More

    ಪ್ಯಾಕೇಜ್​ನಲ್ಲಿ ತೆರಿಗೆ ಸುಧಾರಣೆ, ಟಿಡಿಎಸ್​-ಟಿಸಿಎಸ್​ನಲ್ಲಿ ಶೇ.25 ಕಡಿತ: ಹಣಕಾಸು ಸಚಿವೆ

    ನವದೆಹಲಿ: ಕೊವಿಡ್​-19ರ ಬಿಕ್ಕಟ್ಟು ನಿರ್ವಹಣೆಗೆ ಬಿಡುಗಡೆ ಮಾಡಲಾದ 20 ಲಕ್ಷ ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜ್​​ನ ಒಂದು ಭಾಗವಾಗಿ ತೆರಿಗೆ ಸುಧಾರಣೆ ಮಾಡಿದ್ದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಪ್ರಸಕ್ತ ಹಣಕಾಸು ವರ್ಷದಲ್ಲಿ ಟಿಡಿಎಸ್​​ (ಟ್ಯಾಕ್ಸ್​ ಡಿಡಕ್ಟೆಡ್​ ಅಟ್​ ಸೋರ್ಸ್​-ಮೂಲದಲ್ಲಿ ತೆರಿಗೆ ಕಡಿತ ) ಮತ್ತು ಟಿಸಿಎಸ್​( ಟ್ಯಾಕ್ಸ್​ ಕಲೆಕ್ಟೆಡ್​ ಅಟ್​ ಸೋರ್ಸ್​-ಮೂಲದಲ್ಲಿ ತೆರಿಗೆ ಸಂಗ್ರಹ) ದರವನ್ನು ಶೇ.25ಕ್ಕೆ ಇಳಿಸಲಾಗಿದೆ. ಇದರಿಂದ 50,000 ಕೋಟಿ ರೂಪಾಯಿ ಮೌಲ್ಯದ ದ್ರವ್ಯತೆ ಬಿಡುಗಡೆಯಾಗಿ, ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

    ಇದನ್ನೂ ಓದಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಉತ್ತೇಜನಕ್ಕೆಆರ್ಥಿಕ​ ಪ್ಯಾಕೇಜ್​​ ಮೂಲಕ 6 ಹೊಸ ಕ್ರಮಗಳು: ನಿರ್ಮಲಾ ಸೀತಾರಾಮನ್​

    ಟಿಡಿಎಸ್​ ಮತ್ತು ಟಿಸಿಎಸ್​ ಇಳಿಕೆ ನಾಳೆ (ಮೇ 14)ಯಿಂದಲೇ ಅನ್ವಯ ಆಗಲಿದ್ದು, 2021ರ ಮಾರ್ಚ್ 31ರವರೆಗೂ ಇರಲಿದೆ.

    ಹಾಗೆ ಪ್ರಸಕ್ತ ವರ್ಷದ ಆರ್ಥಿಕ ತೆರಿಗೆ ರಿಟರ್ನ್ಸ್​ ಸಲ್ಲಿಕೆಯ ಅವಧಿಯನ್ನು ಜು.31ರಿಂದ ನವೆಂಬರ್​ 30ಕ್ಕೆ ಮುಂದೂಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: 1.70 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್​ ಘೋಷಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts