More

    ಟೀಮ್ ಇಂಡಿಯಾಗೆ ಕಪಿಲ್ ದೇವ್ ಕಾಲದ ಸಮವಸ್ತ್ರ ವಾಪಸ್! ರೆಟ್ರೋ ಜೆರ್ಸಿಯ ಝಲಕ್ ಪ್ರದರ್ಶಿಸಿದ ಧವನ್

    ಸಿಡ್ನಿ: ದಿಗ್ಗಜರಾದ ಕಪಿಲ್ ದೇವ್, ಸಚಿನ್ ತೆಂಡುಲ್ಕರ್ ಅವರ ಕಾಲದ ಜೆರ್ಸಿಯನ್ನು ಮತ್ತೊಮ್ಮೆ ತೊಡಲು ಟೀಮ್ ಇಂಡಿಯಾ ಸಜ್ಜಾಗಿದೆ. 1992ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಧರಿಸಿದ್ದ ಕಡುನೀಲಿ ಬಣ್ಣದ ಜೆರ್ಸಿ ಈ ಬಾರಿ ಮತ್ತೆ ಕಾಂಗರೂ ಪ್ರವಾಸದಲ್ಲೇ ಮರಳಿ ಬರಲಿದೆ. ಈ ಹೊಸ ಜೆರ್ಸಿಯ ಝಲಕ್ ಅನ್ನು ಟೀಮ್ ಇಂಡಿಯಾದ ಎಡಗೈ ಆರಂಭಿಕ ಶಿಖರ್ ಧವನ್ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸಿದ್ದಾರೆ.

    ನವೆಂಬರ್ 27ರಿಂದ ನಡೆಯಲಿರುವ ಸೀಮಿತ ಓವರ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಈ ರೆಟ್ರೋ ಜೆರ್ಸಿಯನ್ನು ಧರಿಸಿ ಆಡಲಿದೆ. ‘ಹೊಸ ಜೆರ್ಸಿ, ಹೊಸ ಚೈತನ್ಯವನ್ನೂ ಪಡೆದುಕೊಂಡಿದ್ದೇವೆ. ಕಣಕ್ಕಿಳಿಯಲು ಸಜ್ಜಾಗಿದ್ದೇವೆ’ ಎಂದು ಶಿಖರ್ ಧವನ್ ಹೊಸ ಜೆರ್ಸಿಯೊಂದಿಗೆ ತೆಗೆದಿರುವ ಸೆಲ್ಫಿಯನ್ನು ಟ್ವೀಟಿಸಿದ್ದಾರೆ.

    1992ರ ವಿಶ್ವಕಪ್‌ನಲ್ಲಿ ಕಪಿಲ್ ದೇವ್, ಆಗಿನ ಯುವ ಆಟಗಾರ ಸಚಿನ್ ತೆಂಡುಲ್ಕರ್, ಕೆ. ಶ್ರೀಕಾಂತ್, ರವಿಶಾಸ್ತ್ರಿ, ಮನೋಜ್ ಪ್ರಭಾಕರ್, ಮೊಹಮದ್ ಅಜರುದ್ದೀನ್, ಅಜಯ್​ ಜಡೇಜಾ, ಕಿರಣ್​ ಮೋರೆ ಅವರನ್ನೊಳಗೊಂಡ ಭಾರತ ತಂಡ ಈ ಕಡು ನೀಲಿ ಬಣ್ಣದ ಜೆರ್ಸಿಯೊಂದಿಗೆ ಆಡಿತ್ತು. 1992ರ ವಿಶ್ವಕಪ್‌ನಿಂದಲೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಬಣ್ಣದ ಜೆರ್ಸಿ ಶುರುವಾಗಿತ್ತು. ಹೀಗಾಗಿ ಇದು ಟೀಮ್ ಇಂಡಿಯಾದ ಮೊದಲ ಬಣ್ಣದ ಜೆರ್ಸಿಯೂ ಆಗಿದೆ. ಹೀಗಾಗಿ ಈ ಜೆರ್ಸಿ ಜತೆಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುವ ಕ್ರಿಕೆಟ್ ಪ್ರೇಮಿಗಳು, ಮತ್ತೆ ಅದೇ ಜೆರ್ಸಿ ಮರಳುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts