More

    ಡಿಡಿಪಿಐ ಕಚೇರಿ ಎದುರು ಶಿಕ್ಷಕರ ಪ್ರತಿಭಟನೆ

    ಧಾರವಾಡ: ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದ ಶಿವಲಿಂಗೇಶ್ವರ ಪ್ರೌಢಶಾಲೆಯಲ್ಲಿ ನಡೆದ ಅವ್ಯವಹಾರ ತನಿಖೆಗೆ ಆಗ್ರಹಿಸಿ ಸಂಸ್ಥೆಯ ಶಿಕ್ಷಕರು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
    ಆಡಳಿತ ಮಂಡಳಿಯ ಅವ್ಯವಹಾರವನ್ನು ಎಳೆ ಎಳೆಯಾಗಿ ಬಹಿರಂಗಗೊಳಿಸಿದ ಹಿನ್ನೆಲೆಯಲ್ಲಿ 2018ರಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ನಿರಂತರವಾಗಿ ಗೈರು ಉಳಿದಿದ್ದಾರೆ ಎಂದು ತೋರಿಸಿ ವಜಾಗೊಳಿಸಲಾಗಿದೆ ಎಂದು ಆರೋಪಿಸಿದರು.
    ವಜಾಗೊಂಡ ಶಿಕ್ಷಕರು ಕಾರ್ಯನಿರ್ವಹಿಸಿದ ಬಗ್ಗೆ ದಾಖಲೆಗಳಿವೆ. ಆದರೆ, ನಮಗೆ ಹಾಜರಾತಿ ಪುಸ್ತಕವನ್ನು ನೀಡದೆ, ಎಲ್ಲರೂ ಗೈರಾಗಿದ್ದಾರೆ ಎಂದು ತೋರಿಸುತ್ತ ದಾರಿ ತಪ್ಪಿಸುವ ಕೆಲಸವಾಗುತ್ತಿದೆ ಎಂದು ದೂರಿದರು.
    ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲು ಪ್ರತಿ ಶಿಕ್ಷಕರಿಂದ 10,000 ರೂಪಾಯಿ ಪಡೆಯಲಾಗಿದೆ. ಇದನ್ನು ಬಯಲಿಗೆ ಎಳೆದಾಗ ಪ್ರಸ್ತಾವನೆ ಸ್ಥಗಿತಗೊಳಿಸಲಾಗಿತ್ತು. ಇದೆಲ್ಲ ಗೊತ್ತಿದ್ದರೂ ಉಪ ನಿರ್ದೇಶಕರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
    ಪ್ರತಿಭಟನೆಯಲ್ಲಿ ಎಫ್.ಎಸ್. ಅಮಾತಿಗೌಡ್ರ, ಬಿ.ಆರ್. ಅರಳಿ, ಎಸ್.ಪಿ. ಹಿರೇಹಾಳ, ಎಂ.ಎಚ್. ಗಾಝಿ, ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts