ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ನಾಲ್ವರು ದುರ್ಮರಣ.. ಮೂವರ ಸ್ಥಿತಿ ಗಂಭೀರ

Telangana Four from two families killed three others injured in road accident near Elkathurthy
Published on

ನವದೆಹಲಿ: ಭೀಕರವಾದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಹನ್ಮಕೊಂಡ ಜಿಲ್ಲೆಯ ಎಲ್ಕತುರ್ಥಿ ಮಂಡಲದ ಶಾಂತಿ ನಗರದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. 

ಎದುರುಗಡೆಯಿಂದ ಬಂದ ಕಾರು ಹಾಗೂ ಲಾರಿ ಪರಸ್ಪರ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಏತೂರುನಗರದಿಂದ ವೇಮುಲವಾಡಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ನಡೆದಿದ್ದೇನು?: ಏತೂರುನಗರಂ ಮಂಡಲ ಕೇಂದ್ರದ ಮಂಟೆನ ಶಂಕರ್ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ವೇಮುಲವಾಡಕ್ಕೆ ಹೋಗುತ್ತಿದ್ದರು. ಮಾರ್ಗಮಧ್ಯೆ ಹನ್ಮಕೊಂಡ ಜಿಲ್ಲೆಯ ಎಲ್ಕತುರ್ಥಿ ಬಳಿ ಮರಳು ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಂಟೆನ ಕಾಂತಯ್ಯ (72), ಮಂಟೆನ ಶಂಕರ್ (60), ಮಂಟೆನ ಭರತ್ (29) ಮತ್ತು ಮಂಟೆನ ವಂದನಾ (16) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ತಕ್ಷಣ ಪೊಲೀಸರು ಗಾಯಾಳುಗಳನ್ನು ಚಿಕಿತ್ಸೆಗಾಗಿ ವಾರಂಗಲ್ ಎಂಜಿಎಂಗೆ ರವಾನಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಂಟೆನ ರೇಣುಕಾ (60), ಮಂಟೆನ ಭಾರ್ಗವ್ (30) ಮತ್ತು ಮಂಟೆನ ಶ್ರೀದೇವಿ (50) ಎಂಜಿಎಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಏತೂರುನಗರದಲ್ಲಿ ತಲ್ಲಣ ಮೂಡಿಸಿದೆ. ಮೃತರ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net