರೆ ಹಿಡಿದಿಟ್ಟುಕೊಂಡಿದ್ದರು ಎಂಬ ಬಗ್ಗೆ ಡಾ. ಸುಲ್ತಾನಾ ಅವರೇ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ನನಗೆ 16 ದಿನಗಳ ಹಿಂದೆ ಕರೊನಾ ಸೋಂಕು ದೃಢಪಟ್ಟಿತು. ಯಾವುದೇ ಲಕ್ಷಣಗಳೂ ಇರಲಿಲ್ಲ. ಹಾಗಾಗಿ ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನೂ ತೆಗೆದುಕೊಂಡಿದ್ದೆ. ಆದರೆ ಜು.1ರಂದು ನನ್ನಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಕೂಡಲೇ ಹೋಗಿ ಚಾದರ್​ಘಾಟ್​ನಲ್ಲಿರುವ ಥಂಬೆ ಆಸ್ಪತ್ರೆಯಲ್ಲಿ ಅಡ್ಮಿಟ್​ ಆದೆ. ನಾನು ಅಲ್ಲಿ ಇದ್ದುದು ಒಂದೇ ದಿನ. ಜು.2ರಂದು ಡಿಸ್​​ಚಾರ್ಜ್​ ಆಗಬೇಕಿತ್ತು. ನಾನು ಅಡ್ಮಿಟ್ ಆಗುವಾಗ 40,000 ರೂ.ಡಿಪೋಸಿಟ್​ ಇಡಲು ಆಸ್ಪತ್ರೆಯವರು ಹೇಳಿದರು. ಹಾಗೇ ಡಿಸ್​ಚಾರ್ಜ್​ ಆಗುವಾಗ ಮತ್ತೆ 1.15 ಲಕ್ಷ ರೂಪಾಯಿ ಪಾವತಿ ಮಾಡಲು ಹೇಳಿದರು. ನಾನು ಇಷ್ಟೊಂದು ಹಣ ಏಕೆ ಎಂದು ಪ್ರಶ್ನಿಸಿದೆ. ಆದರೆ ಅವರು, ಹಣ ಕೊಡದ ವಿನಃ ಬಿಡುವುದಿಲ್ಲ ಎಂದು ಅಲ್ಲಿಯೇ ಸೆರೆ ಹಿಡಿದು ಇಟ್ಟುಕೊಂಡರು. ಅಂತೂ ಇಂದು ಬೆಳಗ್ಗೆ 1.3 ಲಕ್ಷ ರೂ.ಪಾವತಿ ಮಾಡಿದ ಮೇಲಷ್ಟೇ ನನಗೆ ಆಸ್ಪತ್ರೆಯಿಂದ ಹೊರಹೋಗಲು ಬಿಟ್ಟರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಕಾಸ್​ ದುಬೆ ಸಹಚರ ಅರೆಸ್ಟ್​; ಕೊನೆಗೂ ನಿಜವಾಗಿಯೇ ಹೋಯ್ತು ಪೊಲೀಸರ ಅನುಮಾನ…!

    ಆದರೆ ಪೊಲೀಸರು ವೈದ್ಯೆಯ ಮಾತನ್ನು ಒಪ್ಪಲಿಲ್ಲ. ನಾವು ಆಸ್ಪತ್ರೆಯ ಪ್ರತಿ ಸಿಸಿಟಿವಿ ಕ್ಯಾಮರಾವನ್ನೂ ಪರಿಶೀಲನೆ ನಡೆಸಿದ್ದೇವೆ. ಈ ಮಹಿಳೆಯನ್ನು ಯಾರೂ ಸೆರೆ ಹಿಡಿದು ಇಟ್ಟುಕೊಂಡಿರಲಿಲ್ಲ ಎಂದು ಚಾದರ್​ಘಾಟ್​ ಪೊಲೀಸ್​ ಅಧಿಕಾರಿ ಸತೀಶ್​ ಹೇಳಿದ್ದಾರೆ. ಹಾಗೇ ಯಾವುದೇ ಪ್ರಕರಣ ದಾಖಲು ಮಾಡುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    ನನ್ನ ಮಗ ಶರಣಾಗದಿದ್ದರೆ ಕೊಂದು ಬಿಡಿ ಎಂದಿದ್ದ ದುಬೆ ತಾಯಿ ಈಗ ಪೊಲೀಸರ ವಿರುದ್ಧ ತಿರುಗಿಬಿದ್ದಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts