More

    ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ಬಂಧನ

    ಚೆನ್ನೈ : ಚೆನ್ನೈನ ಪ್ರಮುಖ ಶಾಲೆಯೊಂದರ ಕಾಮರ್ಸ್​ ಶಿಕ್ಷಕನನ್ನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಮಾಜಿ ವಿದ್ಯಾರ್ಥಿನಿಯೋರ್ವಳ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

    2014 ರಿಂದ 2016 ರ ನಡುವೆ ಸದರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿನಿಯೊಬ್ಬಳು ಆರೋಪಿ ಶಿಕ್ಷಕನು ತನ್ನನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾಗಿ ದೂರು ನೀಡಿದ್ದಳು. ಕಿಲ್​​ಪೌಕ್​ ಆಲ್ ವುಮೆನ್ ಪೊಲೀಸ್​ ಠಾಣೆಯ ತಂಡವು ಘಟನೆಯ ಬಗ್ಗೆ ತನಿಖೆ ಕೈಗೊಂಡು, ಸಂಬಂಧಿತ ಶಿಕ್ಷಕನನ್ನು ಬಂಧಿಸಿತು ಎನ್ನಲಾಗಿದೆ.

    ಇದನ್ನೂ ಓದಿ: ಲಾಕ್​ಡೌನ್ ವೇಳೆ ಸೀಜ್ ಆದ ವಾಹನಗಳ ರಿಲೀಸ್ ಪ್ರಕ್ರಿಯೆ ಶುರು

    ಇತ್ತೀಚೆಗೆ ಚೆನ್ನೈನ 5 ಶಾಲೆಗಳ ಶಿಕ್ಷಕರನ್ನು ಲೈಂಗಿಕ ಕಿರುಕುಳದ ಆರೋಪದ ಮೇಲೆ ಬಂಧಿಸಲಾಗಿದೆ ಇಲ್ಲವೇ ಸಸ್ಪೆಂಡ್​ ಮಾಡಲಾಗಿದೆ. ಆನ್​ಲೈನ್​ ತರಗತಿಗೆ ಟವಲ್​ ಸುತ್ತಿಕೊಂಡು ಬರುತ್ತಿದ್ದ ಶಿಕ್ಷಕನ ವಿರುದ್ಧ ಪ್ರತಿಷ್ಠಿತ ಶಾಲೆಯೊಂದರ ಹಾಲಿ ವಿದ್ಯಾರ್ಥಿಗಳು ಮತ್ತು ಅಲುಮ್ನಿ ಅಸೋಸಿಯೇಷನ್​ ದನಿ ಎತ್ತಿದ ಮೇಲೆ ಈ ಕಾರ್ಯಾಚರಣೆ ಆರಂಭವಾಗಿದೆ.

    ಆನ್​ಲೈನ್​ ತರಗತಿಗಳ ಸಂದರ್ಭದಲ್ಲೂ ಶಾಲಾ ಮಕ್ಕಳಿಗೆ ಅಸಂಬದ್ಧ ಚಿತ್ರಗಳನ್ನು ಮತ್ತು ಸಂದೇಶಗಳನ್ನು ಕಳುಹಿಸಿ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಆದ್ದರಿಂದ ವರ್ಚುವಲ್ ತರಗತಿಗಳನ್ನು ನಿಯಂತ್ರಿಸಲು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್​ ಹಲವು ನಿರ್ದೇಶನಗಳನ್ನು ನೀಡಿದ್ದಾರೆ. ಆನ್​ಲೈನ್​ ತರಗತಿಗಳನ್ನು ರೆಕಾರ್ಡ್​ ಮಾಡಿ ನಂತರ ಶಾಲಾ ಆಡಳಿತ ಮತ್ತು ಪಾಲಕರ ಸಂಘದ ಸದಸ್ಯರು ಅವನ್ನು ಆಗಾಗ್ಗೆ ಪರಾಮರ್ಶಿಸುವುದು ಈ ನಿಟ್ಟಿನಲ್ಲಿ ತೆಗೆದುಕೊಂಡಿರುವ ಒಂದು ಕ್ರಮವಾಗಿದೆ. (ಏಜೆನ್ಸೀಸ್)

    ಲಾಕ್​ಡೌನ್ ವೇಳೆ ಸೀಜ್ ಆದ ವಾಹನಗಳ ರಿಲೀಸ್ ಪ್ರಕ್ರಿಯೆ ಶುರು

    ಮಕ್ಕಳ ಮೇಲೆ ಕೋವಾಕ್ಸಿನ್ ಟ್ರಯಲ್ಸ್​ಗೆ ದೆಹಲಿ ಏಮ್ಸ್​ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts