More

    ಆಲ್ಕೋಹಾಲ್​ ಖರೀದಿಸಲು ಯುವತಿ ಮಾಡಿದ ಉಪಾಯ ಕೇಳಿದ್ರೆ ನೀವು ಬೆರಗಾಗ್ತೀರಾ…!

    ನ್ಯೂಯಾರ್ಕ್​: ಯಾವುದೇ ಗುರುತಿನ ಚೀಟಿ ಇಲ್ಲದೆಯೇ ಆಲ್ಕೋಹಾಲ್​ ಖರೀದಿಸಲು 18 ವರ್ಷದ ಯುವತಿಯೊಬ್ಬಳು ಮಾಡಿದ ಉಪಾಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಸೃಷ್ಟಿ ಮಾಡಿದೆ.

    ಇದನ್ನೂ ಓದಿ: ಸಂಗಾತಿಯನ್ನು ಉಳಿಸಿಕೊಳ್ಳುವಲ್ಲಿ ಕೊನೆಗೂ ಯಶಸ್ವಿಯಾದ ಹೋರಿ; ಮಾಡಿದ್ದಾದರೂ ಏನು?

    ಅಮೆರಿಕದ ಯುವತಿಯೊಬ್ಬಳು ಹಿರಿಯ ನಾಗರಿಕಳಂತೆ ವೇಷವನ್ನು ಬದಲಾಯಿಸಿಕೊಂಡು ಎಣ್ಣೆ ಖರಿದೀಸಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ವಿಡಿಯೋದಲ್ಲಿ ಯುವತಿ ವೈನ್​ ಸ್ಟೋರ್​ ಮುಂದೆ ವಾಹನ ನಿಲ್ಲಿಸಿ, ತನ್ನ ವೇಷಭೂಷಣ ಬದಲಾಯಿಸಿಕೊಂಡು ವಯಸ್ಸಾದಂತೆ ಕಾಣಲು ಕೂದಲಿಗೆ ಬಿಳಿ ಬಣ್ಣದ ಪೌಡರ್ ಮೆತ್ತಿಕೊಂಡು ಎಣ್ಣೆ ಖರೀದಿಸಿದ್ದಾಳೆ.

    ವಿಶೇಷವೆಂದರೆ ಕರೊನಾ ಲಾಕ್​ಡೌನ್​ ಮಾರ್ಗಸೂಚಿಯು ಸಹ ಯುವತಿಗೆ ವರವಾಗಿದೆ. ಮುಖಕ್ಕೆ ಮಾಸ್ಕ್​ ಹಾಕಿದ್ದರಿಂದ ಯಾರು ಗುರುತು ಹಿಡಿದಿಲ್ಲ. ತಮ್ಮ ಹದಿಹರೆಯದ ನೋಟವನ್ನು ಮರೆಮಾಚಲು ಕೈಕಾಲುಗಳಿಗೆ ಗ್ಲೌಸ್​ ಸಹ ಹಾಕಿಕೊಂಡಿದ್ದಳು. ​

    ಇದನ್ನೂ ಓದಿ: ಮುಂಬೈನ ಅತಿದುಬಾರಿ ಖರೀದಿ ಎನಿಸಿದ ಈ ಫ್ಲ್ಯಾಟ್​ಗಳ ಸ್ಟ್ಯಾಂಪ್​ ಡ್ಯೂಟಿ ಎಷ್ಟು ಗೊತ್ತಾ?

    ವೈರಲ್​ ಆಗಿರುವ ವಿಡಿಯೋ ಈಗಾಗಲೇ 20 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಗಿಟ್ಟಿಸಿದೆ. ಕೊನೆಗೂ ವೈನ್​ಶಾಪ್​ನಿಂದ ಆಲ್ಕೋಹಾಲ್​ ಪಡೆದಿರುವ ಯುವತಿ, ಇಷ್ಟೆಲ್ಲಾ ಮಾಡಿದ್ದು ತಮಾಷೆಗಾಗಿ ಎಂದು ಹೇಳಿದ್ದಾಳೆ. (ಏಜೆನ್ಸೀಸ್​)

    20 ಸೆಕೆಂಡ್‌ನಲ್ಲಿ ಬ್ಯಾಂಕ್‌ನಿಂದ 10 ಲಕ್ಷ ಎಗರಿಸಿದ ಬಾಲಕ! ಸಿಸಿಟಿವಿಯಲ್ಲಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts