More

    ಶಾಲಾ ಹಂತದಲ್ಲೇ ಸಂಸ್ಕಾರ ಕಲಿಸಿ

    ಕಡೂರು: ಶಾಲಾ ಹಂತದಲ್ಲೇ ಮಕ್ಕಳಿಗೆ ಸಂಸ್ಕಾರ ಕಲಿಸಿಕೊಡಬೇಕು ಎಂದು ರೋಟರಿ ಜಿಲ್ಲಾ ಗೌರ್ನರ್ ಬಿ.ಸಿ.ಗೀತಾ ತಿಳಿಸಿದರು.
    ಪಟ್ಟಣದ ರೋಟರಿ ಕ್ಲಬ್‌ನಲ್ಲಿ ರೋಟರಿ ಕ್ಲಬ್‌ನಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ಮತ್ತು ಲೇಖನ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣದ ಜತೆ ಮನೆಗಳಲ್ಲಿ ಮಕ್ಕಳಿಗೆ ಮೌಲ್ಯಯುತ ಜೀವನ ನಡೆಸುವ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದರು.
    ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ.ರಾಘವೇಂದ್ರ ಮಾತನಾಡಿ, ದಾನಿಗಳ ನೆರವಿನೊಂದಿಗೆ ಗ್ರಾಮೀಣ ಭಾಗದ 300 ಶಾಲಾ ಮಕ್ಕಳಿಗೆ ಪಠ್ಯಸಾಮಗ್ರಿ ನೀಡಲಾಗುತ್ತಿದೆ ಎಂದರು.
    ರೋಟರಿ ಸಹಾಯಕ ಗೌರ್ನರ್ ಕೆ.ಬಿ.ಅನಂತೇಗೌಡ, ಕಾರ್ಯದರ್ಶಿ ಸವಿತಾ ಸತ್ಯನಾರಾಯಣ್, ಬಿಇಒ ಸಿದ್ದರಾಜುನಾಯ್ಕ, ವಿಜಯ್‌ಕುಮಾರ್, ಟಿ.ಡಿ.ಸತ್ಯನ್, ಬಿ.ಶಿವಕುಮಾರ್, ಸುರೇಂದ್ರನಾಥ್, ಕಲ್ಲೇಶಪ್ಪ, ಪುಂಡಲೀಕರಾವ್, ವಿನುತಾಬಾಬು, ದ್ವಾರಕನಾಥಬಾಬು, ನಾಗೇಂದ್ರ, ಗೋಪಿಕಷ್ಣ, ಸುಬ್ರಹ್ಮಣ್ಯ, ರವಿಶಂಕರ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ತ್ರಿವೇಣಿ ರವಿ, ಜಮುನಾ ಭರತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts