More

    ಹಲಗೂರಿನ ಲಯನ್ಸ್ ಕ್ಲಬ್‌ನಲ್ಲಿ ಶಿಕ್ಷಕರ ಕಾರ್ಯಾಗಾರ

    ಹಲಗೂರು: ಇಲ್ಲಿನ ಲಯನ್ಸ್ ಕ್ಲಬ್, ಡಿ.ಆರ್.ಗುರು ಶಿಷ್ಯರ ಬಳಗ ಮತ್ತು ಅಗತ್ಯ ಫೌಂಡೇಷನ್ ವತಿಯಿಂದ ನೂತನ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

    ಡಿ.ಆರ್.ಗುರು ಶಿಷ್ಯರ ಬಳಗದ ಅಧ್ಯಕ್ಷ ಎ.ಎಸ್.ದೇವರಾಜು ಮಾತನಾಡಿ, ಮಳವಳ್ಳಿ ತಾಲೂಕಿನಲ್ಲಿ ಹೊಸದಾಗಿ ಆಯ್ಕೆಯಾಗಿರುವ ಗ್ರಾಜುಯೆಟ್ ಪ್ರೈಮರಿ ಶಾಲೆಯ 94 ಶಿಕ್ಷಕರಿಗೆ ಎರಡು ದಿನಗಳ ಕಾರ್ಯಾಗಾರ ಹಮ್ಮಿ ಕೊಂಡಿದ್ದೇವೆ. ಇದರ ಉದ್ದೇಶವೇನೆಂದರೆ ಭಾಷಾ ವಿಷಯಗಳು ಹಾಗೂ ಸಮಾಜ ವಿಜ್ಞಾನ ಹೊರತುಪಡಿಸಿ ಗಣಿತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ಹೊಸದಾಗಿ ಇಲಾಖೆಗೆ ಸೇರಿರುವ ಇವರಿಗೆ ಕಲಿಕಾ ಉಪಕರಣಗಳ ತಯಾರಿಕೆ ಮಾಡುವುದರ ಬಗ್ಗೆ ತರಬೇತಿ ನೀಡಲಾಗುತ್ತದೆ. ನಂತರ ಅವರು ವಿದ್ಯಾರ್ಥಿಗಳಿಗೆ ವಿಜ್ಞಾನ ಬೋಧನೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆೆ ಎಂದರು.

    ತಾಲೂಕು ಶಿಕ್ಷಣ ಸಂಯೋಜಕ ಟಿ.ಎಂ.ರವಿಕುಮಾರ್ ಮಾತನಾಡಿ, ಗಣಿತ ಮತ್ತು ವಿಜ್ಞಾನಕ್ಕೆ ಎರಡನೇ ಸೆಮಿಸ್ಟರ್‌ಗೆ ಪಾಠಗಳು ಏನಿವೆ ಅದಕ್ಕೆ ಸಂಬಂಧಪಟ್ಟಂತೆ ಆರು ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಅಧ್ಯಾಯದಲ್ಲಿ ಏನು ಇದೆ ಅದರ ಪ್ರಯೋಗಗಳನ್ನು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಇಲ್ಲಿ ಕಲಿತ ಪ್ರಯೋಗಗಳನ್ನು ತರಗತಿಯಲ್ಲಿ ಮಕ್ಕಳಿಗೆ ಅರ್ಥವಾಗುವ ರೀತಿ ಶಿಕ್ಷಕರು ಬೋಧನೆ ಮಾಡಲಿದ್ದಾರೆ ಎಂದರು.

    ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್, ಖಜಾಂಜಿ ಬಿ.ಎಲ್.ಮಾದೇಗೌಡ, ಎನ್.ಕೆ.ಕುಮಾರ್, ಶ್ರೀನಿವಾಸ್, ಪ್ರಕಾಶ್, ಬಸವರಾಜು, ಶಿವರಾಜು, ಮಹೇಶ, ಗುರು ಶಿಷ್ಯರ ಬಳಗದ ರಾಜೇಶ್ವರಿ, ಅಗತ್ಯ ಫೌಂಡೇಷನ್‌ನ ಮುನಿರಾಜ್ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts