More

    ಟಿಬಿ ನೀರು ನಿರ್ವಹಣೆಗಾಗಿ ಅಧಿಕಾರಿಗಳಿಗೆ ವಿಶೇಷ ಅಧಿಕಾರ

    ಮಸ್ಕಿ: ತುಂಗಭದ್ರ ನೀರು ಸಮರ್ಪಕ ನಿರ್ವಹಣೆಗಾಗಿ ನಿವೃತ್ತ ಮುಖ್ಯ ಇಂಜಿನಿಯರಿಂಗ್ ಎಸ್.ಎಚ್.ಮಂಜಪ್ಪರನ್ನು ವಿಶೇಷ ಕರ್ತವ್ಯ ಅಧಿಕಾರಿಯಾಗಿ ಸರ್ಕಾರ ನೇಮಿಸಿಕೊಂಡಿದೆ.

    ಇದನ್ನೂ ಓದಿ: ಟಿಬಿ ಡ್ಯಾಂನಿಂದ ಎಡದಂಡೆ ನಾಲೆಗೆ ನೀರು ಹರಿಸಿ

    ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ರೈತರಿಗೆ ವರದಾನವಾಗಿರುವ ತುಂಗಭದ್ರಾ ಎಡದಂಡೆ ಕಾಲುವೆಯ ನೀರು ನಿರ್ವಹಣೆ ಸಾವಾಲಿನ ಕೆಲಸವಾಗಿದೆ.

    ಪ್ರತಿವರ್ಷ ಸಕಾಲದಲ್ಲಿ ಮಳೆಯಾಗಿ ಅಗಷ್ಟ್ ತಿಂಗಳಲ್ಲಿ ತುಂಗಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿ ಹೆಚ್ಚುವರಿ ನಿರನ್ನು ನದಿ ಮೂಲಕ ಹೊರ ಹರಿಸಲಾಗುತ್ತಿತ್ತು.

    ಆದರೆ ಈ ಭಾರಿ ಮಳೆ ಆಗದೆ ರೈತರು ಕಂಗಾಲಾಗಿದ್ದಾರೆ. ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಕಡಿಮೆ ಆಗಿದ್ದು ಕೊನೆ ಭಾಗದ ರೈತರಿಗೆ ನೀರು ಕೊಡುವುದು ಕಷ್ಟವಾಗಿದೆ.

    ಕೆಳ ಭಾಗದ ರೈತರ ಹೋರಾಟ ತೀವ್ರವಾಗಿದ್ದು ಈಗಿರುವ ನೀರನ್ನು ಮಿತವಾಗಿ ಬಳಸಿ, ಅಚ್ಚುಕಟ್ಟಾಗಿ ರೈತರಿಗೆ ನೀರು ಹಂಚಿಕೆ ಮಾಡುವ ಜವಬ್ದಾರಿ ನೀರಾವರಿ ಇಲಾಖೆ ಮೇಲಿದೆ.

    ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಚೇರಿ ಮುನಿರಾಬಾದನಲ್ಲಿ ಖಾಯಂ ಮುಖ್ಯ ಇಂಜಿನಿಯರ ಇಲ್ಲ. ಪ್ರಭಾರ ಅಧಿಕಾರಿಗಳಿದ್ದು ತಜ್ಞ ಅಧಿಕಾರಿಗಳ ಕೊರತೆ ಇದೆ.

    ಅದಕ್ಕಾಗಿ ನೀರನ್ನು ಹರಿಸಲು ನೀರಾವರಿ ಇಲಾಖೆ ಹರಸಾಹಸ ಪಡುತ್ತಿದ್ದು ಇದನ್ನು ಮನಗಂಡಿರುವ ಸರ್ಕಾರ ಈ ಭಾಗದ ಸಚಿವರು, ಶಾಸಕರು ಸಂಸದರ ಒತ್ತಡಕ್ಕೆ ಮಣಿದು ಹಲವು ವರ್ಷಗಳ ಅನುಭವ ಇರುವ ಮುನಿರಾಬಾದನಲ್ಲಿ ಕೆಲಸ ಮಾಡಿರುವ ಅಧಿಕಾರಿ ಎಸ್.ಎಚ್.ಮಂಜಪ್ಪ ಅವರನ್ನು ಆರು ತಿಂಗಳ ಕಾಲ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ.

    ತುಂಗಭದ್ರಾ ಎಡದಂಡೆ ಕಾಲುವೆಯ ಮೇಲ ಭಾಗದಲ್ಲಿ ನೀರು ಕಳ್ಳತನವಾಗುತ್ತಿದ್ದು ಕೆಳ ಭಾಗದ ರೈತರಿಗೆ ಸರಿಯಾಗಿ ನೀರು ಮುಟ್ಟುತ್ತಿಲ್ಲ ಎಂಬ ಆರೋಪಗಳಿದ್ದು ಅದನ್ನು ಸರಿಪಡಿಸುವ ಕೆಲಸ ಮಾಡಲು ಸರ್ಕಾರ ಮುಂದಾಗುತ್ತಾ ಕಾದು ನೋಡಬೇಕಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts