More

    9 ಲಕ್ಷ ಕೋಟಿ ರೂಪಾಯಿ ದಾಟಿತು ಟಿಸಿಎಸ್ ಮಾರುಕಟ್ಟೆ ಮೌಲ್ಯ

    ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಟಾಟಾ ಕನ್ಸಲ್ಟೆನ್ಸ್ ಸರ್ವೀಸಸ್​ (ಟಿಸಿಎಸ್​)ನ ಮಾರುಕಟ್ಟೆ ಮೌಲ್ಯ 9 ಲಕ್ಷ ಕೋಟಿ ರೂಪಾಯಿ ದಾಟಿ ದಾಖಲೆ ನಿರ್ಮಿಸಿದೆ. 9 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯದ ದಾಟಿದ ಎರಡನೇ ಕಂಪನಿ ಇದಾಗಿದೆ. ಸೋಮವಾರ ಬೆಳಗ್ಗೆ ಷೇರುಪೇಟೆ ವಹಿವಾಟು ಆರಂಭವಾದ ಬೆನ್ನಿಗೇ ಟಿಸಿಎಸ್​ನ ಮಾರುಕಟ್ಟೆ ಮೌಲ್ಯ 9 ಲಕ್ಷ ಕೋಟಿ ರೂಪಾಯಿ ದಾಟಿದೆ.

    ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಸಿ)ನಲ್ಲಿ ಆರಂಭಿಕ ವಹಿವಾಟಿನಲ್ಲಿ ಟಿಸಿಎಸ್ ಷೇರಿನ ಮೌಲ್ಯ ಶೇಕಡ 2.91 ಏರಿಕೆಯಾಗಿ ಪ್ರತಿಷೇರಿನ ಬೆಲೆ 2,442.80 ಆಗಿತ್ತು. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​(ಎನ್​ಎಸ್​ಸಿ)ನಲ್ಲಿ ಪ್ರತಿ ಷೇರಿನ ಮೌಲ್ಯ ಶೇಕಡ 2.76 ಏರಿಕೆ ಆಗಿ ಬೆಲೆ 2,439.80 ರೂಪಾಯಿ ಆಗಿತ್ತು. ಷೇರುಬೆಲೆಯಲ್ಲಿನ ಈ ಏರಿಕೆಯು ಕಂಪನಿಯ ಮಾರುಕಟ್ಟೆ ಮೌಲ್ಯವನ್ನು 9 ಲಕ್ಷ ಕೋಟಿ ರೂಪಾಯಿಯ ಮೌಲಿಗಲ್ಲು ದಾಟುವಂತೆ ಮಾಡಿತು. ಆರಂಭಿಕ ವಹಿವಾಟಿನ ವೇಳೆ ಮಾರುಕಟ್ಟೆ ಮೌಲ್ಯ 9,14,606 .25 ಕೋಟಿ ರೂಪಾಯಿ ಆಗಿತ್ತು.

    ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಕೇಸ್​; ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರನಿಗೆ ಸಿಬಿಐ ಡ್ರಿಲ್

    ಇದಕ್ಕೂ ಮೊದಲು ರಿಲಯನ್ಸ್ ಇಂಡಸ್ಟ್ರೀಸ್​ ಲಿಮಿಟೆಡ್​ ಇಂಥ ಸಾಧನೆ ಮಾಡಿದೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಈ ಸಾಧನೆಯನ್ನು ಅದು ಮಾಡಿತ್ತು. ಪ್ರಸ್ತುತ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಮಾರುಕಟ್ಟೆ ಮೌಲ್ಯ 15,78,732.92 ಕೋಟಿ ರೂಪಾಯಿ. (ಏಜೆನ್ಸೀಸ್)

    ಸ್ಟ್ರಾಬೆರಿ ಕೃಷಿಕನ ಮಗ ಜಪಾನ್​ನ ನೂತನ ಪ್ರಧಾನಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts