More

    ನಾಡಿನ ಹಿರಿಮೆ ಸಾರುವ ಮಹಾಯಾತ್ರೆ

    ಕನಕಗಿರಿ: ತಾಲೂಕಿನ ಗಡಿಗ್ರಾಮ ಹುಲಿಹೈದರಕ್ಕೆ ಸೋಮವಾರ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಯಿ ಭುವನೇಶ್ವರಿ ದೇವಿಗೆ ತಹಸೀಲ್ದಾರ್ ವಿಶ್ವನಾಥ ಮುರುಡಿ ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಿದರು.

    ನಂತರ ಮಾತನಾಡಿ, ಕರ್ನಾಟಕ ಎಂದು ನಾಮಕರಣಗೊಂಡ 50 ವಷರ್ಗಳ ಸವಿನೆನಪಿಗಾಗಿ ರಾಜ್ಯ ಸರ್ಕಾರ ಭುವನೇಶ್ವರಿ ತಾಯಿಯ ಜ್ಯೋತಿ ರಥಯಾತ್ರೆ ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಪ್ರತಿ ಹಳ್ಳಿಗೂ ತಲುಪಿಸುವ ಮಹಾಯಾತ್ರೆ ಕೈಗೊಂಡಿರುವುದು ಶ್ಲಾಘನಾರ್ಹ ಎಂದರು.

    ತಾಪಂ ಇಒ ಚಂದ್ರಶೇಖರ್ ಕಂದಕೂರ್, ಗ್ರೇಡ್2 ತಹಸೀಲ್ದಾರ್ ವಿ.ಎಚ್ ಹೊರಪೇಟಿ, ಶಿರಸ್ತೇದಾರ್ ಶರಣಪ್ಪ, ಸಿಡಿಪಿಒ ವಿರೂಪಾಕ್ಷಿ, ಪ್ರಮುಖರಾದ ರಮೇಶ ನಾಯಕ, ಕಂದಾಯ ಇಲಾಖೆ ಸಿಬ್ಬಂದಿ, ಗ್ರಾಪಂ ಸದಸ್ಯರು ಇದ್ದರು.

    ಕಲಾತಂಡಗಳ ಮೆರುಗು

    ಕನ್ನಡ ಜ್ಯೋತಿ ರಥಯಾತ್ರೆ ಮೆರವಣಿಗೆ ಕಲಾ ತಂಡಗಳ ಮೂಲಕ ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಾಗಿತು. ಕುಂಭ, ವಿಶೇಷವಾಗಿ 10ಕ್ಕೂ ಹೆಚ್ಚು ಎತ್ತಿನ ಬಂಡಿಗಳಲ್ಲಿ ಜಾನಪದ ಕಲಾ ತಂಡಗಳ ಪ್ರದರ್ಶನ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕನ್ನಡ ಪ್ರೇಮಿಗಳ ನೃತ್ಯ ಪ್ರದರ್ಶನ, ವಿವಿಧ ಹೋರಾಟಗಾರರ ವೇಷಭೂಷಣ ಗಮನಸೆಳೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts