More

    ವೈಜ್ಞಾನಿಕ ಮನೋಭಾವ ಬೆಳೆಸುವ ವಿಜ್ಞಾನ ವಸ್ತುಪ್ರದರ್ಶನ

    ಹಲಗೂರು: ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಹಾಗೂ ಸಂಶೋಧನಾ ಮನೋಭಾವ ಬೆಳೆಯಲಿದೆ ಎಂದು ಮಳವಳ್ಳಿಯ ಶಿಕ್ಷಣ ಸಂಯೋಜನಾಧಿಕಾರಿ ರವಿಕುಮಾರ್ ಅಭಿಪ್ರಾಯಪಟ್ಟರು.

    ಇಲ್ಲಿನ ಸಂತೆ ಮೈದಾನದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ಎಂದರೆ ಒಂದು ಸಂಜೀವಿನಿಯಂತೆ. ಬದುಕಿನಲ್ಲಿ ನಮಗೆ ಜ್ಞಾನ ಹಾಗೂ ಸರಿಯಾದ ಪ್ರಜ್ಞೆ ಬರಬೇಕೆಂದರೆ ವಿಜ್ಞಾನದ ಅವಶ್ಯಕತೆ ಇದೆ. ವಿಜ್ಞಾನವು ಜ್ಞಾನದ ವಿಸ್ತಾರವನ್ನು ಹೆಚ್ಚಿಸುತ್ತದೆ. ನಮ್ಮಲ್ಲಿರುವ ಅಂಧಕಾರವನ್ನು ತೊಲಗಿಸುತ್ತದೆ. ಸಮಾಜವನ್ನು ಉತ್ತಮ ರೀತಿಯಲ್ಲಿ ನಡೆಸಲು ಅವಕಾಶ ಮಾಡಿಕೊಡುತ್ತದೆ ಎಂದು ಪ್ರತಿಪಾದಿಸಿದರು. ಮುಖ್ಯಶಿಕ್ಷಕಿ ಕಲಾವತಿ ಮಾತನಾಡಿ, ಮಕ್ಕಳಲ್ಲಿ ಮೂಢನಂಬಿಕೆ ತೊಲಗಿಸಿ ವೈಜ್ಞಾನಿಕ ಮನೋಭಾವ ಬೆಳೆಸಲು ಹಾಗೂ ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಲು ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿದೆ ಎಂದು ತಿಳಿಸಿದರು.ಶಿಕ್ಷಕರಾದ ಜಿ.ಎಸ್. ಕೃಷ್ಣ, ಪುಟ್ಟರಾಜು, ಕುಳ್ಳಯ್ಯ, ಬೋರಯ್ಯ, ಸುಂದ್ರಪ್ಪ, ಮಹಾದೇವಸ್ವಾಮಿ, ಬಿ.ಅಕ್ಷಿತಾ, ಕೆ.ಭಾಗ್ಯಾ, ಮಮತಾರಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts