ಮಕ್ಕಳಿಗೆ ಆಚಾರ, ಸಂಸ್ಕೃತಿ ಕಲಿಸಿಕೊಡಿ

Balagi, Basavaraja Yankanchi, Ganiga Samaj,

ಬೀಳಗಿ: ಗಾಣಿಗ ಸಮಾಜದ ಮುಖಂಡರು ಸಂಘಟಿತರಾಗಿ ಆರ್ಥಿಕವಾಗಿ ನೊಂದವರ ಪರ ನಿಲ್ಲಬೇಕು ಎಂದು ಬಿಜೆಪಿ ಬೆಳಗಾವಿ ವಿಭಾಗದ ಸಹ ಪ್ರಭಾರಿ ಬಸವರಾಜ ಯಂಕಂಚಿ ಹೇಳಿದರು.

ತಾಲೂಕು ಗಾಣಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ, ನೌಕರರ ಕ್ಷೇಮಾಭಿವೃದ್ಧಿ ಸಂಘ, ಯುವ ಘಟಕ, ಮಹಿಳಾ ಘಟಕ, ನಗರ ಘಟಕ ಮತ್ತು ಜ್ಯೋತಿ ಪತ್ತಿನ ಸಹಕಾರಿ ಸಂಘ ಸಹಯೋಗದಲ್ಲಿ ಶ್ರೀ ಸಿದ್ಧೇಶ್ವರ ದೇವಸ್ಥಾನ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡ ಗಾಣಿಗ ಸಮಾಜದ ಪ್ರತಿಭಾನ್ವಿತರಿಗೆ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸುವುದು ಅವಶ್ಯವಾಗಿದೆ. ಆದರೆ, ಅದರ ಜತೆ ನಮ್ಮ ಆಚಾರ, ಸಂಸ್ಕೃತಿಗಳು ಹಾಗೂ ನಮ್ಮತನವನ್ನು ಮಕ್ಕಳಿಗೆ ತಿಳಿಸುವುದು ಅಷ್ಟೇ ಅವಶ್ಯಕವಾಗಿದೆ ಎಂದರು.

ಬೀಳಗಿ ತಾಲೂಕು ಗಾಣಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಣಮಂತ ಸೂಳಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಣಿಗ ಸಮಾಜವು ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದೆ ಬರಬೇಕಾಗಿದೆ. ಸಮಾಜ ಬಾಂಧವರು ಎಷ್ಟೇ ಕಷ್ಟ ಬಂದರೂ ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಜತೆಗೆ ಮೌಲ್ಯಯುತ ಸಂಸ್ಕಾರ ನೀಡಬೇಕು ಎಂದರು.

ಅತಿ ಹೆಚ್ಚು ಅಂಕ ಗಳಿಸಿದ ಗಾಣಿಗ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದಲ್ಲಿನ ವಿಶೇಷ ಸಾಧಕರನ್ನು ಸನ್ಮಾನಿಸಲಾಯಿತು.

ಮನ್ನಿಕೇರಿ ದಿಗಂಬರೇಶ್ವರ ಸಂಸ್ಥಾನಮಠದ ನಿರ್ವಾಣ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ವಿಜಯಪುರ ಜಿಲ್ಲಾ ಗಾಣಿಗ ನೌಕರರ ಸಂಘದ ಅಧ್ಯಕ್ಷ ಸಿದ್ಧಲಿಂಗ ಚೌಧರಿ, ಡಾ. ಎಸ್.ಟಿ. ತೇಲಿ, ಶಿವಪ್ಪ ಅವಟಿ, ಕಾರ್ಯದರ್ಶಿ ಬಸವರಾಜ್ ಬಗಲಿ, ಶಿವಶಂಕರ ಚೂರಿ, ಡಾ. ಪ್ರಶಾಂತ ತೆಗ್ಗಿ, ಎಸ್.ಎನ್. ಗಾಣಿಗೇರ, ಡಿ.ಎಂ. ಸಾಹುಕಾರ, ಶೋಭಾ ಬಗಲಿ, ನಿಂಗಪ್ಪ ಹುಗ್ಗಿ, ಹಣಮಂತ ಮೆಳ್ಳಿಗೇರಿ ಇದ್ದರು.

Share This Article

ಮಗು ಜನಿಸಿದ ಎಷ್ಟು ತಿಂಗಳ ಬಳಿಕ ಉಪ್ಪಿನ ಆಹಾರ ನೀಡಬೇಕು?; ತಜ್ಞರು ಹೇಳೊದೇನು? | Salty Food

Salty Food : ಹುಟ್ಟಿದ ಮಗುವನ್ನು ದೊಡ್ಡದಾಗಿ ಬೆಳೆಯುವವರಿಗೂ ನೋಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಬಟ್ಟೆ…

ಸನ್‌ಸ್ಕ್ರೀನ್, ಸೀರಮ್‌ಗಳನ್ನು ಬಳಸುತ್ತೀರಾ? ಹಾಗಿದ್ರೆ ಕ್ಯಾನ್ಸರ್​​ ಬರಬಹುದು ಎಚ್ಚರ! Glow Skin

Glow Skin | ನಮ್ಮ ಸ್ಕಿನ್​ ಗ್ಲೋ ಆಗಿ ಕಾಣಬೇಕೆಂದು ಮಹಿಳೆಯರು ಮಾಡುವ ಪ್ರಯತ್ನ ಒಂದೆರಡಲ್ಲ.…

ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಕಾಲಿನಿಂದ ತುಳಿಯಬೇಡಿ!  ನೀವು ಖಂಡಿತವಾಗಿಯೂ ಆರ್ಥಿಕ ತೊಂದರೆಗೆ ಸಿಲುಕುವಿರಿ.. Vasthu Tips

Vasthu Tips: ಹಿರಿಯರು ಹೇಳಿದ್ದನ್ನು  ಅನೇಕ ಜನರು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ನಾವು ಕೆಲವು ವಸ್ತುಗಳನ್ನು ದೇವರು…