More

    ಏರ್‌ಪೋರ್ಟ್ ಟರ್ಮಿನಲ್ ಪ್ರವೇಶಿಸಿದ ಟೆಕ್ಕಿ ಬಂಧನ; ಯಾಕೇ ಗೊತ್ತಾ..?

    ಬೆಂಗಳೂರು: ವಿಮಾನಕ್ಕೆ ಸ್ನೇಹಿತನನ್ನು ಹತ್ತಿಸಲು ನಕಲಿ ಟಿಕೆಟ್ ಬಳಸಿ ಟರ್ಮಿನಲ್ ಪ್ರವೇಶಿಸಿದ್ದ ಮಹಿಳಾ ಟೆಕ್ಕಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಪೊಲೀಸರು ಬಂಧಿಸಿದ್ದಾರೆ.

    ಇಂದಿರಾನಗರದಲ್ಲಿ ನೆಲೆಸಿರುವ, ಜಾರ್ಖಂಡ್ ಮೂಲದ ಹರ್‌ಪ್ರೀತ್ ಕೌರ್ ಸೈನಿ ಬಂಧಿತೆ. 26ರಂದು ಇಂಡಿಗೋ ವಿಮಾನದಲ್ಲಿ ಬೆಂಗಳೂರಿನಿಂದ ರಾಂಚಿಗೆ ಪ್ರಯಾಣಿಸಲು ಆಗಮಿಸಿದ್ದು, ಡಿಪಾರ್ಚರ್ ಗೇಟ್‌ನಲ್ಲಿ ಇ-ಟಿಕೆಟ್ ತೋರಿಸಿ ಟರ್ಮಿನಲ್ ಒಳಗೆ ಪ್ರವೇಶಿಸಿದ್ದರು. ಕೆಲ ನಿಮಿಷದ ಬಳಿಕ ವಾಪಸ್ ಬಂದ ಟೆಕ್ಕಿ, ಲ್ಯಾಪ್‌ಟಾಪ್ ಮರೆತಿರುವುದಾಗಿ ತಿಳಿಸಿ ಏರ್‌ಲೈನ್ಸ್ ಸಿಬ್ಬಂದಿಗೆ ಚೆಕ್‌ಇನ್ ಕೌಂಟರ್‌ಗೆ ಬಂದಿದ್ದರು. ಆಕೆಯ ಇ-ಟಿಕೆಟ್ ಪಡೆದ ಏರ್‌ಲೈನ್ಸ್ ಸಿಬ್ಬಂದಿ ಅನುಮಾನ ಬಂದು ಪರಿಶೀಲಿಸಿದಾಗ ನಕಲಿ ಎಂಬುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಏರ್‌ಲೈನ್ಸ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಹರ್‌ಪ್ರೀತ್ ಕೌರ್ ಸೈನಿ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಲಾಗಿದೆ.

    ಸ್ನೇಹಿತ ಆಯುಷ್ ಶರ್ಮ ಎಂಬಾತ ಬೆಂಗಳೂರಿನಿಂದ ರಾಂಚಿಗೆ ಪ್ರಯಾಣಿಸುತ್ತಿದ್ದ. ಆತನನ್ನು ವಿಮಾನದ ಬಳಿಗೆ ಬಿಟ್ಟು ಬರುವ ಸಲುವಾಗಿ ಇ-ಟಿಕೆಟ್ ಎಡಿಟ್ ಮಾಡಿಕೊಂಡು ನಕಲಿ ಇ-ಟಿಕೆಟ್ ಸೃಷ್ಟಿಸಿ ಅದನ್ನು ಬಳಸಿಕೊಂಡು ಭದ್ರತಾ ಸಿಬ್ಬಂದಿಗೆ ತೋರಿಸಿ ಟರ್ಮಿನಲ್ ಒಳಗೆ ಪ್ರವೇಶಿಸಿದ್ದಳು. ವಿಚಾರಣೆ ವೇಳೆ ಟೆಕ್ಕಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts